
ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತ 181 ರನ್ ಗಳಿಸಿ ಗೆಲುವಿಗೆ 182 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟುದ ಇಂಗ್ಲೆಂಡ್ ತಂಡ 19.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 166 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಈ ಪಂದ್ಯವನ್ನು ಭಾರತ 15 ರನ್‌ಗಳಿಂದ ಗೆದ್ದುಕೊಂಡಿದಲ್ಲದೆ ಇಂಗ್ಲೆಂಡ್ ವಿರುದ್ಧ ತನ್ನ ಪಾರುಪತ್ಯವನ್ನು ಮುಂದವರೆಸಿದೆ.
ಪುಣೆ ಟಿ20 ಪಂದ್ಯವನ್ನೂ ಭಾರತ 15 ರನ್‌ಗಳಿಂದ ಗೆದ್ದು ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿದೆ. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 19 ರನ್‌ಗಳ ಅಗತ್ಯವಿದ್ದರೂ ಕೇವಲ 1 ವಿಕೆಟ್ ಮಾತ್ರ ಉಳಿದಿತ್ತು. ಅರ್ಷದೀಪ್ ಸಿಂಗ್ ಈ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು 166 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು.
ಹರ್ಷಿತ್ ರಾಣಾ ತಮ್ಮ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 9ನೇ ಹೊಡೆತ ನೀಡಿ ಗೆಲುವಿನ ಉಳಿದ ಭರವಸೆಯನ್ನು ಕೊನೆಗೊಳಿಸಿದರು. 19ನೇ ಓವರ್‌ನಲ್ಲಿ ಕೊನೆಯ ಎಸೆತದಲ್ಲಿ ಜೇಮಿ ಓವರ್ ಟನ್ (19) ಅವರನ್ನು ಹರ್ಷಿತ್ ಬೌಲ್ಡ್ ಮಾಡಿದರು.
19ನೇ ಓವರ್ ನಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ಜೇಮಿ ಓವರ್ ಟನ್ ನೀಡಿದ ಕ್ಯಾಚ್ ಅನ್ನು ಸಂಜು ಸ್ಯಾಮ್ಸನ್ ಕೈಬಿಟ್ಟರು.
ಇಂಗ್ಲೆಂಡ್‌ನ ಎಂಟನೇ ವಿಕೆಟ್ ಕೂಡ ಪತನಗೊಂಡಿದ್ದು, ರವಿ ಬಿಷ್ಣೋಯ್ ತಮ್ಮ ಕೊನೆಯ ಓವರ್‌ನಲ್ಲಿ ಜೋಫ್ರಾ ಆರ್ಚರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಈ ಹೊಡೆತವನ್ನು ನೀಡಿದರು.
ವರುಣ್ ಚಕ್ರವರ್ತಿ ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ತಂದಿದ್ದಾರೆ. ಬ್ರೂಕ್ ಅವರನ್ನು ಔಟ್ ಮಾಡಿದ ನಂತರ ವರುಣ್ ಬ್ರೇಡನ್ ಕಾರ್ಸೆ ವಿಕೆಟ್ ಪಡೆದರು.
ಹ್ಯಾರಿ ಬ್ರೂಕ್ ಅರ್ಧಶತಕ ಪೂರೈಸಿದ ತಕ್ಷಣ, ಮುಂದಿನ ಎಸೆತದಲ್ಲಿಯೇ ಕ್ಯಾಚ್ ಔಟ್ ಆದರು. ಮತ್ತೊಮ್ಮೆ ವರುಣ್ ಚಕ್ರವರ್ತಿ ಅವರನ್ನು ವಜಾಗೊಳಿಸಿದರು. ವರುಣ್ ಈ ಸರಣಿಯ 4 ಪಂದ್ಯಗಳಲ್ಲಿ 3 ರಲ್ಲಿ ಬ್ರೂಕ್ ವಿಕೆಟ್ ಪಡೆದಿದ್ದಾರೆ.
14ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಮೇಲೆ ದಾಳಿ ನಡೆಸಿದ ಹ್ಯಾರಿ ಬ್ರೂಕ್ ಆ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ 6, 6 ಮತ್ತು 4 ರನ್ ಕಲೆಹಾಕಿದರು.
ಇಂಗ್ಲೆಂಡ್‌ನ ನಾಲ್ಕನೇ ವಿಕೆಟ್ ಕೂಡ ಪತನವಾಗಿದ್ದು, ಲಿಯಾಮ್ ಲಿವಿಂಗ್‌ಸ್ಟನ್ ಔಟಾಗಿದ್ದಾರೆ. ಶಿವಂ ದುಬೆಗೆ ಕನ್ಕ್ಯುಶನ್ ಬದಲಿಯಾಗಿ ಬಂದ ವೇಗದ ಬೌಲರ್ ಹರ್ಷಿತ್ ರಾಣಾ ಎರಡನೇ ಎಸೆತದಲ್ಲಿ ವಿಕೆಟ್ ಪಡೆದರು. ಇದು ಹರ್ಷಿತ್ ಅವರ ಚೊಚ್ಚಲ ಟಿ20 ಪಂದ್ಯವೂ ಆಗಿದೆ.
ಇಂಗ್ಲೆಂಡ್ ಇನಿಂಗ್ಸ್‌ನ 10 ಓವರ್‌ಗಳು ಪೂರ್ಣಗೊಂಡಿದ್ದು, ತಂಡ 3 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಇನ್ನು ಮುಂದಿನ 10 ಓವರ್‌ಗಳಲ್ಲಿ 96 ರನ್‌ಗಳ ಅಗತ್ಯವಿದೆ.
3 ಓವರ್‌ಗಳಲ್ಲಿ ಇಂಗ್ಲೆಂಡ್ ಮೂರನೇ ವಿಕೆಟ್ ಕಳೆದುಕೊಂಡಿದ್ದು, ಈ ವೇಳೆ ನಾಯಕ ಜೋಸ್ ಬಟ್ಲರ್ ಔಟಾಗಿದ್ದಾರೆ. ಟೀಂ ಇಂಡಿಯಾಗೆ ಮತ್ತೊಮ್ಮೆ ಈ ಯಶಸ್ಸು ತಂದುಕೊಟ್ಟವರು ರವಿ ಬಿಷ್ಣೋಯ್.
ವೇಗದ ಆರಂಭದ ನಂತರ ಇಂಗ್ಲೆಂಡ್ ಸತತವಾಗಿ ಇಬ್ಬರೂ ಆರಂಭಿಕರ ವಿಕೆಟ್ ಕಳೆದುಕೊಂಡಿತು. ಆರನೇ ಓವರ್‌ನಲ್ಲಿ ಬೆನ್ ಡಕೆಟ್ (23) ಮತ್ತು ಏಳನೇ ಓವರ್‌ನಲ್ಲಿ ಫಿಲ್ ಸಾಲ್ಟ್ (23) ಕೂಡ ಔಟಾದರು.
ಇಂಗ್ಲೆಂಡ್ ತಂಡವು 62 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ರವಿ ಎಸೆತದಲ್ಲಿ ಬೆನ್ ಡಕೆಟ್ ಸೂರ್ಯನಿಗೆ ಕ್ಯಾಚ್ ನೀಡಿ ಔಟಾದರು. ಜೋಸ್ ಬಟ್ಲರ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದಾರೆ.
ಬೆನ್ ಡಕೆಟ್ ಮತ್ತೊಮ್ಮೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾವನ್ನು ಕಾಡುತ್ತಿದ್ದಾರೆ. ಮೂರನೇ ಓವರ್‌ನಲ್ಲಿ ಅರ್ಷ್‌ದೀಪ್ ಮೇಲೆ ಸತತ 3 ಬೌಂಡರಿಗಳನ್ನು ಬಾರಿಸಿದರು ಮತ್ತು ನಂತರದ ಓವರ್‌ನಲ್ಲಿ ವರುಣ್ ಚಕ್ರವರ್ತಿ ಮೇಲೆ ಬೌಂಡರಿ ಬಾರಿಸಿದರು.
ಇಂಗ್ಲೆಂಡ್ 182 ರನ್ ಗಳ ಗುರಿ ಬೆನ್ನಟ್ಟಲು ಆರಂಭಿಸಿದ್ದು, ಕೇವಲ 2 ಓವರ್‌ಗಳಲ್ಲಿ 19 ರನ್‌ಗಳನ್ನು ಕಲೆಹಾಕಿದೆ.
ಭಾರತ ನೀಡಿದ 182 ರನ್ ಗಳ ಗುರಿ ಬೆನ್ನತ್ತಲು ಇಂಗ್ಲೆಂಡ್ ಸಜ್ಜಾಗಿದೆ. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಕ್ರೀಸ್‌ನಲ್ಲಿದ್ದಾರೆ.
ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿದೆ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಎರಡನೇ ರನ್ ಗಳಿಸುವ ಪ್ರಯತ್ನದಲ್ಲಿ ಶಿವಂ ದುಬೆ ರನ್ ಔಟ್ ಆದರು. ಜೇಮಿ ಓವರ್ಟನ್ ಅವರ ಈ ಕೊನೆಯ ಓವರ್‌ನಲ್ಲಿ ಕೇವಲ 3 ರನ್ ನೀಡಿ 3 ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ ನಂತರ ಶಿವಂ ದುಬೆ ಕೂಡ ಅರ್ಧಶತಕ ದಾಖಲಿಸಿದ್ದಾರೆ. ಶಿವಂ ಕೇವಲ 31 ಎಸೆತಗಳಲ್ಲಿ ಸತತ 2 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು.
ಕಳೆದ ಪಂದ್ಯದಲ್ಲಿ ಸೋಲಿನ ಹೊಣೆ ಹೊತ್ತಿದ್ದ ಹಾರ್ದಿಕ್ ಪಾಂಡ್ಯ ದಿಟ್ಟ ಉತ್ತರ ನೀಡಿ ಕೇವಲ 27 ಎಸೆತಗಳಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ್ದಾರೆ. ಹಾರ್ದಿಕ್ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು.
ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ದಾಳಿ ಆರಂಭಿಸಿದ್ದು, 14ನೇ ಓವರ್‌ನಲ್ಲಿ ಟೀಂ ಇಂಡಿಯಾವನ್ನು 100 ರನ್‌ಗಳ ಗಡಿ ದಾಟಿಸಿದ್ದಾರೆ.
ರಿಂಕು ಸಿಂಗ್ (30) ಕೂಡ ಪೆವಿಲಿಯನ್ ಗೆ ಮರಳಿದ್ದು, ಟೀಂ ಇಂಡಿಯಾ ಐದನೇ ವಿಕೆಟ್ ಕಳೆದುಕೊಂಡಿದೆ.
ಟೀಮ್ ಇಂಡಿಯಾದ ಅರ್ಧದಷ್ಟು ಇನ್ನಿಂಗ್ಸ್ ಮುಗಿದಿದೆ ಅಂದರೆ ಅದರ 10 ಓವರ್‌ಗಳು ಪೂರ್ಣಗೊಂಡಿವೆ. ಈ 10 ಓವರ್‌ಗಳ ನಂತರ ಟೀಂ ಇಂಡಿಯಾ ಸ್ಕೋರ್ ಕೇವಲ 72 ರನ್ ಆಗಿದ್ದು, 4 ವಿಕೆಟ್‌ಗಳು ಬಿದ್ದಿವೆ. ರಿಂಕು ಮತ್ತು ಶಿವಂ ದುಬೆ ಕ್ರೀಸ್‌ನಲ್ಲಿದ್ದಾರೆ.
ಟೀಂ ಇಂಡಿಯಾ ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದು, ಅಭಿಷೇಕ್ ಶರ್ಮಾ (29) ಕೂಡ ಪೆವಿಲಿಯನ್ಗೆ ಮರಳಿದ್ದಾರೆ. 8ನೇ ಓವರ್‌ನಲ್ಲಿ ಬಂದ ಆದಿಲ್ ರಶೀದ್ ಎರಡನೆ ಎಸೆತದಲ್ಲಿ ಅಭಿಷೇಕ್ ಕ್ಯಾಚಿತ್ತು ನಿರ್ಗಮಿಸಿದರು.
ಭಾರತದ ಇನ್ನಿಂಗ್ಸ್‌ನ 7 ಓವರ್‌ಗಳು ಪೂರ್ಣಗೊಂಡಿದ್ದು, ತಂಡವೂ 50ರ ಗಡಿ ದಾಟಿದೆ. ರಿಂಕು ಮತ್ತು ಅಭಿಷೇಕ್ ಕ್ರೀಸ್‌ನಲ್ಲಿ ನಿಂತಿದ್ದಾರೆ.
ಎರಡನೇ ಓವರ್‌ನಲ್ಲಿ 3 ವಿಕೆಟ್‌ಗಳ ಪತನದ ನಂತರ, ರಿಂಕು ಸಿಂಗ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರಿಬ್ಬರೂ ತಂಡಕ್ಕೆ ಬಲಿಷ್ಠ ಜೊತೆಯಾಟವನ್ನು ನೀಡಿದ್ದಾರೆ. ಪವರ್‌ಪ್ಲೇ ಅಂತ್ಯಕ್ಕೆ ಭಾರತದ ಸ್ಕೋರ್ 47 ರನ್ ಆಗಿದೆ.
ಸಾಕಿಬ್ ಮಹಮೂದ್ ತಮ್ಮ ಮೊದಲ ಓವರ್ ನಲ್ಲೇ 3 ವಿಕೆಟ್ ಕಬಳಿಸಿ ಸಂಚಲನ ಮೂಡಿಸಿದರು. ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ನಂತರ ಮಹಮೂದ್ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (0) ಅವರ ವಿಕೆಟ್ ಪಡೆದರು.
ಸಾಕಿಬ್ ಮಹಮೂದ್ ಸತತ 2 ಎಸೆತಗಳಲ್ಲಿ 2 ವಿಕೆಟ್ ಪಡೆದರು. ಸ್ಯಾಮ್ಸನ್ ಔಟಾದ ಬಳಿಕ ಬಂದ ತಿಲಕ್ ವರ್ಮಾ (0) ಮೊದಲ ಎಸೆತದಲ್ಲಿಯೇ ಕ್ಯಾಚಿತ್ತು ಔಟಾದರು.
ಎರಡನೇ ಓವರ್ ನ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ (1) ಔಟಾದರು. ಸರಣಿಯಲ್ಲಿ ಮೊದಲ ಪಂದ್ಯವಾಡುತ್ತಿದ್ದ ವೇಗಿ ಸಾಕಿಬ್ ಮಹಮೂದ್ ಎಸೆತದಲ್ಲಿ ಸಂಜು ವಿಕೆಟ್ ಒಪ್ಪಿಸಿದರು.
ಜೋಸ್ ಬಟ್ಲರ್, ಫಿಲ್ ಸಾಲ್ಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥಾಲ್, ಲಿಯಾಮ್ ಲಿವಿಂಗ್‌ಸ್ಟನ್, ಜೇಮಿ ಓವರ್‌ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.
ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ.
ಟಾಸ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 6:34 pm, Fri, 31 January 25