IND vs IRE: ಭಾರತ-ಐರ್ಲೆಂಡ್ ಟಿ20 ಸರಣಿ 7 ಗಂಟೆಗೆ ಶುರುವಾಗಲ್ಲ: ಹಾಗಿದ್ರೆ ಎಷ್ಟು ಗಂಟೆಗೆ?, ಇಲ್ಲಿದೆ ಎಲ್ಲ ಮಾಹಿತಿ

| Updated By: Vinay Bhat

Updated on: Jun 21, 2022 | 12:04 PM

India vs Ireland T20I series: ಎರಡು ಟಿ20 ಐರ್ಲೆಂಡ್​ನಲ್ಲಿ ನಡೆಯುವುದರಿಂದ ಪಂದ್ಯ ಆರಂಭದ ಸಮಯದಲ್ಲಿ ಬದಲಾವಣೆ ಆಗಲಿದೆ. ಹಾಗಾದ್ರೆ ಭಾರತ - ಐರ್ಲೆಂಡ್ ಟಿ20 ಸರಣಿ ಎಷ್ಟು ಗಂಟೆಗೆ ಪಂದ್ಯ ಆರಂಭ?, ಎಲ್ಲಿ ನಡೆಯಲಿದೆ, ಯಾವುದರಲ್ಲಿ ನೇರಪ್ರಸಾರ?, ಇಲ್ಲಿದೆ ಸಂಪೂರ್ಣ ಮಾಹಿತಿ.

IND vs IRE: ಭಾರತ-ಐರ್ಲೆಂಡ್ ಟಿ20 ಸರಣಿ 7 ಗಂಟೆಗೆ ಶುರುವಾಗಲ್ಲ: ಹಾಗಿದ್ರೆ ಎಷ್ಟು ಗಂಟೆಗೆ?, ಇಲ್ಲಿದೆ ಎಲ್ಲ ಮಾಹಿತಿ
India vs Ireland T20I series
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಸಮಬಲಗೊಂಡ ಬಳಿಕ ಯಂಗ್ ಇಂಡಿಯಾ ಇದೀಗ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಭಾರತದ ಅನುಭವಿ ಆಟಗಾರರ ತಂಡ ಇಂಗ್ಲೆಂಡ್​ಗೆ ತೆರಳಿದರೆ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಭಾರತದ ಯುವ ತಂಡ ಕೆಲವೇ ದಿನಗಳಲ್ಲಿ ಐರ್ಲೆಂಡ್​​ಗೆ ತೆರಳಲಿದೆ. ಉಪ ನಾಯಕನಾಗಿ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ. ಬಹುತೇಕ ಯುವ ಆಟಗಾರರೇ ತಂಡದಲ್ಲಿದ್ದು, ಇದೇ ಮೊದಲ ಬಾರಿಗೆ ರಾಹುಲ್ ತ್ರಿಪಾಠಿ ಅವಕಾಶ ಪಡೆದುಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ದೃಷ್ಟಿಯಿಂದ ಅನೇಕ ಆಟಗಾರರಿಗೆ ಈ ಸರಣಿ ಬಹುಮುಖ್ಯವಾಗಿದೆ. ಎರಡು ಟಿ20 ಐರ್ಲೆಂಡ್​ನಲ್ಲಿ ನಡೆಯುವುದರಿಂದ ಪಂದ್ಯ ಆರಂಭದ ಸಮಯದಲ್ಲಿ ಬದಲಾವಣೆ ಆಗಲಿದೆ. ಹಾಗಾದ್ರೆ ಎಷ್ಟು ಗಂಟೆಗೆ ಪಂದ್ಯ ಆರಂಭ?, ಎಲ್ಲಿ ನಡೆಯಲಿದೆ, ಯಾವುದರಲ್ಲಿ ನೇರಪ್ರಸಾರ?, ಇಲ್ಲಿದೆ ಸಂಪೂರ್ಣ ಮಾಹಿತಿ.

4 ವರ್ಷಗಳ ಬಳಿಕ ಪ್ರವಾಸ:

ಹೌದು, ಟೀಮ್ ಇಂಡಿಯಾ ನಾಲ್ಕು ವರ್ಷಗಳ ಬಳಿಕ ಐರ್ಲೆಂಡ್​​ಗೆ ತೆರಳುತ್ತಿದೆ. ಇದಕ್ಕೂ ಮುನ್ನ 2018ರಲ್ಲಿ ಭಾರತ ಮೊದಲ ಬಾರಿಗೆ ಐರಿಷ್ ಪಡೆಯನ್ನು ಎದುರಿಸಿತ್ತು. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಐರ್ಲೆಂಡ್ ವಿರುದ್ಧ ಕೇವಲ ಮೂರು ಪಂದ್ಯಗಳನ್ನು ಮಾತ್ರವೇ ಆಡಿದೆ. ಇದರಲ್ಲಿ ಭಾರತವೇ ಗದ್ದು ಬೀಗಿದೆ. 2009ರ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿತ್ತು.

ಇದನ್ನೂ ಓದಿ
Rahul Tewatia: ರಾಹುಲ್ ತೇವಾಟಿಯ ಮೈಚಳಿ ಬಿಡಿಸಿದ ದಕ್ಷಿಣ ಆಫ್ರಿಕಾ ಆಟಗಾರ: ಯಾಕೆ ಗೊತ್ತೇ?
ENG vs IND: ಕೊಹ್ಲಿ-ರೋಹಿತ್ ಫೋಟೋ ವೈರಲ್: ಆಂಗ್ಲರ ನಾಡಲ್ಲಿ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ
R. Ashwin: ಆರ್. ಅಶ್ವಿನ್​ಗೆ ಕೋವಿಡ್-19 ಪಾಸಿಟಿವ್: ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್
IND vs IRE: ಐರ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ

ಯಾವಾಗ?, ಎಷ್ಟು ಗಂಟೆಗೆ?:

ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಎರಡು ಪಂದ್ಯಗಳ ಟಿ20 ಸರಣಿ ಜೂನ್ 26 ಹಾಗೂ ಜೂನ್ 28 ರಂದು ಆಯೋಜಿಸಲಾಗಿದೆ. ಎರಡು ಪಂದ್ಯಗಳು ಕೂಡ ಡಬ್ಲಿನ್‌ನ ‘ದಿ ವಿಲೇಜ್’ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಎರಡೂ ಪಂದ್ಯ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಈ ಹಿಂದೆ ಭಾರತದಲ್ಲಿ ನಡೆದ ಪಂದ್ಯ 7 ಗಂಟೆಗೆ ಶುರುವಾಗಿತ್ತು. ಇದು ಎರಡು ಗಂಟೆ ತಡವಾಗಿ ಆರಂಭವಾಗಲಿದೆ.

Andre Russell Wife: ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಿದೆ ಆಂಡ್ರೆ ರಸೆಲ್ ಪತ್ನಿಯ ಹಾಟ್ ಬಿಕಿನಿ ಫೋಟೋ

ನೇರಪ್ರಸಾರ:

ಇನ್ನು ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ನೇರಪ್ರಸಾರವನ್ನು ಸೋನಿ ನೆಟ್‌ವರ್ಕ್​​ನಲ್ಲಿ ಲೈವ್ ವೀಕ್ಷಿಸಬಹುದು. ಸೋನಿ ಸಿಕ್ಸ್ ಹಾಗೂ ಸೋನಿ ಸಿಕ್ಸ್ ಹೆಚ್‌ಡಿ ಚಾನೆಲ್‌ನಲ್ಲಿ ಈ ಪ್ರಸಾರವಾಗಲಿದೆ. ಅಲ್ಲದೆ ಆನ್​ಲೈನ್​ನಲ್ಲಿ ವೀಕ್ಷಿಸುವವರು ಸೋನಿ ಲಿವ್‌ ಮೂಲಕ ಲೈವ್ ಸ್ಟ್ರೀಮ್ ಕಾಣಲಿದೆ.

ಭಾರತ ತಂಡ:

ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯಿ, ಹರ್ಷಲ್ ಪಟೇಲ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್

ಐರ್ಲೆಂಡ್ ತಂಡ:

ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.