Virat Test Debut: ಟೆಸ್ಟ್ ಬದುಕಿಗೆ 11ರ ಸಂಭ್ರಮ; ವಿಶೇಷ ವಿಡಿಯೋ ಹಂಚಿಕೊಂಡ ಕಿಂಗ್ ಕೊಹ್ಲಿ

Virat kohli Test Debut: ಕೊಹ್ಲಿ ವಿಶೇಷ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಅನೇಕ ಫೋಟೋಗಳನ್ನು ವಿಡಿಯೋ ಮುಖಾಂತರ ಹಂಚಿಕೊಂಡಿದ್ದಾರೆ.

Virat Test Debut: ಟೆಸ್ಟ್ ಬದುಕಿಗೆ 11ರ ಸಂಭ್ರಮ; ವಿಶೇಷ ವಿಡಿಯೋ ಹಂಚಿಕೊಂಡ ಕಿಂಗ್ ಕೊಹ್ಲಿ
ವಿರಾಟ್ ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Jun 20, 2022 | 8:38 PM

ಸದ್ಯ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಹೆಸರು ಇದೆ. ಈ ಬ್ಯಾಟ್ಸ್‌ಮನ್ ಮೈದಾನಕ್ಕೆ ಕಾಲಿಟ್ಟಾಗಿನಿಂದ ಪ್ರತಿದಿನ ವಿಶೇಷ ದಾಖಲೆಗೆ ಕೊರಳೊಡ್ಡಿದ್ದಾರೆ. ಏಕದಿನ ಅಥವಾ ಟೆಸ್ಟ್ ಅಥವಾ ಟಿ20 ಇರಲಿ, ವಿರಾಟ್ ಎಲ್ಲೆಡೆ ಪ್ರಾಬಲ್ಯ ಸಾಧಿಸಿದ್ದಾರೆ. ಇಂದಿನ ದಿನಾಂಕ ಅಂದರೆ ಜೂನ್ 20 ಈ ಬ್ಯಾಟ್ಸ್‌ಮನ್‌ಗೆ ತುಂಬಾ ವಿಶೇಷವಾಗಿದೆ. ಈ ವಿಶೇಷ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೂಡ ವಿಶೇಷ ಟ್ವೀಟ್ ಮಾಡಿದ್ದಾರೆ. ಇದು ವಿರಾಟ್ ಕೊಹ್ಲಿ ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ಅಂದರೆ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ದಿನಾಂಕವಾಗಿದೆ. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇದೇ ದಿನಾಂಕದಂದು ಕೊಹ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರ ಚೊಚ್ಚಲ ಪಂದ್ಯ ಕಿಂಗ್‌ಸ್ಟನ್‌ನಲ್ಲಿ ನಡೆಯಿತು. ಅಂದಿನಿಂದ ಇಂದಿನವರೆಗೆ, ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿಯನ್ನು ಸಹ ಸೇರಿಸಲಾಗಿದೆ. ಕೊಹ್ಲಿ ಆಟವನ್ನು ನೋಡಿದ ಕ್ರಿಕೆಟ್ ಪಂಡಿತರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಗಳನ್ನು ಮುರಿಯುತ್ತಾರೆ ಎಂಬ ಅಭಿಪ್ರಾಯ ಮಂಡಿಸಿದ್ದಾರೆ.

ಈ ಸಂದರ್ಭದಲ್ಲಿ, ಕೊಹ್ಲಿ ವಿಶೇಷ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಅನೇಕ ಫೋಟೋಗಳನ್ನು ವಿಡಿಯೋ ಮುಖಾಂತರ ಹಂಚಿಕೊಂಡಿದ್ದಾರೆ. ಇದಕ್ಕೆ “ಟೈಮ್ ಫ್ಲೈಸ್” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕೊಹ್ಲಿ ಟೆಸ್ಟ್ ಪದಾರ್ಪಣೆ ಮಾಡಿದರು. ಈ ಪಂದ್ಯವನ್ನು ಭಾರತ 63 ರನ್‌ಗಳಿಂದ ಗೆದ್ದುಕೊಂಡಿತು. ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್ ಗಳಿಸಿ, ಫಿಡೆಲ್ ಎಡ್ವರ್ಡ್ಸ್​ಗೆ ಬಲಿಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್ ಗಳಿಸಿ, ಈ ಬಾರಿಯೂ ಎಡ್ವರ್ಡ್ಸ್‌ಗೆ ಬಲಿಯಾದರು. ಪ್ರಸ್ತುತ ಈ ಪಂದ್ಯದಲ್ಲಿ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾಗಿದ್ದರು. ದ್ರಾವಿಡ್ ಮೊದಲ ಇನ್ನಿಂಗ್ಸ್‌ನಲ್ಲಿ 40 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 112 ರನ್ ಗಳಿಸಿದ್ದರು.

ಇದನ್ನೂ ಓದಿ
Image
Shabaash Mithu Trailer: ಶಭಾಷ್ ಮಿಥು ಸಿನಿಮಾದ ಟ್ರೇಲರ್ ಬಿಡುಗಡೆ; ಮಿಥಾಲಿ ರಾಜ್ ಬಯೋಪಿಕ್​ನಲ್ಲಿ ಮಿಂಚಿದ ತಾಪ್ಸಿ
Image
Virat Test Debut: ವಿರಾಟ್ ಟೆಸ್ಟ್ ಬದುಕಿಗೆ ಭರ್ತಿ 11 ವರ್ಷ! ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್​ಗಳಿವು
Image
ವಿಶ್ವಕಪ್​ನಲ್ಲಿ ಸಚಿನ್- ಸೆಹ್ವಾಗ್ ವಿಕೆಟ್ ಕಬಳಿಸಿದ್ದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ಹಠಾತ್ ವಿದಾಯ..!

ಈ ದಿನಾಂಕ ವಿಶೇಷವಾಗಿದೆ

ಆದಾಗ್ಯೂ, ಜೂನ್ 20 ಭಾರತೀಯ ಕ್ರಿಕೆಟ್‌ಗೆ ವಿಶೇಷ ದಿನಾಂಕವಾಗಿದೆ. ಈ ದಿನಾಂಕದಂದು ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದು ಮಾತ್ರವಲ್ಲದೆ, ಇಬ್ಬರು ದಿಗ್ಗಜ ಆಟಗಾರರು ಇದೇ ದಿನಾಂಕದಂದು ಭಾರತಕ್ಕಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. 20 ಜೂನ್ 1996 ರಂದು, ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದ ಹಾಗೂ ಪ್ರಸ್ತುತ BCCI ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಪಾದಾರ್ಪಣೆ ಮಾಡಿದರು. ಜೊತೆಗೆ ಈ ಪಂದ್ಯದಲ್ಲಿ ದ್ರಾವಿಡ್ ಕೂಡ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಗಂಗೂಲಿ ಲಾರ್ಡ್ಸ್‌ನಲ್ಲಿ ಚೊಚ್ಚಲ ಶತಕ ಬಾರಿಸಿದರೆ ದ್ರಾವಿಡ್ ಶತಕ ವಂಚಿತರಾದರು.

ಇದನ್ನೂ ಓದಿ:Virat Kohli: ಮಡದಿ, ಮಗಳೊಂದಿಗೆ ರಜೆ ಮುಗಿಸಿ ಬಂದ ಕೊಹ್ಲಿ ಸೀದಾ ಹೋಗಿದ್ದು ಆಸ್ಪತ್ರೆಗೆ..! ಕಾರಣವೇನು?

ಕೊಹ್ಲಿಯ ವೃತ್ತಿಜೀವನ ಹೀಗಿದೆ

ನಾವು ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನವನ್ನು ನೋಡಿದರೆ, ಅವರು ಆಟದ ಸುದೀರ್ಘ ಸ್ವರೂಪದಲ್ಲಿ 101 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 49.95 ಸರಾಸರಿಯಲ್ಲಿ 8043 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ವಿರಾಟ್ 27 ಶತಕ ಮತ್ತು 28 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆದರೆ, ಕೊಹ್ಲಿ ಇತ್ತೀಚೆಗೆ ಸುದೀರ್ಘ ಕಾಲ ಶತಕ ಗಳಿಸಲಾಗದೆ ಒದ್ದಾಡುತ್ತಿದ್ದಾರೆ. 2019 ರಿಂದ ಕೊಹ್ಲಿ ಟೆಸ್ಟ್​ನಲ್ಲಿ ಶತಕ ಗಳಿಸಿಲ್ಲ. ದೀರ್ಘ ಕಾಲದ ಶತಕದ ಬರವನ್ನು ಕೊನೆಗಾಣಿಸಲು ಕೊಹ್ಲಿಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Published On - 8:38 pm, Mon, 20 June 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ