ವಿಶ್ವಕಪ್​ನಲ್ಲಿ ಸಚಿನ್- ಸೆಹ್ವಾಗ್ ವಿಕೆಟ್ ಕಬಳಿಸಿದ್ದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ಹಠಾತ್ ವಿದಾಯ..!

Pieter Seelaar retirement: ನೆದರ್ಲೆಂಡ್ಸ್ ನಾಯಕ ಪೀಟರ್ ಸೀಲಾರ್ ಹಠಾತ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ ಸೀಲಾರ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ವಿಶ್ವಕಪ್​ನಲ್ಲಿ ಸಚಿನ್- ಸೆಹ್ವಾಗ್ ವಿಕೆಟ್ ಕಬಳಿಸಿದ್ದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ಹಠಾತ್ ವಿದಾಯ..!
Peter Seelar retires
Follow us
TV9 Web
| Updated By: ಪೃಥ್ವಿಶಂಕರ

Updated on: Jun 20, 2022 | 5:10 PM

ನೆದರ್ಲೆಂಡ್ಸ್ ನಾಯಕ ಪೀಟರ್ ಸೀಲಾರ್ (Pieter Seelaar) ಹಠಾತ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ (retired from international cricket.)ಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ ಸೀಲಾರ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸೀಲರ್ ಎರಡು ವರ್ಷಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಎರಡು ವರ್ಷಗಳ ಹಿಂದೆ ಬೆನ್ನುನೋವಿಗೆ ಒಳಗಾಗಿದ್ದ ಅವರು ಇದರಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮತ್ತೊಮ್ಮೆ ಅದೇ ನೋವು ಕಾಣಿಸಿಕೊಂಡಿದ್ದರಿಂದ ಸೀಲರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಪೀಟರ್ ಸೆಲಾನ್ 2011 ರ ವಿಶ್ವಕಪ್‌ನಲ್ಲಿ ಬೆಳಕಿಗೆ ಬಂದರು. ಭಾರತದ ವಿರುದ್ಧದ ಪಂದ್ಯದಲ್ಲಿ ಸಚಿನ್ ಮತ್ತು ಸೆಹ್ವಾಗ್ (Sachin and Sehwag) ಇಬ್ಬರ ವಿಕೆಟ್‌ಗಳನ್ನು ಸೀಲಾರ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಪೀಟರ್ ಸೀಲಾರ್ ನಿವೃತ್ತಿ

ಇದನ್ನೂ ಓದಿ
Image
T20 World Cup: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಲು ಐಸಿಸಿ ಗಡುವು; ಈ 4 ಸರಣಿಗಳಿಂದ ತಂಡ ಕಟ್ಟಬೇಕಿದೆ ಕೋಚ್ ರಾಹುಲ್
Image
IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು
Image
NED vs ENG, 2nd ODI: ಸರಣಿ ಗೆದ್ದ ಇಂಗ್ಲೆಂಡ್; 100ನೇ ಪಂದ್ಯದಲ್ಲಿ ಸಿಡಿದೆದ್ದ ಜೇಸನ್ ರಾಯ್

ಪೀಟರ್ ಸೀಲಾರ್ 15 ವರ್ಷದೊಳಗಿನವರ ಕ್ರಿಕೆಟ್​ನಿಂದ ನೆದರ್ಲ್ಯಾಂಡ್ಸ್ನಲ್ಲಿ ಪ್ರಾಬಲ್ಯ ಸಾಧಿಸಿದರು. ಈ ಎಡಗೈ ಸ್ಪಿನ್ನರ್ ಕೇವಲ 18 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದರು. ಸೀಲಾರ್ 2009 ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ ವಿಜಯದ ಹೀರೋ ಕೂಡ ಆಗಿದ್ದರು. ಅಂದಿನ ಪಂದ್ಯದಲ್ಲಿ ಈ ಆಟಗಾರ ಇಂಗ್ಲೆಂಡ್ ನಾಯಕ ಪಾಲ್ ಕಾಲಿಂಗ್​ವುಡ್ ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:T20 World Cup: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಲು ಐಸಿಸಿ ಗಡುವು; ಈ 4 ಸರಣಿಗಳಿಂದ ತಂಡ ಕಟ್ಟಬೇಕಿದೆ ಕೋಚ್ ರಾಹುಲ್

ಪೀಟರ್ ಸೀಲಾರ್ ವೃತ್ತಿಜೀವನ

ಪೀಟರ್ ಸೀಲಾರ್ 57 ODI ಪಂದ್ಯಗಳನ್ನು ಆಡಿ, ತಮ್ಮ ಹೆಸರಿಗೆ 57 ವಿಕೆಟ್‌ಗಳನ್ನು ಹೊಂದಿದ್ದಾರೆ. ಅಲ್ಲದೆ 77 ಟಿ20 ಪಂದ್ಯಗಳಲ್ಲಿ 58 ವಿಕೆಟ್ ಕಬಳಿಸಿದ್ದಾರೆ. ಸೀಲಾರ್‌ ಎಕನಾಮಿ ರೇಟ್​ ಕೂಡ ಅದ್ಭುತವಾಗಿದ್ದು, ಅವರು ಟಿ20ಯಲ್ಲಿ ಕೇವಲ 6.83 ಎಕಾನಮಿ ದರದಲ್ಲಿ ರನ್ ನೀಡಿದ್ದಾರೆ. ಅದೇ ಸಮಯದಲ್ಲಿ, ODIನಲ್ಲಿ ಅವರ ಎಕಾನಮಿ ರೇಟ್ ಕೇವಲ 4.67 ಆಗಿತ್ತು.

ಕೊನೆಯ ಅಂತರಾಷ್ಟ್ರೀಯ ಪಂದ್ಯದಲ್ಲಿ ಸೋಲು

ಪೀಟರ್ ಸೀಲಾರ್ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೀಲಾರ್ 9 ಓವರ್​ಗಳಲ್ಲಿ 83 ರನ್ ಬಿಟ್ಟುಕೊಟ್ಟಿದ್ದರು. ಆದರೆ, ಅವರ ಖಾತೆಗೆ 2 ವಿಕೆಟ್ ಕೂಡ ಬಂದಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 498 ರನ್ ಗಳಿಸಿತು. ಇಂಗ್ಲೆಂಡ್ ಪರ ಫಿಲ್ ಸಾಲ್ಟ್ 122, ಡೇವಿಡ್ ಮಲಾನ್ 125 ಮತ್ತು ಜೋಸ್ ಬಟ್ಲರ್ 70 ಎಸೆತಗಳಲ್ಲಿ ಅಜೇಯ 162 ರನ್ ಗಳಿಸಿದರು. ಬಟ್ಲರ್ ಅವರ ಇನ್ನಿಂಗ್ಸ್‌ನಲ್ಲಿ 14 ಸಿಕ್ಸರ್‌ಗಳನ್ನು ಬಾರಿಸಿದ್ದರು. ನೆದರ್ಲೆಂಡ್ಸ್ ಬೌಲರ್ ಫಿಲಿಪ್ಪಿ ಬೋಯಿಸ್ವೆನ್ 10 ಓವರ್‌ಗಳಲ್ಲಿ 108 ರನ್‌ಗಳನ್ನು ಬಿಟ್ಟುಕೊಟ್ಟರು. ಎರಡನೇ ಏಕದಿನ ಪಂದ್ಯದಲ್ಲೂ ನೆದರ್ಲೆಂಡ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಸರಣಿಯನ್ನು ಕಳೆದುಕೊಂಡಿತ್ತು. ಸರಣಿಯ ಕೊನೆಯ ಏಕದಿನ ಪಂದ್ಯ ಬುಧವಾರ ನಡೆಯಲಿದೆ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ