IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು

IND vs SA: ಬೆಂಗಳೂರು ಟಿ20 ಮಳೆಯಿಂದಾಗಿ ರದ್ದಾಗಿದ್ದು, ದಕ್ಷಿಣ ಆಫ್ರಿಕಾ-ಟೀಂ ಇಂಡಿಯಾ ನಡುವಿನ ಟಿ20 ಸರಣಿ 2-2ರಲ್ಲಿ ಸಮಬಲಗೊಂಡಿದೆ. ಆದಾಗ್ಯೂ, ಇದರ ಹೊರತಾಗಿಯೂ, ಭಾರತ ತಂಡವು 3 ದೊಡ್ಡ ಯಶಸ್ಸನ್ನು ಸಾಧಿಸಿದೆ, ಇದು ಸರಣಿಯನ್ನು ಗೆಲ್ಲುವುದಕ್ಕಿಂತ ಹೆಚ್ಚಿನ ಉಪಕಾರ ಮಾಡಿಕೊಟ್ಟಿದೆ.

IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು
Team India
Follow us
TV9 Web
| Updated By: ಪೃಥ್ವಿಶಂಕರ

Updated on: Jun 20, 2022 | 3:25 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಐದನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ, ಸರಣಿಯಲ್ಲಿ ಶ್ರೇಷ್ಠ ಕ್ರಿಕೆಟ್ ಆಡಲಾಗಿದೆ. ಮೊದಲೆರಡು ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದ್ದು, ಬಳಿಕ ಟೀಂ ಇಂಡಿಯಾ ಅತಿಥಿಗಳನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಟೀಮ್ ಇಂಡಿಯಾ ಫಾರ್ಮ್​ನಲ್ಲಿದ್ದು, ಸರಣಿ ಗೆಲ್ಲುವ ಹೆಚ್ಚಿನ ಅವಕಾಶಗಳು ಇದ್ದವು ಆದರೆ ಮಳೆ ಪಂದ್ಯವನ್ನು ಹಾಳುಮಾಡಿತು. ಅಲ್ಲದೆ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲದಿದ್ದರೂ ಮೂರು ರಂಗಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ (Rahul Dravid and captain Rohit Sharma) ಮೂರು ದೊಡ್ಡ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಂಡಿದ್ದಾರೆ.

ದಿನೇಶ್ ಕಾರ್ತಿಕ್ ರೂಪದಲ್ಲಿ ಫಿನಿಶರ್ ಸಿಕ್ಕಿದ್ದಾರೆ

ದಕ್ಷಿಣ ಆಫ್ರಿಕಾ ಸರಣಿಯಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ಗೆ ಒಬ್ಬ ಅದ್ಭುತ ಫಿನಿಶರ್‌ ಪಡೆದುಕೊಂಡಿದೆ. IPL 2022 ರ ನಂತರ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮೂರು ವರ್ಷಗಳ ನಂತರ, ಕಾರ್ತಿಕ್, ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 46 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 92 ರನ್ ಗಳಿಸಿದರು. ದಿನೇಶ್ ಎರಡು ಬಾರಿ ಅಜೇಯರಾಗಿದ್ದು, ಅವರ ಸ್ಟ್ರೈಕ್ ದರವು 158 ಕ್ಕಿಂತ ಹೆಚ್ಚಿತ್ತು. ಅಂತಹ ಪರಿಸ್ಥಿತಿಯಲ್ಲಿ, ಕಾರ್ತಿಕ್ T20 ವಿಶ್ವಕಪ್‌ನಲ್ಲಿ ಫಿನಿಶರ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ
Image
NED vs ENG, 2nd ODI: ಸರಣಿ ಗೆದ್ದ ಇಂಗ್ಲೆಂಡ್; 100ನೇ ಪಂದ್ಯದಲ್ಲಿ ಸಿಡಿದೆದ್ದ ಜೇಸನ್ ರಾಯ್
Image
IND vs SA: ಇದೇನ ಸಭ್ಯತೆ? ಸೆಲ್ಫಿ ಕೇಳಿದ ಗ್ರೌಂಡ್ಸ್‌ಮನ್ ಜೊತೆ ರುತುರಾಜ್ ಅನುಚಿತ ವರ್ತನೆ..! ವಿಡಿಯೋ ನೋಡಿ

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ಆಯ್ಕೆ ಪ್ರಕ್ರಿಯೆ ಯಾವಾಗ? ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್

ಹಾರ್ದಿಕ್ ಪಾಂಡ್ಯರಂತಹ ಮ್ಯಾಚ್ ವಿನ್ನರ್ ಸಿಕ್ಕಿದ್ದಾರೆ

ಹಾರ್ದಿಕ್ ಪಾಂಡ್ಯ ಕೂಡ ದ್ರಾವಿಡ್-ರೋಹಿತ್ ಶರ್ಮಾಗೆ ಬಿಗ್ ರಿಲೀಫ್ ನೀಡಿದ್ದಾರೆ. ಇದು ಪಾಂಡ್ಯ ಅವರ ಪುನರಾಗಮನದ ಸರಣಿಯೂ ಆಗಿತ್ತು. ಈ ಆಟಗಾರ ಈ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 58 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 117 ರನ್ ಗಳಿಸಿದರು. ಪಾಂಡ್ಯ ಅವರ ಸ್ಟ್ರೈಕ್ ರೇಟ್ 153 ಕ್ಕಿಂತ ಹೆಚ್ಚಿತ್ತು. ಪಾಂಡ್ಯ ತಮ್ಮ ಫಿಟ್‌ನೆಸ್‌ನ ಶಕ್ತಿಯನ್ನು ಸಹ ತೋರಿಸಿದಲ್ಲದೆ ಅವರ ಬೌಲಿಂಗ್ ಕೂಡ ಉತ್ತಮವಾಗಿತ್ತು. ಪಾಂಡ್ಯ 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ, ಭಾರತದ ಎರಡು ವಿಜಯಗಳಿಗೆ ಅಪಾರ ಕೊಡುಗೆ ನೀಡಿದರು.

ಇಶಾನ್ ಕಿಶನ್ ಓಪನಿಂಗ್ ಅಬ್ಬರ

ಇಶಾನ್ ಕಿಶನ್ ಟಿ20 ಸರಣಿಯಲ್ಲಿ ಗರಿಷ್ಠ 206 ರನ್ ಗಳಿಸಿದರು. ಅವರ ಸರಾಸರಿಯು 41 ಕ್ಕಿಂತ ಹೆಚ್ಚಿತ್ತು, ಅದೇ ಸಮಯದಲ್ಲಿ ಸ್ಟ್ರೈಕ್ ರೇಟ್ ಕೂಡ 150 ಕ್ಕಿಂತ ಹೆಚ್ಚಿತ್ತು. ಕಿಶನ್ ಸರಣಿಯಲ್ಲಿ 2 ಅರ್ಧ ಶತಕಗಳನ್ನು ಗಳಿಸಿದಲ್ಲದೆ ಅತ್ಯುತ್ತಮ ಇನ್ನಿಂಗ್ಸ್‌ನೊಂದಿಗೆ, T20 ವಿಶ್ವಕಪ್‌ನಲ್ಲಿ ಬ್ಯಾಕ್‌ಅಪ್ ಆರಂಭಿಕ ಆಟಗಾರರಾಗಿದ್ದಾರೆ. ಅಂದರೆ ಇಶಾನ್ ಕಿಶನ್ ಈಗ ಕೆಎಲ್ ರಾಹುಲ್-ರೋಹಿತ್ ಶರ್ಮಾಗೆ ಪರ್ಯಾಯವಾಗಿ ಪರಿಗಣಿಸಲ್ಪಟ್ಟಿದ್ದಾರೆ.

ಇವರಲ್ಲದೆ, ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಕೇವಲ 6.07 ಎಕಾನಮಿ ರೇಟ್‌ನಲ್ಲಿ ರನ್ ನೀಡಿ 6 ವಿಕೆಟ್‌ಗಳನ್ನು ಪಡೆದರು. ಟೀಂ ಇಂಡಿಯಾ ಪಾಲಿಗೆ ಇದೊಂದು ಸಂತಸದ ಸುದ್ದಿ. ಹರ್ಷಲ್ ಪಟೇಲ್ ಟಿ20 ಮಾದರಿಯಲ್ಲಿ ಮತ್ತೊಮ್ಮೆ ತನ್ನನ್ನು ತಾನು ಸಾಬೀತುಪಡಿಸಿದ್ದು, ಸರಣಿಯಲ್ಲಿ ಅತಿ ಹೆಚ್ಚು 7 ವಿಕೆಟ್ ಪಡೆದಿದ್ದಾರೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್