
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಮೊದಲ ಟಿ20 ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ 172 ರನ್‌ಗಳ ಗುರಿಯನ್ನು ನೀಡಿತು. ಭಾರತ ತಂಡವು 14.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಭಾರತದ ಪರ ಶ್ರೇಯಸ್ ಅಯ್ಯರ್ 42 ಎಸೆತಗಳಲ್ಲಿ ಭರ್ಜರಿ ಶತಕ ಗಳಿಸಿದರು, ಇದು ಅಂತರರಾಷ್ಟ್ರೀಯ ಟಿ20ಕ್ರಿಕೆಟ್ನಲ್ಲಿ ಅವರ ಮೊದಲ ಶತಕವಾಗಿದೆ. ಹಾಗೆಯೇ ಇಶಾನ್ ಕಿಶನ್ ಕೂಡ 37 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.
ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಪ್ರಶ್ನಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಈ ವೇಳೆ ರಾಜ್ಯ ಸರ್ಕಾರ, ಆಕ್ಷೇಪಣೆ ಸಲ್ಲಿಸಲು ಮತ್ತೆ ಕಾಲಾವಕಾಶ ಕೋರಿದೆ. 2025ರ ಅ.29ರಿಂದಲೂ ಕಾಲಾವಕಾಶ ಕೋರುತ್ತಿದೆ. ಹೀಗಾಗಿ ಆಕ್ಷೇಪಣೆ ಸಲ್ಲಿಸಲು ವಿಳಂಬ ನೀತಿಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.
ಎಸ್ಐಆರ್ ಸಂಬಂಧ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಈ ವೇಳೆ ದೆಹಲಿ ಪೊಲೀಸರ ವಶದಲ್ಲಿದ್ದ ರಾಹುಲ್ ಗಾಂಧಿ ಬಿಡುಗಡೆ ಮಾಡಲಾಗಿದೆ.ದೆಹಲಿಯ ಕಿಂಗ್ಸ್ವೇ ಕ್ಯಾಂಪ್ನಿಂದ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಬಿಡುಗಡೆ ಮಾಡಲಾಯ್ತು
ಕೆಪಿಎಸ್ಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ನನ್ನು ಬಂಧಿಸಿದ್ದಾರೆ. ಇಂದು (ಅ.06) ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ನಿವಾಸದ ಮೇಲೆ ಇಡಿ ದಾಳಿ ಮಾಡಿದ್ದು, ಬಳಿಕ ಶಿವಶಂಕರಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ. ಇದೀಗ ವಿಚಾರಣೆ ಮುಗಿಸಿ ಶಿವಶಂಕರಪ್ಪನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಟೀಮ್ ಇಂಡಿಯಾ 14.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ 43 ಎಸೆತಗಳಲ್ಲಿ ಅಜೇಯ 102 ರನ್ ಗಳಿಸುವ ಮೂಲಕ ಈ ಗೆಲುವಿನ ನಾಯಕರಾದರು. ಈ ಮಧ್ಯೆ, ಇಶಾನ್ ಕಿಶನ್ 37 ರನ್ ಗಳಿಸಿ ಅಜೇಯರಾಗಿ ಉಳಿದರು.
ಶ್ರೇಯಸ್ ಅಯ್ಯರ್ ಕೇವಲ 42 ಎಸೆತಗಳನ್ನು ಎದುರಿಸಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದರು.
12 ಓವರ್‌ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 60 ಮತ್ತು ಇಶಾನ್ ಕಿಶನ್ 29 ರನ್ ಗಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕನ ಇನ್ನಿಂಗ್ಸ್ ಆಡಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಇತ್ತ ಇಶಾನ್ ಕಿಶನ್, ಅಯ್ಯರ್ಗೆ ಅತ್ಯುತ್ತಮ ಬೆಂಬಲ ನೀಡಿದರು.
10 ಓವರ್‌ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ. ನಾಯಕ ಶ್ರೇಯಸ್ ಅಯ್ಯರ್ 45 ಮತ್ತು ಇಶಾನ್ ಕಿಶನ್ 25 ರನ್ ಗಳಿಸಿದ್ದಾರೆ.
ಟೀಮ್ ಇಂಡಿಯಾ 35 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್ 9 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.
ಟೀಮ್ ಇಂಡಿಯಾ 29 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ 10 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.
ಕೆಪಿಎಸ್ಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ನನ್ನು ಬಂಧಿಸಿದ್ದಾರೆ. ಇಂದು (ಅ.06) ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ನಿವಾಸದ ಮೇಲೆ ಇಡಿ ದಾಳಿ ಮಾಡಿದ್ದು, ಬಳಿಕ ಶಿವಶಂಕರಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ. ಇದೀಗ ವಿಚಾರಣೆ ಮುಗಿಸಿ ಶಿವಶಂಕರಪ್ಪನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡವು 19.1 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್‌ನಲ್ಲಿ ಭಾರತದ ಪರ ನಮನ್ ಧೀರ್ ಅತಿ ಹೆಚ್ಚು ಮೂರು ವಿಕೆಟ್ ಪಡೆದರು. ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಅರ್ಶ್ದೀಪ್ ಸಿಂಗ್ ಮತ್ತು ಮಯಾಂಕ್ ಯಾದವ್ ಕೂಡ ತಲಾ ಒಂದು ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ತಂಡವು 135 ರನ್‌ಗಳಿಗೆ ಎಂಟನೇ ವಿಕೆಟ್ ಕಳೆದುಕೊಂಡಿತು. ಶಮರ್ ಸ್ಪ್ರಿಂಗರ್ 9 ರನ್‌ಗಳಿಸಿ ಔಟಾದರು. ನಮನ್ ಧೀರ್ ತಮ್ಮ ಮೂರನೇ ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ತಂಡವು 124 ರನ್‌ಗಳಿಗೆ ಏಳನೇ ವಿಕೆಟ್ ಕಳೆದುಕೊಂಡಿತು. ಮ್ಯಾಥ್ಯೂ ಫೋರ್ಡ್ ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡಿದರು.
ಅ.8ರಂದು GST ಕೌನ್ಸಿಲ್ ಸಭೆ ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ನವದೆಹಲಿಗೆ ತೆರಳಿದ್ದಾರೆ. ಇಂದು (ಅಕ್ಟೋಬರ್ 06) ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೊ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ನಾಳಿನ ಜಿಎಸ್ಟಿ ಸಭೆ ಬಳಿಕ ದೆಹಲಿಯಿಂದ ಗೋವಾಗೆ ತೆರಳಲಿದ್ದಾರೆ.
37 ಎಸೆತಗಳಲ್ಲಿ 52 ರನ್ ಗಳಿಸಿ ನಾಯಕತ್ವದ ಇನ್ನಿಂಗ್ಸ್ ಆಡಿದ ಶೈ ಹೋಪ್ ಔಟಾದರು. ಈ ನಿರ್ಣಾಯಕ ವಿಕೆಟ್ ಅನ್ನು ನಮನ್ ಧೀರ್ ಪಡೆದರು. ಇದರೊಂದಿಗೆ, ವೆಸ್ಟ್ ಇಂಡೀಸ್ ಸ್ಕೋರ್ 4 ವಿಕೆಟ್‌ಗಳಿಗೆ 107 ರನ್‌ಗಳಾಗಿದೆ.
ವೆಸ್ಟ್ ಇಂಡೀಸ್ ಒಂಬತ್ತು ಓವರ್‌ಗಳ ನಂತರ 3 ವಿಕೆಟ್‌ಗೆ 76 ರನ್ ಗಳಿಸಿದೆ. ನಾಯಕ ಹೋಪ್ 40 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಕುಸಿತ ಕಂಡಿದೆ. 44 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿದೆ. ರೋವ್‌ಮನ್ ಪೊವೆಲ್ ರನ್ ಗಳಿಸದೆ ಔಟಾದರು. ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದರು.
ಟೀಂ ಇಂಡಿಯಾ ಎರಡನೇ ವಿಕೆಟ್ ಪಡೆದುಕೊಂಡಿದೆ. ಶಿಮ್ರಾನ್ ಹೆಟ್ಮೈರ್ ರನೌಟ್ ಆಗಿದ್ದಾರೆ. ಇದರೊಂದಿಗೆ, ವೆಸ್ಟ್ ಇಂಡೀಸ್ 44 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿದೆ.
ವೆಸ್ಟ್ ಇಂಡೀಸ್ ತಂಡವು 38 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕಮಿಲ್ ಪೂರನ್ 11 ಎಸೆತಗಳಲ್ಲಿ 12 ರನ್‌ಗಳಿಗೆ ಔಟಾದರು. ಅರ್ಶ್ದೀಪ್ ಸಿಂಗ್ ಈ ವಿಕೆಟ್ ಪಡೆದರು.
ಮೊದಲ ನಾಲ್ಕು ಓವರ್‌ಗಳ ಅಂತ್ಯಕ್ಕೆ ವೆಸ್ಟ್ ಇಂಡೀಸ್ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ. ಹೋಪ್ 24 ರನ್‌ಗಳೊಂದಿಗೆ ಮತ್ತು ಕಮಿಲ್ ಪೂರನ್ 11 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
ಶಾಯ್ ಹೋಪ್ ಮತ್ತು ಕಮಿಲ್ ಪೂರನ್ ವೆಸ್ಟ್ ಇಂಡೀಸ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ತಂಡವು ಮೊದಲ ಎರಡು ಓವರ್‌ಗಳಲ್ಲಿ 21 ರನ್ ಗಳಿಸಿದೆ. ಮಯಾಂಕ್ ಯಾದವ್ ತಮ್ಮ ಮೊದಲ ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟಿದ್ದಾರೆ.
ಶಾಯ್ ಹೋಪ್ (ನಾಯಕ), ಕಾಮಿಲ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೊ ಶೆಫರ್ಡ್, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಅಕೇಲ್ ಹೊಸೈನ್, ಶಮರ್ ಸ್ಪ್ರಿಂಗರ್ ಮತ್ತು ಶಮರ್ ಜೋಸೆಫ್.
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಮಯಾಂಕ್ ಯಾದವ್, ನಮನ್ ಧೀರ್.
ಸರಣಿಯ ಮೊದಲ ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ.
Published On - 6:50 pm, Tue, 6 October 26