
ಗುವಾಹಟಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ 8 ವಿಕೆಟ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಉಭಯ ತಂಡಗಳಿಂದ ರನ್ ಮಳೆಯೇ ಹರಿದ ಈ ಪಂದ್ಯದಲ್ಲಿ 1 ದ್ವಿಶತಕ, 4 ಶತಕಗಳು ದಾಖಲಾದವು. ಎರಡು ತಂಡಗಳಿಂದ 800 ಕ್ಕೂ ಅಧಿಕ ರನ್ಗಳು ಹರಿದುಬಂದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 405 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 43.3 ಓವರ್‌ಗಳಲ್ಲಿ ಈ ಗುರಿ ಬೆನ್ನಟ್ಟುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ 400+ ರನ್ ಗುರಿ ಬೆನ್ನಟ್ಟಿ ಗೆದ್ದ ಇತಿಹಾಸ ಬರೆಯಿತು. ಟೀಂ ಇಂಡಿಯಾ ಪರ ನಾಯಕ ಶುಭ್ಮನ್ ಗಿಲ್ ಅಜೇಯ ದ್ವಿಶತಕ ಬಾರಿಸಿದರೆ, ರೋಹಿತ್ ಶರ್ಮಾ ಶತಕದ ಇನ್ನಿಂಗ್ಸ್ ಆಡಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು 400 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಗುರಿಯನ್ನು ಸಾಧಿಸಿದ್ದು ಇದು ಎರಡನೇ ಬಾರಿ ಎಂಬುದು ಗಮನಿಸಬೇಕಾದ ಸಂಗತಿ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಜಾನ್ ಕ್ಯಾಂಪ್ಬೆಲ್ ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಅವರು 68 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್ ಸೇರಿದಂತೆ 101 ರನ್ ಗಳಿಸಿ ಔಟಾದರು. ಇತ್ತ ವಿರಾಟ್ ಕೊಹ್ಲಿ ನೀಡಿದ ಜೀವದಾನವನ್ನು ಸದುಪಯೋಗಪಡಿಸಿಕೊಂಡ ನಾಯಕ ಶೈ ಹೋಪ್ 94 ಎಸೆತಗಳಲ್ಲಿ 104 ರನ್ ಬಾರಿಸಿದರು.
ನಂತರ ಆಮಿರ್ ಜಂಗೂ ಕೂಡ ಕೇವಲ 69 ಎಸೆತಗಳಲ್ಲಿ 114 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್‌ನ ಮೂವರು ಬ್ಯಾಟ್ಸ್‌ಮನ್‌ಗಳು ಒಂದೇ ಪಂದ್ಯದಲ್ಲಿ ಶತಕ ಗಳಿಸಿದ್ದು ಇದೇ ಮೊದಲು. ಇದರ ಪರಿಣಾಮವಾಗಿ, ವಿಂಡೀಸ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 405 ರನ್ ಗಳಿಸಿತು. ಭಾರತದ ಪರ ಗುರ್ನೂರ್ ಬ್ರಾರ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು.
A night for the 𝗵𝗶𝘀𝘁𝗼𝗿𝘆 𝗯𝗼𝗼𝗸𝘀 📚✨#TeamIndia register their highest successful ODI run chase to take an unassailable 2️⃣-0️⃣ lead in the series 👏👏
Scorecard ▶️ https://t.co/6XCYRtZLAi#INDvWI | @mflone_ pic.twitter.com/wiEGxX2pCt
— BCCI (@BCCI) September 30, 2026
406 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಆರಂಭಿಕ ಜೋಡಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿತು. ಮಾಜಿ ನಾಯಕ ರೋಹಿತ್ ಶರ್ಮಾ 75 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 101 ರನ್ ಬಾರಿಸಿದರೆ, ನಾಯಕ ಗಿಲ್ 117 ಎಸೆತಗಳಲ್ಲಿ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ ದ್ವಿಶತಕ ಬಾರಿಸುವ ಮೂಲಕ ತಂಡದ ಗೆಲುವು ಖಚಿತಪಡಿಸಿದರು. ಅಂತಿಮವಾಗಿ ಗಿಲ್ 133 ಎಸೆತಗಳಲ್ಲಿ 26 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಿತ 223 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೆ ರೋಹಿತ್ ಮತ್ತು ಗಿಲ್ ಮೊದಲ ವಿಕೆಟ್‌ಗೆ 255 ರನ್‌ಗಳ ದಾಖಲೆಯ ಜೊತೆಯಾಟವನ್ನು ನೀಡಿದರು.
200 ಸಿಕ್ಸರ್, 12000 ರನ್..! ದಾಖಲೆಯ 35ನೇ ಶತಕ ಚಚ್ಚಿದ ರೋಹಿತ್ ಶರ್ಮಾ
ರೋಹಿತ್ ಔಟಾದ ಬಳಿಕ ಬಂದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ 19 ಎಸೆತಗಳಲ್ಲಿ 29 ರನ್ ಬಾರಿಸಿ ಔಟಾದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ರುತುರಾಜ್ ಗಾಯಕ್ವಾಡ್ 31 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಭಾರತ 43.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 406 ರನ್ ಗಳಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
Published On - 10:15 pm, Wed, 30 September 26