IND vs SL: ಗುರು ದ್ರಾವಿಡ್ ಜೊತೆಗೆ ಶ್ರೀಲಂಕಾ ತಲುಪಿದ ಶಿಷ್ಯ ಪಡೆ! ಸರಣಿ ಗೆಲ್ಲುವ ತವಕದಲ್ಲಿ ಯಂಗ್ ಇಂಡಿಯಾ

|

Updated on: Jun 28, 2021 | 9:41 PM

IND vs SL: ಎರಡು ವಾರಗಳ ಕಾಲ ಮುಂಬೈನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್​ಗೊಳಗಾಗಿದ್ದ ಟೀಮ್ ಇಂಡಿಯಾ ಜೂನ್ 28 ಸೋಮವಾರ ಶ್ರೀಲಂಕಾಕ್ಕೆ ತೆರಳಿ ಸಂಜೆ ಕೊಲಂಬೊ ತಲುಪಿತು.

1 / 5
ಏಕದಿನ ಮತ್ತು ಟಿ 20 ಸರಣಿಗಾಗಿ ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ತಲುಪಿದೆ. ಎರಡು ವಾರಗಳ ಕಾಲ ಮುಂಬೈನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್​ಗೊಳಗಾಗಿದ್ದ ಟೀಮ್ ಇಂಡಿಯಾ ಜೂನ್ 28 ಸೋಮವಾರ ಶ್ರೀಲಂಕಾಕ್ಕೆ ತೆರಳಿ ಸಂಜೆ ಕೊಲಂಬೊ ತಲುಪಿತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡದ ಎಡಗೈ ಓಪನರ್ ಶಿಖರ್ ಧವನ್ ನಾಯಕತ್ವ ವಹಿಸಿದ್ದಾರೆ. ಧವನ್ ಮೊದಲ ಬಾರಿಗೆ ಟೀಮ್ ಇಂಡಿಯಾದ ಮುಂದಾಳತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಉಪನಾಯಕನನ್ನಾಗಿ ಮಾಡಲಾಗಿದೆ.

2 / 5
ಅದೇ ಸಮಯದಲ್ಲಿ, ಈ ಪ್ರವಾಸಕ್ಕಾಗಿ ಭಾರತೀಯ ತಂಡದ ತರಬೇತುದಾರನ ಜವಾಬ್ದಾರಿಯನ್ನು ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ರಾಹುಲ್ ದ್ರಾವಿಡ್‌ಗೆ ವಹಿಸಲಾಗಿದೆ. ಭಾರತದ ಹಿರಿಯ ತಂಡದ ಕೋಚಿಂಗ್ ಜವಾಬ್ದಾರಿಯನ್ನು ದ್ರಾವಿಡ್ ಮೊದಲ ಬಾರಿಗೆ ನಿರ್ವಹಿಸುತ್ತಿದ್ದಾರೆ. ಪ್ರವಾಸದಲ್ಲಿ ಅಭ್ಯಾಸಕ್ಕಾಗಿ ಭಾರತೀಯ ತಂಡವು ತಮ್ಮ ಎರಡು ತಂಡಗಳನ್ನು ರಚಿಸುತ್ತದೆ ಮತ್ತು ತಮ್ಮ ನಡುವೆ ಅಭ್ಯಾಸ ಪಂದ್ಯಗಳನ್ನು ಆಡುತ್ತದೆ. ಆದರೆ, ಇದಕ್ಕೂ ಮುನ್ನ 3 ದಿನಗಳ ಕಾಲ ಭಾರತ ತಂಡ ಪ್ರತ್ಯೇಕವಾಗಿರಲಿದೆ.

3 / 5
ನಾಲ್ಕು ವಾರಗಳ ಪ್ರವಾಸದಕ್ಕಾಗಿ ಭಾರತ ತಂಡ ಶ್ರೀಲಂಕಾಕ್ಕೆ ಬಂದಿದೆ. ಹಲವಾರು ಹಿರಿಯ ಮತ್ತು ನಿಯಮಿತ ಆಟಗಾರರ ಅನುಪಸ್ಥಿತಿಯಲ್ಲಿ, 20 ಸದಸ್ಯರ ಭಾರತೀಯ ತಂಡದಲ್ಲಿ ಐದು ಹೊಸ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ - ದೇವದತ್ ಪಡಿಕ್ಕಲ್, ನಿತೀಶ್ ರಾಣಾ, ರಿತುರಾಜ್ ಗಾಯಕವಾಡ್, ಕೃಷ್ಣಪ್ಪ ಗೌತಮ್ ಮತ್ತು ವೇಗದ ಬೌಲರ್ ಚೇತನ್ ಸಕರಿಯಾ. ಅದೇ ಸಮಯದಲ್ಲಿ, 6 ನೆಟ್ ಬೌಲರ್ಗಳನ್ನು ಸಹ ತೆಗೆದುಕೊಳ್ಳಲಾಗಿದೆ.

4 / 5
ಈ ಸರಣಿಯಲ್ಲಿ ಟೀಮ್ ಇಂಡಿಯಾದ ಅನೇಕ ಆಟಗಾರರ ಭವಿಷ್ಯವೂ ಅಪಾಯದಲ್ಲಿದೆ. ಮನೀಶ್ ಪಾಂಡೆ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಟಿ 20 ವಿಶ್ವಕಪ್ಗಾಗಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಇದು ಕೊನೆಯ ಅವಕಾಶ. ಈ ಸರಣಿಯು ಜುಲೈ 13 ರಂದು ಏಕದಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.

5 / 5
3 ಏಕದಿನ ಮತ್ತು 3 ಟಿ 20 ಪಂದ್ಯಗಳಿಗೆ ಶ್ರೀಲಂಕಾ ತಲುಪಿದ ಭಾರತ ತಂಡ ಹೀಗಿದೆ- ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದುತ್ ಪಡಿಕ್ಕಲ್, ರಿತುರಾಜ್ ಗಾಯಕವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ ಇಶಾನ್ ಕಿಶನ್, (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ರಾಹುಲ್ ಚಹರ್, ಕೆ ಗೌತಮ್, ಕ್ರುನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ನವದೀಪ್ ಸೈನಿಯಾ, ಚೇತನ್ ಸಕಾರಿಯಾ. ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮರ್ಜಿತ್ ಸಿಂಗ್.