‘ಪ್ರತಿ ಟ್ರೋಫಿಯನ್ನು ಗೆಲ್ಲುವುದು ಸಾಧ್ಯವಿಲ್ಲ,’ ಟೀಮ್ ಇಂಡಿಯ ಪ್ರದರ್ಶನವನ್ನು ಸಮರ್ಥಿಸಿಕೊಂಡ ಕಪಿಲ್ ದೇವ್

ಕೆಲವರು ಟೀಮನ್ನು ಮತ್ತು ಕೊಹ್ಲಿಯನ್ನು ಸಮರ್ಥಸಿಕೊಂಡಿರುವುದೂ ಇದೆ. ಅವರಲ್ಲಿ ಪ್ರಮುಖರು, 1983 ರಲ್ಲಿ ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟ ಕಪಿಲ್ ದೇವ್. ಯೂಟ್ಯೂಬ್​ನೊಂದಿಗೆ ಮಾತಾಡಿರುವ ಕಪಿಲ್, ಮಾಧ್ಯಮ ಬಹಳ ಕಟುವಾಗಿ ಟೀಮನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

‘ಪ್ರತಿ ಟ್ರೋಫಿಯನ್ನು ಗೆಲ್ಲುವುದು ಸಾಧ್ಯವಿಲ್ಲ,’ ಟೀಮ್ ಇಂಡಿಯ ಪ್ರದರ್ಶನವನ್ನು ಸಮರ್ಥಿಸಿಕೊಂಡ ಕಪಿಲ್ ದೇವ್
ಕಪಿಲ್ ದೇವ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2021 | 11:19 PM

ಭಾರತದ ಕ್ರಿಕೆಟ್ ತಂಡ ಟೆಸ್ಟ್ ಅಥವಾ ಸರಣಿಯನ್ನು ಸೋತಾಗ ಜಾಸ್ತಿ ಕಾಮೆಂಟ್​ಗಳು ಕೇಳಿಬರುತ್ತವೆ, ಸೋತಿರುವುದಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗುತ್ತದೆ. ಆಟದಲ್ಲಿ ವಿಫಲಾರಾದ ಆಟಗಾರರ ಮತ್ತು ನಾಯಕನ ತಲೆದಂಡ ಕೇಳಲಾಗುತ್ತದೆ. ಮಾಜಿ ಮತ್ತು ಹಾಲಿ ಆಟಗಾರರರ ಜೊತೆ ಕಾಮೆಂಟೇಟರ್​ಗಳು ಸಹ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಸಾಗುತ್ತಾರೆ. ಅವರಾದರೆ ಸರಿ, ಕ್ರೀಡೆಯ ಬಗ್ಗೆ ಅವರಿಗೆ ಜ್ಞಾನ ಇದೆ, ಹಾಗಾಗಿ ಅಧಿಕಾರಯುತವಾಗಿ ಮಾತಾಡಬಲ್ಲರು. ಆದರೆ ಕ್ರಿಕೆಟ್​​ ಬಗ್ಗೆ ಗೊತ್ತರಿದವರೂ ಪರಿಣಿತರಂತೆ, ತಜ್ಞರಂತೆ ಮಾತಾಡುತ್ತಾರೆ. ಇವೆನೆಂತ ಕೊಹ್ಲಿ ಮಾರಾಯಾ, ಅವ್ನಿಗೆ ಆಟ ಗೊತ್ತಿಲ್ಲ, ಎಂತದ್ದೂ ಗೊತ್ತಿಲ್ಲ, ಅವನನ್ನ ಕ್ಯಾಪ್ಟನ್ ಮಾಡಿದವರ ಮಂಡೆ ಸಮ ಇಲ್ಲ, ಅವನನ್ನು ಸರಿಸಿ ಅಜಿಂಕ್ಯಾ ರಹಾನೇನ ಆ ಜಾಗಕ್ಕೆ ತರ್ಬೇಕ್ ಮಾರಾಯಾ….ಅಂತೆಲ್ಲ ಕಾಮೆಂಟ್​ಗಳನ್ನು ಮಾಡುತ್ತಾರೆ. ಬಿಡಿ, ಕ್ರಿಕೆಟ್​ ಶುರುವಾದಾಗಿನಿಂದ ಇದು ನಡೀತಾ ಬಂದಿದೆ.

ನ್ಯೂಜಿಲೆಂಡ್ ವಿರುದ್ಧ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸೋತ ನಂತರ ಟೀಮ್ ಇಂಡಿಯ ಮತ್ತು ನಾಯಕ ವಿರಾಟ್​ ಕೊಹ್ಲಿ ಅನೇಕ ಟೀಕೆಗಳನ್ನು ಎದುರಿಸಿದ್ದಾರೆ. ನಿಜ, ಭಾರತದ ಬ್ಯಾಟಿಂಗ್ ಪ್ರದರ್ಶನ ಅತ್ಯಂತ ಕೆಟ್ಟದಾಗಿತ್ತು. ವಿರಾಟ್​ ಕೊಹ್ಲಿ, ರೋಹಿತ್ ಶರ್ಮ, ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಅವರಂಥ ವಿಶ್ವದರ್ಜೆಯ ಆಟಗಾರರು, ಬ್ಯಾಟಿಂಗ್​ಗೆ ಅಷ್ಟೇನೂ ಕೆಟ್ಟದಾಗಿರದ ಪಿಚ್​ನಲ್ಲಿ ಕೇವಲ 217 ಮತ್ತು 170 ಮೊತ್ತಗಳನ್ನು ಗಳಿಸುವುದು ಸುಲಭಕ್ಕೆ ಜೀರ್ಣಿಸಿಕೊಳ್ಳುವ ವಿಷಯ ಖಂಡಿತ ಅಲ್ಲ.

ಕೆಲವರು ಟೀಮನ್ನು ಮತ್ತು ಕೊಹ್ಲಿಯನ್ನು ಸಮರ್ಥಸಿಕೊಂಡಿರುವುದೂ ಇದೆ. ಅವರಲ್ಲಿ ಪ್ರಮುಖರು, 1983 ರಲ್ಲಿ ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟ ಕಪಿಲ್ ದೇವ್. ಯೂಟ್ಯೂಬ್​ನೊಂದಿಗೆ ಮಾತಾಡಿರುವ ಕಪಿಲ್, ಮಾಧ್ಯಮ ಬಹಳ ಕಟುವಾಗಿ ಟೀಮನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಟೀಮನ್ನು ಟೀಕಿಸುವ ಭರದಲ್ಲಿ ಅದರ ಹಿಂದಿನ ಪ್ರದರ್ಶನಗಳನ್ನು ಕಡೆಗಣಿಸಬಾರದೆಂದು ಅವರು ಹೇಳಿದ್ದಾರೆ.

‘ನನಗೊಂದು ವಿಷಯ ಹೇಳಿ, ಅವರು ಪ್ರತಿಬಾರಿ ಸೆಮಿಫೈನಲ್ ಮತ್ತು ಫೈನಲ್ ಪ್ರವೇಶಿಸುತ್ತಾರೆ, ಅದು ಸಾಧನೆಯಲ್ಲವೇ? ಟೀಕೆ ಮಾಡುವುದನ್ನು ಶುರಮಾಡಲು ನಮಗೆ ಸಮಯವೇ ಬೇಕಾಗುವುದಿಲ್ಲ. ಪ್ರತಿಸಲ ನಾವು ಟ್ರೋಫಿ ಗೆಲ್ಲುವುದು ಸಾಧ್ಯವಾಗುವುದಿಲ್ಲ. ಅವರು ಎಷ್ಟು ಚೆನ್ನಾಗಿ ಅಡಿದ್ದಾರೆನ್ನುವ ಬಗ್ಗೆ ಯೋಚಿಸಿ. ಅವರು ಒಂದು ಪಂದ್ಯವನ್ನು ಇಲ್ಲಿ, ಅಥವಾ ವಿಶ್ವಕಪ್ ಸೆಮಿಫೈನಲ್ ಸೋತಿದ್ದಾರೆಂದಾಕ್ಷಣ ನಿರ್ಣಾಯಲ ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆಂದು ಅರ್ಥವೇ? ಆದು ಖಂಡಿತ ಹಾಗಲ್ಲ,’ ಎಂದು ಕಪಿಲ್ ದೇವ್ ಹೇಳಿದ್ದಾರೆ.

‘ಭಾರತದ ಎದುರಾಳಿಗಳಿಗೆ ದಿನ ಚೆನ್ನಾಗಿತ್ತು ಮತ್ತು ಅವರ ಪ್ರದರ್ಶನವೂ ಉತ್ತಮವಾಗಿತ್ತು, ಆದರೆ ನಾವು ಇದನ್ನು ಬಹಳ ವಿಮರ್ಶಾತ್ಮಕ ದೃಷ್ಟಿಯಿಂದ ನೋಡುತ್ತೇವೆ. ಒಂದು ಕೆಟ್ಟ ಪ್ರದರ್ಶನವನ್ನು ಮಿಡಿಯಾದವರು ನೂರು ಸಲ ತೋರಿಸುತ್ತಾರೆ. ಟೀಮ್ ಇಂಡಿಯ ಒತ್ತಡದಲ್ಲಿ ಚೋಕ್​ ಅಗುತ್ತದೆ ಎಂದು ಹೇಳುತ್ತಾರೆ. ಆದರೆ ಇದೇ ತಂಡ ಒತ್ತಡದಲ್ಲಿ ಹಲವಾರು ಪಂದ್ಯಗಳನ್ನು ಗೆದ್ದಿದೆ ಅನೋದನ್ನು ನಾವು ಮರೆಯಬಾರದು,’ ಎಂದು ‘ಸ್ಪೋರ್ಟ್​ ಯಾರೀ’ಯ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಕಪಿಲ್ ದೇವ್ ಹೇಳಿದರು.

ಕೊಹ್ಲಿ ತಂಡದ ಮುಂದಿನ ಸವಾಲು, ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 5-ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಈ ಸರಣಿಯು ಆಗಸ್ಟ್​ 4 ರಿಂದ ನಾಟಿಂಗ್​ಹ್ಯಾಮ್​ನಲ್ಲಿ ಶುರುವಾಗಲಿದೆ. ಟೀಮ್ ಇಂಡಿಯಾದ ಆಟಗಾರರಿಗೆ ಮೂರು ವಾರಗಳ ಬ್ರೇಕ್ ಸಿಕ್ಕಿದೆ ಮತ್ತು ಜೂನ್​ 14 ರಂದಯ ಅವರು ಲಂಡನ್​ನಲ್ಲಿ ಜೊತೆಗೂಡಲಿದ್ದಾರೆ. ಭಾರತ 2007 ರ ನಂತರ ಇಂಗ್ಲೆಂಡ್​ನಲ್ಲಿ ಸರಣಿ ಗೆದ್ದಿಲ್ಲ. ಜೋ ರೂಟ್​ ನಾಯಕತ್ವ ಇಂಗ್ಲೆಂಡ್​ ತಂಡ ಅಷ್ಟೇನೂ ಉತ್ತಮ ಫಾರ್ಮ್​ನಲ್ಲಿ ಇಲ್ಲದಿರುವುದರಿಂದ ಬಾರತಕ್ಕೆ ಸರಣಿ ಗೆಲ್ಲುವ ಅವಕಾಶ ಜಾಸ್ತಿಯಿದೆ ಎಂದು ಕ್ರಿಕೆಟ್​ ಪರಿಣಿತರು ಹೇಳುತ್ತಾರೆ.

ಇದನ್ನೂ ಓದಿ: WTC Final: ಉತ್ತಮ ಜೊತೆಯಾಟದ ಕೊರತೆಯಿಂದಾಗಿ ಭಾರತ ಡಬ್ಲ್ಯೂಟಿಸಿ ಫೈನಲ್​ ಸೋಲಬೇಕಾಯ್ತು; ಸಚಿನ್ ತೆಂಡೂಲ್ಕರ್ 

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?