AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಉತ್ತಮ ಜೊತೆಯಾಟದ ಕೊರತೆಯಿಂದಾಗಿ ಭಾರತ ಡಬ್ಲ್ಯೂಟಿಸಿ ಫೈನಲ್​ ಸೋಲಬೇಕಾಯ್ತು; ಸಚಿನ್ ತೆಂಡೂಲ್ಕರ್

WTC Final: ಪಂದ್ಯದ ಕೊನೆಯ ದಿನದಂದು ಭಾರತ ತಂಡವು ಉತ್ತಮ ಜೊತೆಯಾಟ ಆಡುವಲ್ಲಿ ವಿಫಲವಾಯ್ತು. ಅದಕ್ಕಾಗಿಯೇ ತಂಡ ಸೋಲನುಭವಿಸಬೇಕಾಯಿತು.

WTC Final: ಉತ್ತಮ ಜೊತೆಯಾಟದ ಕೊರತೆಯಿಂದಾಗಿ ಭಾರತ ಡಬ್ಲ್ಯೂಟಿಸಿ ಫೈನಲ್​ ಸೋಲಬೇಕಾಯ್ತು; ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
ಪೃಥ್ವಿಶಂಕರ
|

Updated on: Jun 27, 2021 | 6:11 PM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಮತ್ತು ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಸೋಲು ಅನುಭವಿಸಿತು. ಭಾರತದ ಮಾಜಿ ನಾಯಕ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್, ಪಂದ್ಯದ ಕೊನೆಯ ದಿನದಂದು ಭಾರತ ತಂಡವು ಉತ್ತಮ ಜೊತೆಯಾಟ ಆಡುವಲ್ಲಿ ವಿಫಲವಾಯ್ತು. ಅದಕ್ಕಾಗಿಯೇ ತಂಡ ಸೋಲನುಭವಿಸಬೇಕಾಯಿತು. ಭಾರತವು ಕೊನೆಯ ದಿನವನ್ನು ಎರಡು ವಿಕೆಟ್‌ಗಳ ನಷ್ಟಕ್ಕೆ 64 ರನ್‌ಗಳೊಂದಿಗೆ ಪ್ರಾರಂಭಿಸಿತು ಆದರೆ ಶೀಘ್ರದಲ್ಲೇ ಇಡೀ ತಂಡವು 170 ರನ್‌ಗಳಿಗೆ ಆಲೌಟ್ ಆಗಿತ್ತು ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ವಿಕೆಟ್‌ ಬೇಗಬೇಗ ಬಿದ್ದವು ಆರಂಭದಲ್ಲಿ ಭಾರತ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಅಜಿಂಕ್ಯ ರಹಾನೆ ಕಳಪೆ ರೀತಿಯಲ್ಲಿ ಔಟ್ ಆದರು. ಆಗ ಭಾರತದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ಗಳನ್ನು ಉಳಿಸಿಕೊಳ್ಳುವ ಅಗತ್ಯವಿತ್ತು ಎಂದು ಸಚಿನ್ ಹೇಳಿದ್ದಾರೆ. ಮೊದಲ 10-12 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದಿರುವುದು ಬಹಳ ಮುಖ್ಯ, ಆದರೆ ಇಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಯಿತು. ಇದರ ಫಲವಾಗಿ ಅವರು ಕೊಹ್ಲಿ-ಪೂಜಾರ ವಿಕೆಟ್‌ಗಳನ್ನು ಪಡೆದರು. ರಹಾನೆ ಸಹ ಹೊರಬಂದರು, ಇದು ಭಾರತದ ಮೇಲೆ ಒತ್ತಡ ಹೇರಿತು. ಇದರಿಂದ ಉಳಿದ ಬ್ಯಾಟ್ಸ್​ಮನ್​ಗಳು ಬಹುಬೇಗನೇ ವಿಕೆಟ್ ಒಪ್ಪಿಸಿದರು.

ಪಂತ್ ಪ್ರಯತ್ನಕ್ಕೆ ಶ್ಲಾಘನೆ ಪಂತ್ ಕೆಲವು ಹೊಡೆತಗಳನ್ನು ಆಡಿ ರನ್ ಗಳಿಸಲು ಪ್ರಯತ್ನಿಸಿದ್ದನ್ನು ಸಚಿನ್ ಮೆಚ್ಚಿಕೊಂಡಿದ್ದಾರೆ. ಪಂತ್ ಕೆಲವು ಅದ್ಭುತ ಶಾಟ್​ಗಳನ್ನು ಹೊಡೆಯುವ ಮೂಲಕ ವಾತಾವರಣವನ್ನು ಬದಲಾಯಿಸಲು ಪ್ರಯತ್ನಿಸಿದರು. ನಮ್ಮ ಬೌಲರ್‌ಗಳು ಕೂಡ ಇನ್ನೂ ಕೆಲವು ಓವರ್‌ಗಳನ್ನು ಆಡಬಹುದಿತ್ತು. ಆದರೆ ಭಾರತದ ಬೌಲರ್​ಗಳು ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತ ಬಂದರು. ಇದರಿಂದಾಗಿ ಪಂದ್ಯವನ್ನು 10-15 ಓವರ್‌ಗಳಲ್ಲಿ ನಿರ್ಧರಿಸಲಾಯಿತು. ನಮ್ಮ ಕಡೆಯಿಂದ ಉತ್ತಮ ಜೊತೆಯಾಟ ಇದ್ದಿದ್ದರೆ, ನಾವು ಅವರ ಮೇಲೆ ಒತ್ತಡ ಹೇರಬಹುದಿತ್ತು ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ