ಪ್ರಸ್ತುತ ಫಾರ್ಮ್ ಪರಿಗಣಿಸದೆ ಖ್ಯಾತಿಯ ಆಧಾರದ ಮೇಲೆ ತಂಡ ಕಟ್ಟಿದರು! ಇದೆ ಸೋಲಿಗೆ ಕಾರಣವಾಯ್ತು: ಸಬಾ ಕರೀಮ್

WTC Final: ಆಯ್ಕೆದಾರರು ಪ್ರಸ್ತುತ ಫಾರ್ಮ್ ಬಗ್ಗೆ ಗಮನ ಹರಿಸಲಿಲ್ಲ. ಬದಲಿಗೆ ಆಟಗಾರನ ಖ್ಯಾತಿಯ ಮೇಲೆ ಗಮನ ನೀಡಿದರು. ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾದಲ್ಲಿ ಗಾಯಗೊಂಡಾಗಿನಿಂದ ರೆಡ್ ಬಾಲ್ ಕ್ರಿಕೆಟ್ ಆಡಿಲ್ಲ.

ಪ್ರಸ್ತುತ ಫಾರ್ಮ್ ಪರಿಗಣಿಸದೆ ಖ್ಯಾತಿಯ ಆಧಾರದ ಮೇಲೆ ತಂಡ ಕಟ್ಟಿದರು! ಇದೆ ಸೋಲಿಗೆ ಕಾರಣವಾಯ್ತು: ಸಬಾ ಕರೀಮ್
ಟೀಂ ಇಂಡಿಯಾ
pruthvi Shankar

|

Jun 27, 2021 | 5:20 PM

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಶೀರ್ಷಿಕೆ ಪಂದ್ಯದಲ್ಲಿ ಭಾರತ ತಂಡವು ಪ್ರತಿ ವಿಭಾಗದಲ್ಲೂ ವಿಫಲವಾಗಿದೆ. ಬ್ಯಾಟಿಂಗ್ ಕೆಲಸ ಮಾಡಲಿಲ್ಲ, ಬೌಲಿಂಗ್‌ನಲ್ಲೂ ಅದೇ ಸಂಭವಿಸಿತು. ಕಳೆದ ಕೆಲವು ವರ್ಷಗಳಿಂದ ಭಾರತೀಯ ಬೌಲರ್‌ಗಳ ಸಾಧನೆ ಶ್ಲಾಘನೀಯವಾದ ಕಾರಣ ಈ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ತಮ್ಮ ಛಾಪನ್ನು ಮೂಡಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆಸ್ಟ್ರೇಲಿಯಾ ಪ್ರವಾಸ ಇದಕ್ಕೆ ಉದಾಹರಣೆಯಾಗಿತ್ತು. ಆದರೆ ಎಲ್ಲಾ ಬೌಲರ್‌ಗಳು ಫೈನಲ್‌ನಲ್ಲಿ ವಿಫಲರಾದರು. ಭಾರತದ ಪ್ರಮುಖ ಅಸ್ತ್ರವೆಂದು ಪರಿಗಣಿಸಲ್ಪಟ್ಟ ಜಸ್ಪ್ರೀತ್ ಬುಮ್ರಾ ಕೂಡ ಒಂದು ವಿಕೆಟ್ ಪಡೆಯಲಿಲ್ಲ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.

ತಂಡವನ್ನು ಆಯ್ಕೆಮಾಡುವಾಗ ಪ್ರಸ್ತುತ ಫಾರ್ಮ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಅದರ ಬದಲಿಗೆ ತಂಡವನ್ನು ಖ್ಯಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಮತ್ತು ಸೆಲೆಕ್ಟರ್ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ. ಭಾರತವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ನ್ಯೂಜಿಲೆಂಡ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬುಮ್ರಾ ಟೆಸ್ಟ್ ಕ್ರಿಕೆಟ್ ಆಡಲಿಲ್ಲ ಸಬಾ ಕರೀಮ್ ಇಂಡಿಯಾ ನ್ಯೂಸ್ ಜೊತೆ ಮಾತನಾಡುವಾಗ ಬುಮ್ರಾ ಆಸ್ಟ್ರೇಲಿಯಾ ಪ್ರವಾಸದ ನಂತರ ರೆಡ್ ಬಾಲ್ ಕ್ರಿಕೆಟ್ ಆಡಲಿಲ್ಲ. ಆಯ್ಕೆದಾರರು ಪ್ರಸ್ತುತ ಫಾರ್ಮ್ ಬಗ್ಗೆ ಗಮನ ಹರಿಸಲಿಲ್ಲ. ಬದಲಿಗೆ ಆಟಗಾರನ ಖ್ಯಾತಿಯ ಮೇಲೆ ಗಮನ ನೀಡಿದರು. ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾದಲ್ಲಿ ಗಾಯಗೊಂಡಾಗಿನಿಂದ ರೆಡ್ ಬಾಲ್ ಕ್ರಿಕೆಟ್ ಆಡಿಲ್ಲ. ಅವರು ಟಿ 20 ಯಲ್ಲಿ ಮಾತ್ರ ಕ್ರಿಕೆಟ್ ಆಡಿದ್ದಾರೆ. ಬುಮ್ರಾ ಭಾರತದಲ್ಲಿ ಆಡಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿಲ್ಲ. ಹೀಗಾಗಿ ಬುಮ್ರಾ ಫಾರ್ಮ್​ನಲ್ಲಿ ಇರಲಿಲ್ಲವೆಂದು ನಾನು ಭಾವಿಸುತ್ತೇನೆ. ಇದಲ್ಲದೆ, ನಾವು ಕೆಂಪು ಚೆಂಡಿನ ಬಗ್ಗೆ ಮಾತನಾಡಿದರೆ, ಅವರು ಸರಿಯಾಗಿ ಅಭ್ಯಾಸ ಮಾಡಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬುಮ್ರಾ ಕೆಲಸ ಮಾಡಬೇಕು ಬುಮ್ರಾ ಲಯಕ್ಕೆ ಬರುತ್ತಿದ್ದಾರೆ. ಆದರೆ ಅವರಿಗೆ ಪೂರ್ಣ ಲಯಕ್ಕೆ ಬರಲು ಸಮಯ ಹಿಡಿಯುತ್ತದೆ ಮತ್ತು ಅದಕ್ಕಾಗಿ ಅವರು ಸಾಕಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ಇದು ಅವರಿಗೆ ಕಳವಳಕಾರಿ ವಿಷಯ. ಸ್ವಲ್ಪ ಮಟ್ಟಿಗೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಲಯಕ್ಕೆ ಮರಳುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಆದರೆ ಕೊನೆಯಲ್ಲಿ ಅವರು ಕೆಂಪು ಚೆಂಡಿಗೆ ಅಗತ್ಯವಿರುವ ಲೆಂಥ್ ಕಂಡುಕೊಳ್ಳಲ್ಲು ಸಾಧ್ಯವಾಗಲಿಲ್ಲ, ಅದೂ ಸಹ ಟೆಸ್ಟ್ ಪಂದ್ಯದಾದ್ಯಂತ ಅನುಕೂಲಕರ ಪರಿಸ್ಥಿತಿಗಳಲ್ಲಿ.ಹೀಗಾಗಿ ಅವರು ತಮ್ಮ ಲಯಕ್ಕೆ ಮರಳಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ಮುಂಬರುವ ಸರಣಿಯಲ್ಲಿ ಅವರು ಅದನ್ನು ಸುಧಾರಿಸಬೇಕಾಗುತ್ತದೆ ಎಂದು ಕರೀಂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada