ಬರೋಬ್ಬರಿ 15 ಮಂದಿ ನೆಟ್ ಬೌಲರ್ಸ್: ಏಷ್ಯಾಕಪ್​ಗೆ ಮಾಸ್ಟರ್ ಪ್ಲಾನ್ ರೂಪಿಸಿದ ಬಿಸಿಸಿಐ

|

Updated on: Aug 26, 2023 | 11:36 AM

Indian team has 15 net bowlers: ಇದೇ ಮೊದಲ ಬಾರಿಗೆ, ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ಗಾಗಿ ಬೆಂಗಳೂರಿನ ಆಲೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ಟೀಮ್ ಇಂಡಿಯಾದ ಪೂರ್ವಸಿದ್ಧತಾ ಶಿಬಿರಕ್ಕಾಗಿ ಬಿಸಿಸಿಐ 13-15 ನೆಟ್ ಬೌಲರ್‌ಗಳನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ.

ಬರೋಬ್ಬರಿ 15 ಮಂದಿ ನೆಟ್ ಬೌಲರ್ಸ್: ಏಷ್ಯಾಕಪ್​ಗೆ ಮಾಸ್ಟರ್ ಪ್ಲಾನ್ ರೂಪಿಸಿದ ಬಿಸಿಸಿಐ
Team India
Follow us on

ಏಷ್ಯಾಕಪ್ 2023 (Asia Cup) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 30 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದ್ದು, ಎಲ್ಲ ತಂಡಗಳು ತಯಾರಿ ನಡೆಸುತ್ತಿದೆ. ಆದರೆ, ಭಾರತ ಕ್ರಿಕೆಟ್ ತಂಡ ವಿಶೇಷ ರೀತಿಯಲ್ಲಿ ಅಭ್ಯಾಸ ಶುರುಮಾಡಿದೆ. ಕಳೆದ ಕೆಲವು ಸಮಯದಿಂದ ಮಹತ್ವದ ಟೂರ್ನಿಯನ್ನು ಗೆಲ್ಲುವಲ್ಲಿ ವಿಫಲವಾಗಿರುವ ಟೀಮ್ ಇಂಡಿಯಾ ಈ ಬಾರಿ ಏಷ್ಯಾಕಪ್ ಮತ್ತು ವಿಶ್ವಕಪ್ ಅನ್ನು ವಶಪಡಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬರೋಬ್ಬರಿ 15 ಮಂದಿ ನೆಟ್ ಬೌಲರ್​ಗಳನ್ನು ಭಾರತೀಯ ಬ್ಯಾಟರ್​ಗಳಿಗೆ ನೀಡಿದೆ.

ಇದೇ ಮೊದಲ ಬಾರಿಗೆ, ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ಗಾಗಿ ಬೆಂಗಳೂರಿನ ಆಲೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ಟೀಮ್ ಇಂಡಿಯಾದ ಪೂರ್ವಸಿದ್ಧತಾ ಶಿಬಿರಕ್ಕಾಗಿ ಬಿಸಿಸಿಐ 13-15 ನೆಟ್ ಬೌಲರ್‌ಗಳನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ. ಸ್ಟಾರ್ ಸ್ಪೋರ್ಟ್ಸ್ ಪ್ರಕಾರ, ಆಫ್-ಸೀಸನ್ ಸಮಯದಲ್ಲಿ ದೇಶೀಯ ಬೌಲರ್‌ಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಲು ಬಿಸಿಸಿಐ ಐದರಿಂದ 15 ಕ್ಕೆ ನೆಟ್ ಬೌಲರ್‌ಗಳನ್ನು ಹೆಚ್ಚಿಸಿದೆಯಂತೆ.

ಕೊಹ್ಲಿ-ಹಾರ್ದಿಕ್ ಅಲ್ಲ: ಯೋ-ಯೋ ಟೆಸ್ಟ್​ನಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ್ದು ಯಾರು ಗೊತ್ತೇ?

ಇದನ್ನೂ ಓದಿ
ವಿಶ್ವದ ನಂ.1 ಶೆಟ್ಲರ್​ಗೆ ಸೋಲುಣಿಸಿದ ಎಚ್‌ಎಸ್ ಪ್ರಣಯ್! ಸೆಮಿಫೈನಲ್‌ ಸುತ್ತಿಗೆ ಎಂಟ್ರಿ
ಜಾವೆಲಿನ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟ ಕನ್ನಡಿಗ ಡಿಪಿ ಮನು; ಚಾಂಪಿಯನ್ ಪಟ್ಟಕ್ಕಾಗಿ ನೀರಜ್- ಅರ್ಷದ್ ನಡುವೆ ಪೈಪೋಟಿ!
ಇಂದು ಭಾರತ-ಪಾಕಿಸ್ತಾನ ಫೈನಲ್ ಫೈಟ್..! ಸೇಡು ತೀರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ
ಯುವರಾಜ್ ಸಿಂಗ್ ಮನೆಗೆ ಪುಟ್ಟ ರಾಜಕುಮಾರಿಯ ಆಗಮನ; ಮುದ್ದಾದ ಮಗುವಿನ ಹೆಸರೇನು ಗೊತ್ತಾ?

ಪಾಕಿಸ್ತಾನದ ಶಾಹೀನ್ ಅಫ್ರಿದಿ ಮತ್ತು ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮುಂತಾದವರ ವಿರುದ್ಧ ಸಿದ್ಧರಾಗಲು ಭಾರತದ ಅತಿ ಎತ್ತರದ ಎಡಗೈ ಸೀಮರ್ ಅನಿಕೇತ್ ಚೌಧರಿ ಅವರನ್ನು ಸೇರಿಸಲಾಗಿದೆ. 33 ವರ್ಷದ ಇವರು ರಾಜಸ್ಥಾನ ಪರ ಏಳು ಪಂದ್ಯಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನೆಟ್ ಬೌಲರ್‌ಗಳಲ್ಲಿ ಉಮ್ರಾನ್ ಮಲಿಕ್ (ಸನ್‌ರೈಸರ್ಸ್ ಹೈದರಾಬಾದ್), ಕುಲದೀಪ್ ಸೇನ್ (ರಾಜಸ್ಥಾನ್ ರಾಯಲ್ಸ್), ಯಶ್ ದಯಾಳ್ ಮತ್ತು ಸಾಯಿ ಕಿಶೋರ್ (ಗುಜರಾತ್ ಟೈಟಾನ್ಸ್), ರಾಹುಲ್ ಚಾಹರ್ (ಪಂಜಾಬ್ ಕಿಂಗ್ಸ್), ಮತ್ತು ತುಷಾರ್ ದೇಶಪಾಂಡೆ (ಚೆನ್ನೈ ಸೂಪರ್ ಕಿಂಗ್ಸ್) ಸೇರಿದಂತೆ ಇತರ ಆಟಗಾರರು ಇದ್ದಾರೆ.

ಯೋ-ಯೋ ಟೆಸ್ಟ್​ನಲ್ಲಿ ಎಲ್ಲರೂ ಪಾಸ್:

ಏಷ್ಯಾಕಪ್ ಪಂದ್ಯಾವಳಿಗಾಗಿ ಶ್ರೀಲಂಕಾಗೆ ಪ್ರಯಾಣಿಸುವ ಮೊದಲು ಭಾರತದ ಎಲ್ಲಾ ಕ್ರಿಕೆಟಿಗರು ಕಡ್ಡಾಯವಾಗಿ ಯೋ-ಯೋ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ತೇರ್ಗಡೆಯಾದರಷ್ಟೆ ಏಷ್ಯಾಕಪ್​ನಲ್ಲಿ ಆಡಲು ಅವಕಾಶ. ಈ ಬಾರಿ ಅಚ್ಚರಿ ಎಂಬಂತೆ ಭಾರತದ ಫಿಟ್​ನೆಸ್ ಮಾಸ್ಟರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ಅಥವಾ ಹಾರ್ದಿಕ್ ಪಾಂಡ್ಯ ಅವರನ್ನು ಮೀರಿಸಿ, ಶುಭ್​ಮನ್ ಗಿಲ್ ಅವರು ಯೋ-ಯೋ ಟೆಸ್ಟ್​ನಲ್ಲಿ ಟಾಪರ್‌ ಆಗಿ ಅತಿ ಹೆಚ್ಚಿನ ಸ್ಕೋರ್ ಗಳಿಸಿದ್ದಾರೆ. ಪಿಟಿಐ ಪ್ರಕಾರ, ಗಿಲ್ 18.7 ಸ್ಕೋರ್ ಮಾಡಿದ್ದಾರೆ. ಹೆಚ್ಚಿನ ಆಟಗಾರರು 16.5 ಮತ್ತು 18 ರ ನಡುವೆ ಸ್ಕೋರ್ ಮಾಡಿದ್ದಾರೆ. ಆದರೆ, ಗಿಲ್ ಎಲ್ಲರನ್ನೂ ಮೀರಿಸಿ 18.7 ಸ್ಕೋರ್ ಮಾಡುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ವರದಿ ಹೇಳಿದೆ.

ಏಷ್ಯಾಕಪ್ ತಂಡದಲ್ಲಿ ಜಸ್​ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮ, ಸಂಜು ಸ್ಯಾಮ್ಸನ್ (ಏಷ್ಯಾ ಕಪ್‌ಗಾಗಿ ಮೀಸಲು ಸದಸ್ಯ) ಮತ್ತು ಕೆಎಲ್ ರಾಹುಲ್ ಈ ಐವರು ಆಟಗಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ಯೋ ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಟೆಸ್ಟ್ ಇನ್ನಷ್ಟೆ ನಡೆಯಬೇಕಿದೆ. ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಜಸ್​ಪ್ರಿತ್ ಬುಮ್ರಾ ಐರ್ಲೆಂಡ್​ನಿಂದ ಹೊರಟು ಬಹುಶಃ ಇಂದು ತಂಡ ಸೇರಿಕೊಳ್ಳಲಿದ್ದಾರೆ. ಏಷ್ಯಾಕಪ್ 2023 ತರಬೇತಿ ಶಿಬಿರವು ಆಗಸ್ಟ್ 29 ರವರೆಗೆ ಇರಲಿದೆ. ಭಾರತ ಆಗಸ್ಟ್ 30 ರಂದು ಕೊಲಂಬೋಕ್ಕೆ ತೆರಳಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 am, Sat, 26 August 23