ಸೋಮವಾರ ಅಬುಧಾಬಿಯಲ್ಲಿ (Abu Dabhi) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 31ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲುಕಂಡಿತು. ಇಯಾನ್ ಮಾರ್ಗನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ (KKR vs RCB) 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆರ್ಸಿಬಿಯ ಕಳಪೆ ಪ್ರದರ್ಶನ ಒಂದುಕಡೆ ಸುದ್ದಿಯಾಗುತ್ತಿದ್ದರೆ, ಇತ್ತ ಒಂದು ಫೋಟೋ ಭರ್ಜರಿ ವೈರಲ್ (Viral Photo) ಆಗುತ್ತಿದೆ. ಅದುವೇ ಬೆಂಗಳೂರು ಫ್ರಾಂಚೈಸಿಯ ಸಪೋರ್ಟ್ ಸ್ಟಾಫ್ ಮಸಾಜ್ ಥೆರಫಿಸ್ಟ್ ನವನೀತ ಗೌತಮ್ (Navnita Gautam) ಮತ್ತು ತಂಡದ ಪ್ರಮುಖ ವೇಗಿ ನ್ಯೂಜಿಲೆಂಡ್ನ ಕೈಲ್ ಜೇಮಿಸನ್ (Kyle Jamieson) ಅವರ ಕಣ್ಣೋಟದ ಫೋಟೋ.
ಹೌದು, ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಸ್ವತಃ ಕೊಹ್ಲಿ ಅವರೇ ತಮ್ಮ ನಿರ್ಧಾರವನ್ನು ಹುಸಿಗೊಳಿಸಿ ಮೊದಲಿಗರಾಗಿ ಕೇವಲ 5 ರನ್ಗೆ ಪೆವಿಲಿಯನ್ ಸೇರಿಕೊಂಡರು. ನಂತರ ಒಬ್ಬರ ಹಿಂದೆ ಒಬ್ಬರಂತೆ ಔಟಾಗ ತೊಡಗಿದರು.
9.4 ಓವರ್ ಆಗುವ ಹೊತ್ತಿಗೆ ಆರ್ಸಿಬಿ 53 ರನ್ಗೆ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದೇ ಸಂದರ್ಭ ಕ್ಯಾಮೆರಾ ಒಮ್ಮೆಲೆ ಆರ್ಸಿಬಿಯ ಡಗೌಟ್ ಕಡೆ ಕಣ್ಣು ಹಾಹಿಸುತ್ತೆ. ಆಗ ಕಂಡು ಬಂದ ದೃಶ್ಯ ಸದ್ಯ ಎಲ್ಲಡೆ ವೈರಲ್ ಆಗುತ್ತಿದೆ. ಆರ್ಸಿಬಿ ಥೆರಫಿಸ್ಟ್ ನವನೀತ ಗೌತಮ್ ಮತ್ತು ವೇಗಿ ಕೈಲ್ ಜೇಮಿಸನ್ ನಗೆ ಬೀರುತ್ತಾ ಕಣ್ಣು ಕಣ್ಣು ನೋಡುತ್ತಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಸದ್ಯ ಈ ಫೋಟೋ ಸಾಮಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಭರ್ಜರಿ ಕಮೆಂಟ್ಗಳು ಬರುತ್ತಿವೆ.
Your team is struggling to score. But, you are scoring in dugout. Well played Jamieson.???.??????.@IamLokesh26 @VijayVk_ @Fahad_Vj_ @suhana_zuha @Abinandhiniiii @DavidVj007 @Itz_Outlander @sahidafridi197 pic.twitter.com/w5Eo0pJcW5
— sai asok kumar (@saiasokkumar2) September 20, 2021
In College Canteen,
Final year student try to impress fresher Girl : pic.twitter.com/lMNHG2JqfD— Indian Memes Guy (@indianmemesguy) September 20, 2021
ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 19 ಓವರ್ನಲ್ಲಿ ಕೇವಲ 92 ರನ್ಗೆ ಸರ್ವಪತನ ಕಂಡಿತು. ತಂಡದ ಪರ ದೇವದತ್ ಪಡಿಕ್ಕಲ್ 22 ಹಾಗೂ ಶ್ರೀಕರ್ ಭರತ್ 16 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಸ್ಟಾರ್ ಬ್ಯಾಟ್ಸ್ಮನ್ಗಳಾದ ಕೊಹ್ಲಿ 5 ರನ್, ಮ್ಯಾಕ್ಸ್ವೆಲ್ 10 ಮತ್ತು ಎಬಿ ಡಿವಿಲಿಯರ್ಸ್ ಸೊನ್ನೆ ಸುತ್ತಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಆರ್ಸಿಬಿ ಪರ ಯಾವೊಬ್ಬ ಬ್ಯಾಟ್ಸ್ಮನ್ ಸಿಕ್ಸರ್ ಸಿಡಿಸಿಲ್ಲ ಎಂಬುದು ದುರಾದೃಷ್ಟಕರ. ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಆಂಡ್ರೊ ರಸೆಲ್ ತಲಾ 3 ವಿಕೆಟ್ ಕಿತ್ತರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ತಂಡ ಕೇವಲ 10 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ 9 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಶುಭ್ಮನ್ ಗಿಲ್ 34 ಎಸೆತಗಳಲ್ಲಿ 48 ಹಾಗೂ ವೆಂಕಟೇಶ್ ಅಯ್ಯರ್ 27 ಎಸೆತಗಳಲ್ಲಿ ಅಜೇಯ 41 ರನ್ ಸಿಡಿಸಿದರು.
IPL 2021, PBKS vs RR: ಇಂದು ಪಂಜಾಬ್-ರಾಜಸ್ಥಾನ್ ಮುಖಾಮುಖಿ: ಯಾವ ತಂಡ ಬಲಿಷ್ಠ?
(IPL 2021 KKR vs RCB Kyle Jamieson seen smiling in the dugout looking the teams massage therapist Navnita Gautam Photo viral)
Published On - 8:02 am, Tue, 21 September 21