IPL 2021, KKR vs RCB: ಹೀನಾಯ ಪ್ರದರ್ಶನದ ಬಳಿಕ ಕೆಕೆಆರ್ ಸ್ಫೋಟಕ ಬ್ಯಾಟ್ಸ್ಮನ್ಗೆ ಕೊಹ್ಲಿ ಬ್ಯಾಟಿಂಗ್ ಟಿಪ್ಸ್
Venkatesh Iyer: ಆರ್‌ಸಿಬಿ ತಂಡದ ಹೀನಾಯ ಸೋಲಿನ ನಡುವೆಯೂ ಕೆಕೆಆರ್ ತಂಡದ ಆಟಗಾರ ವೆಂಕಟೇಶ್ ಅಯ್ಯರ್ಗೆ ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಬ್ಯಾಟಿಂಗ್ ಟಿಪ್ಸ್ ನೀಡಿದರು.
ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದ ಬೌಲಿಂಗ್ ದಾಳಿಗೆ ತೆಗೆಲೆಯಂತೆ ಉರುಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಬ್ಯಾಟ್ಸ್ಮನ್ಗಳು ಕೇವಲ 92 ರನ್ಗೆ ಸರ್ವಪತನ ಕಂಡಿತು. ನೀಲಿ ಜೆರ್ಸಿಯೊಂದಿಗೆ ಕಣಕ್ಕಿಳಿದ ಆರ್ಸಿಬಿಗೆ (RCB) ಲಕ್ ಒಲಿಯಲಿಲ್ಲ. ಕೋಲ್ಕತ್ತಾ ತಂಡ ಕೇವಲ 10 ಓವರ್ನಲ್ಲಿ 94 ರನ್ ಸಿಡಿಸಿ ಅಮೋಘ ಗೆಲುವು ಕಂಡಿತು. ಅದರಲ್ಲೂ ಕೆಕೆಆರ್ (KKR) ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ವೆಂಕಟೇಶ್ ಅಯ್ಯರ್ (Venkatesh Iyer) ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕೇವಲ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 41 ರನ್ ಚಚ್ಚಿದರು. ಅಯ್ಯರ್ ಅವರ ಒಂದೊಂದು ಹೊಡೆತ ಮನಮೋಹಕವಾಗಿತ್ತು. ಯಂಗ್ಸ್ಟಾರ್ಸ್ಗೆ ಸದಾ ಉತ್ಸಾಹ ತುಂಬುವ, ಬ್ಯಾಟಿಂಗ್ ಟಿಪ್ಸ್ ನೀಡುವ ವಿರಾಟ್ ಕೊಹ್ಲಿ (Virat Kohli) ವೆಂಕಟೇಶ್ಗೂ ಕೆಲವು ಬ್ಯಾಟಿಂಗ್ ಟಿಪ್ಸ್ ನೀಡಿದರು.
ಆರ್‌ಸಿಬಿ ತಂಡದ ಹೀನಾಯ ಸೋಲಿನ ನಡುವೆಯೂ ಎದುರಾಳಿ ಆಟಗಾರನಿಗೆ ಕೊಹ್ಲಿ ಅವರು ಪಂದ್ಯ ಮುಗಿದ ಬಳಿಕ ಬ್ಯಾಟಿಂಗ್ ಟಿಪ್ಸ್ ನೀಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೆಂಕಟೇಶ್ ಅಯ್ಯರ್ಗೆ ಕೊಹ್ಲಿ ಕೆಲ ಟಿಪ್ಸ್ ನೀಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ.
View this post on Instagram
ಇನ್ನೂ ತಂಡದ ಸೋಲಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಬೇಸರ ಹೊರಹಾಕಿದ್ದು, ಸೋಲಿಗೆ ಬ್ಯಾಟ್ಸ್ಮನ್ಗಳೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. “ನಾವು 41 ರನ್ ಆಗುವ ಹೊತ್ತಿಗೆ ಕೇವಲ 2 ವಿಕೆಟ್ಗಳನ್ನಷ್ಟೆ ಕಳೆದುಕೊಂಡಿದ್ದೆವು. ಆದರೆ, ನಂತರದ 20 ರನ್ಗಳಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡೆವು. ಈ ಸಂದರ್ಭ ಪಂದ್ಯದಲ್ಲಿ ಹಿಡಿತ ಸಾಧಿಸಲು ನಮಗೆ ತುಂಬಾನೆ ಕಷ್ಟವಾಯಿತು. ಇದು ಆರ್‌ಸಿಬಿ ತಂಡಕ್ಕೆ ಎಚ್ಚರಿಕೆಯ ಕರೆಗಂಟೆ. ಇದರಿಂದ ಪಾಠ ಕಲಿತಿದ್ದೇವೆ. ಯಾವ ವಿಚಾರವನ್ನು ಸರಿಪಡಿಸಬೇಕು ಎಂಬುದು ಸರಿಯಾಗಿ ಮನವರಿಕೆ ಆಗಿದೆ” ಎಂದು ಕೊಹ್ಲಿ ಪಂದ್ಯ ಮುಗಿದ ಬಳಿಕ ಹೇಳಿದ್ದಾರೆ.
ಇದೇವೇಳೆ ಆರ್ಸಿಬಿಯ ಮೂರು ವಿಕೆಟ್ ಕಿತ್ತ ವರುಣ್ ಚಕ್ರವರ್ತಿ ವಿಚಾರವಾಗಿಯೂ ಕೊಹ್ಲಿ ಮಾತನಾಡಿದ್ದು, ಮಂದಿನ ತಿಂಗಳಿನಲ್ಲಿ ಆರಂಭವಾಗುವ ಟಿ-20 ವಿಶ್ವಕಪ್ಲ್ಲಿ ವರುಣ್ ಚಕ್ರವರ್ತಿ ಭಾರತ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ. ವರುಣ್ ಆಟ ಉತ್ತಮವಾಗಿತ್ತು. ಭಾರತ ತಂಡದಲ್ಲಿ ಈತ ಪ್ರಮುಖ ಅಸ್ತ್ರವಾಗಲಿದ್ದಾನೆ. ಯುವ ಆಟಗಾರರಲ್ಲಿ ಇಂತಹ ಪ್ರದರ್ಶನವನ್ನು ನಾನು ಕಾಣಲು ಇಚ್ಛಿಸುತ್ತೇನೆ. ಇದರಿಂದ ಭಾರತದ ತಂಡದ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 19 ಓವರ್‌ಗಳಲ್ಲಿ 92 ರನ್‌ಗಳಿಗೆ ಸರ್ವಪತನ ಕಂಡಿತು. ತನ್ನ ಅದ್ಭುತ ಪ್ರದರ್ಶನದಿಂದಲೇ ಟಿ-20 ವಿಶ್ವಕಪ್ಗೂ ಆಯ್ಕೆಯಾಗಿರುವ ವರುಣ್ ಚಕ್ರವರ್ತಿ 4 ಓವರ್ಗೆ ಕೇವಲ 13 ರನ್ ನೀಡಿ 3 ವಿಕೆಟ್ ಕಿತ್ತರೆ, ಆಲ್ರೌಂಡರ್ ಆಂಡ್ರೆ ರಸೆಲ್ (9ಕ್ಕೆ 3) ಮಾರಕ ದಾಳಿ ನಡೆಸಿದರು. ಅಲ್ಪ ಮೊತ್ತ ಬೆನ್ನಟ್ಟಿದ ಕೆಕೆಆರ್ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 ರನ್‌ಗಳಿಸಿ ಗೆಲುವಿನ ದಡ ಸೇರಿತು.
Virat Kohli: ಆರ್‌ಸಿಬಿ ಹೀನಾಯ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯ ಹೇಳಿಕೆ
ಸಖತ್ ವೈರಲ್ ಆಗುತ್ತಿದೆ ಆರ್‌ಸಿಬಿ ಥೆರಫಿಸ್ಟ್ ನವನೀತ ಹಾಗೂ ಜೇಮಿಸನ್ ಕಣ್ಣೋಟದ ಫೋಟೋ
(IPL 2021 KKR vs RCB After KKR Beat RCB Venkatesh Iyer was seen talking to RCB captain Virat Kohli)