AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಆರ್​​ಸಿಬಿ ಹೀನಾಯ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯ ಹೇಳಿಕೆ

IPL 2021, KKR vs RCB: ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರೂ ಆರ್​ಸಿಬಿ ಕೆಕೆಆರ್ ವಿರುದ್ಧ ಕೇವಲ 92 ರನ್​ಗೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ ಕೂಡ ತಂಡದ ಸೋಲಿಗೆ ಬ್ಯಾಟ್ಸ್​ಮನ್​ಗಳೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

Virat Kohli: ಆರ್​​ಸಿಬಿ ಹೀನಾಯ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯ ಹೇಳಿಕೆ
IPL 2021 Virat Kohli
TV9 Web
| Updated By: Vinay Bhat|

Updated on: Sep 21, 2021 | 9:04 AM

Share

ಸ್ಟಾರ್ ಅನುಭವಿ ಬ್ಯಾಟ್ಸ್​ಮನ್​ಗಳ ತೀರಾ ಕಳಪೆ ಪ್ರದರ್ಶನದಿಂದಾಗಿ ಐಪಿಎಲ್ 2021ರ (IPL 2021) ಎರಡನೇ ಚರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸೋಲಿನ ಆರಂಭ ಪಡೆದುಕೊಂಡಿದೆ. ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಬ್ಯಾಟಿಂಗ್ ನಿರ್ಧಾರ ತೆಗೆದುಕೊಂಡ ನಾಯಕನೇ ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ ಬಳಗ ಐಪಿಎಲ್‌ನಲ್ಲಿ 7ನೇ ಬಾರಿಗೆ 100 ರನ್‌ಗಿಂತ ಕಡಿಮೆ ಮೊತ್ತ ಪೇರಿಸಿದ ಕೆಟ್ಟ ದಾಖಲೆ ಬರೆದಿದೆ. ಪಂದ್ಯ ಮುಗಿದ ಬಳಿಕ ತಂಡದ ಸೋಲಿನ ಬಗ್ಗೆ ಆರ್​ಸಿಬಿ (RCB) ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಇದು ನಮ್ಮ ತಂಡಕ್ಕೆ ಎಚ್ಚರಿಕೆಯ ಕರೆಗಂಟೆ ಎಂದು ಹೇಳಿದ್ದಾರೆ.

ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರೂ ಆರ್​ಸಿಬಿ ಕೆಕೆಆರ್ ವಿರುದ್ಧ ಕೇವಲ 92 ರನ್​ಗೆ ಆಲೌಟ್ ಆಯಿತು. ಎರಡನೇ ಓವರ್​ನಲ್ಲೇ ವಿರಾಟ್ ಕೊಹ್ಲಿ(5) ಔಟ್ ಆಗಿದ್ದಲ್ಲದೆ ತಂಡಕ್ಕಿದ್ದ ಒಂದು ಡಿಆರ್​ಎಸ್ ರಿವ್ಯೂ ಅನ್ನು ಕಸಿದುಕೊಂಡರು. ಎಡಿ ಡಿವಿಲಿಯರ್ಸ್ ಅವರು ರಸೆಲ್ ಯಾರ್ಕರ್ ದಾಳಿಗೆ ಅಪರೂಪದಲ್ಲೇ ಅಪರೂಪ ಎಂಬಂತೆ ಮೊದಲ ಎಸೆತದಲ್ಲೇ ಔಟ್ ಆದರು. ಇಂಥಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಆಡಬೇಕಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ತಾಳ್ಮೆ ಕಳೆದುಕೊಂಡು 10 ರನ್​ಗೆ ವಿಕೆಟ್ ಒಪ್ಪಿಸಿದರು.

ನಾಯಕ ವಿರಾಟ್ ಕೊಹ್ಲಿ ಕೂಡ ತಂಡದ ಸೋಲಿಗೆ ಬ್ಯಾಟ್ಸ್​ಮನ್​ಗಳೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. “ನಾವು 41 ರನ್ ಆಗುವ ಹೊತ್ತಿಗೆ ಕೇವಲ 2 ವಿಕೆಟ್​ಗಳನ್ನಷ್ಟೆ ಕಳೆದುಕೊಂಡಿದ್ದೆವು. ಆದರೆ, ನಂತರದ 20 ರನ್​ಗಳಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡೆವು. ಈ ಸಂದರ್ಭ ಪಂದ್ಯದಲ್ಲಿ ಹಿಡಿತ ಸಾಧಿಸಲು ನಮಗೆ ತುಂಬಾನೆ ಕಷ್ಟವಾಯಿತು. ಇದು ಆರ್​ಸಿಬಿ ತಂಡಕ್ಕೆ ಎಚ್ಚರಿಕೆಯ ಕರೆಗಂಟೆ. ಇದರಿಂದ ಪಾಠ ಕಲಿತಿದ್ದೇವೆ. ಯಾವ ವಿಚಾರವನ್ನು ಸರಿಪಡಿಸಬೇಕು ಎಂಬುದು ಸರಿಯಾಗಿ ಮನವರಿಕೆ ಆಗಿದೆ” ಎಂದು ಕೊಹ್ಲಿ ಪಂದ್ಯ ಮುಗಿದ ಬಳಿಕ ಹೇಳಿದ್ದಾರೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 19 ಓವರ್‌ಗಳಲ್ಲಿ 92 ರನ್‌ಗಳಿಗೆ ಸರ್ವಪತನ ಕಂಡಿತು. ತನ್ನ ಅದ್ಭುತ ಪ್ರದರ್ಶನದಿಂದಲೇ ಟಿ-20 ವಿಶ್ವಕಪ್​ಗೂ ಆಯ್ಕೆಯಾಗಿರುವ ವರುಣ್ ಚಕ್ರವರ್ತಿ 4 ಓವರ್​​ಗೆ ಕೇವಲ 13 ರನ್ ನೀಡಿ 3 ವಿಕೆಟ್ ಕಿತ್ತರೆ, ಆಲ್ರೌಂಡರ್ ಆಂಡ್ರೆ ರಸೆಲ್ (9ಕ್ಕೆ 3) ಮಾರಕ ದಾಳಿ ನಡೆಸಿದರು. ಅಲ್ಪ ಮೊತ್ತ ಬೆನ್ನಟ್ಟಿದ ಕೆಕೆಆರ್ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 ರನ್‌ಗಳಿಸಿ ಗೆಲುವಿನ ದಡ ಸೇರಿತು.

ಕೆಕೆಆರ್ ತಂಡ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿತ್ತು. ಪ್ಲೇ ಆಫ್​ಗೇರಲು ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿತ್ತು. ಸದ್ಯ ಮಾರ್ಗನ್ ಪಡೆ 8 ಪಂದ್ಯಳಲ್ಲಿ ಮೂರರಲ್ಲಿ ಗೆದ್ದಿದ್ದು ಐದರಲ್ಲಿ ಸೋತಿದೆ. ಐದನೇ ಸ್ಥಾನದೊಂದಿಗೆ ತನ್ನ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿದೆ.

ಇತ್ತ ಆರ್​ಸಿಬಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆಡಿದ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದ್ದು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಒಟ್ಟು 10 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಸಖತ್ ವೈರಲ್ ಆಗುತ್ತಿದೆ ಆರ್​ಸಿಬಿ ಥೆರಫಿಸ್ಟ್ ನವನೀತ ಹಾಗೂ ಜೇಮಿಸನ್ ಕಣ್ಣೋಟದ ಫೋಟೋ

IPL 2021, PBKS vs RR: ಇಂದು ಪಂಜಾಬ್-ರಾಜಸ್ಥಾನ್ ಮುಖಾಮುಖಿ: ಯಾವ ತಂಡ ಬಲಿಷ್ಠ?

(IPL 2021 KKR vs RCB Captain Virat Kohli sounded very disappointed with the batting collapse)