AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bomb threats: ಇಂಗ್ಲೆಂಡ್​ನಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ

ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಲಿಸೇಸ್ಟರ್​ಗೆ ಬಂದಿಳಿದಿದೆ. ಈ ಬಾಂಬ್ ಬೆದರಿಕೆಯಿಂದಾಗಿ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ ಎಂದು ವರದಿಯಾಗಿದೆ.

Bomb threats: ಇಂಗ್ಲೆಂಡ್​ನಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ
New Zealand women's cricket team
Follow us
TV9 Web
| Updated By: Vinay Bhat

Updated on: Sep 21, 2021 | 11:10 AM

ಮೊನ್ನೆಯಷ್ಟೆ ಭದ್ರತಾ ಕಾರಣ ನೀಡಿ ನ್ಯೂಜಿಲೆಂಡ್ ಪರುಷರ ಕ್ರಿಕೆಟ್ ತಂಡ (New Zealand Cricket Team) ಪಾಕಿಸ್ತಾನ (Pakistan) ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಕಿವೀಸ್ ಮಹಿಳಾ ಕ್ರಿಕೆಟ್​ ತಂಡಕ್ಕೆ ಬಾಂಬ್​ ಬೆದರಿಕೆ (Bomb threats) ಬಂದಿದೆ. ನ್ಯೂಜಿಲೆಂಡ್ ಮಹಿಳಾ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಹೀಗಿರುವಾಗ ಬಾಂಬ್ ಬೆದರಿಕೆ ಇಮೇಲ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ (England Cricket) ಮೇಲ್​ಗೆ ಬಂದಿದ್ದು, ಇದನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (NZC) ಮಾಹಿತಿ ನೀಡಿದೆ.

ನಿರ್ದಿಷ್ಟವಾಗಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವನ್ನೇ ಉಲ್ಲೇಖಿಸದಿದ್ದರೂ ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನ್ಯೂಜಿಲೆಂಡ್ ತಂಡ ಹೇಳಿದೆ. ಈ ಬಗ್ಗೆ ತನಿಖೆ ನಡೆಸಿ ಇದೊಂದು ನಂಬಲಾರ್ಹವಲ್ಲ ಎಂಬ ತೀರ್ಮಾನಕ್ಕೂ ಬರಲಾಗಿದೆ. ಇದು ಏನೇ ಆದರೂ ಲಿಸೇಸ್ಟರ್​​ ನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ನ್ಯೂಜಿಲೆಂಡ್​ ಕ್ರಿಕೆಟ್​ ಹೇಳಿದೆ.

ಕ್ರೀಡಾ ಮಾಧ್ಯಮವೊಂದರ ಪ್ರಕಾರ, ನ್ಯೂಜಿಲೆಂಡ್​​​​ ತಂಡದ ಮ್ಯಾನೇಜ್​ಮೆಂಟ್​ ಸದಸ್ಯರನ್ನ ಸಂಪರ್ಕಿಸಿದ ಅನಾಮಧೇಯರು, ತಂಡ ಉಳಿದುಕೊಂಡಿರುವ ಹೋಟೆಲ್​ನಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ನೀವು ಪ್ರಯಾಣ ಬೆಳಸುವ ವಿಮಾನದಲ್ಲೂ ಬಾಂಬ್​ ಇರಿಸುವುದಾಗಿಯೂ ಬೆದರಿಸಲಾಗಿತ್ತು ಎಂದು ವರದಿಯಾಗಿದೆ. ಈ ಬೆದರಿಕೆ ಕರೆ ಬಗ್ಗೆ ಮಂಡಳಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ಮುಟ್ಟಿಸಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಲಿಸೇಸ್ಟರ್​ಗೆ ಬಂದಿಳಿದಿದೆ. ಈ ಬಾಂಬ್ ಬೆದರಿಕೆಯಿಂದಾಗಿ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ ಎಂದು ವರದಿಯಾಗಿದೆ.

ನ್ಯೂಜಿಲೆಂಡ್ ತಂಡ ಐತಿಹಾಸಿಕ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇಂಗ್ಲೆಂಡ್‌ ಕೂಡ ಪಾಕ್‌ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ. ಇಂಗ್ಲೆಂಡ್‌ ಪುರಷರು ಮತ್ತು ವನಿತೆಯರ ತಂಡಗಳೆರಡರ ಮುಂಬರುವ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತನ್ನ ನಿರ್ಧಾರ ಪ್ರಕಟಿಸಿದೆ.

‘ಪಾಕಿಸ್ತಾನಕ್ಕೆ ಪ್ರಯಾಣಿಸುವುದರ ಬಗ್ಗೆ ಆತಂಕ ವ್ಯಕ್ತವಾಗಿರುವುದು ನಮಗೆ ತಿಳಿದಿದೆ.  ಕೋವಿಡ್ ಪರಿಸರದಲ್ಲೂ ಈಗಾಗಲೇ ದೀರ್ಘಾವಧಿಯ ಕಾರ್ಯಾಚರಣೆಯನ್ನು ನಿಭಾಯಿಸಿದ ತಂಡಕ್ಕೆ  ಮುಂದಿನ ಪ್ರವಾಸವು ಮತ್ತಷ್ಟು ಒತ್ತಡವನ್ನು ನೀಡುತ್ತದೆ ಎಂದು  ನಾವು ನಂಬಿದ್ದೇವೆ,’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಹೇಳಿಕೆಯಲ್ಲಿ ತಿಳಿಸಿದೆ.

IPL 2021, KKR vs RCB: ಹೀನಾಯ ಪ್ರದರ್ಶನದ ಬಳಿಕ ಕೆಕೆಆರ್ ಸ್ಫೋಟಕ ಬ್ಯಾಟ್ಸ್​ಮನ್​ಗೆ ಕೊಹ್ಲಿ ಬ್ಯಾಟಿಂಗ್ ಟಿಪ್ಸ್

Virat Kohli: ಆರ್​​ಸಿಬಿ ಹೀನಾಯ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯ ಹೇಳಿಕೆ

(Bomb threats New Zealand womens team receives bomb threats in England NZC confirmed)

ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ