AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಸಖತ್ ವೈರಲ್ ಆಗುತ್ತಿದೆ ಆರ್​ಸಿಬಿ ಥೆರಫಿಸ್ಟ್ ನವನೀತ ಹಾಗೂ ಜೇಮಿಸನ್ ಕಣ್ಣೋಟದ ಫೋಟೋ

Kyle Jamieson - Navnita Gautam: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಥೆರಫಿಸ್ಟ್ ನವನೀತ ಗೌತಮ್ ಮತ್ತು ವೇಗಿ ಕೈಲ್ ಜೇಮಿಸನ್ ನಗೆ ಬೀರುತ್ತಾ ಕಣ್ಣು ಕಣ್ಣು ನೋಡುತ್ತಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

IPL 2021: ಸಖತ್ ವೈರಲ್ ಆಗುತ್ತಿದೆ ಆರ್​ಸಿಬಿ ಥೆರಫಿಸ್ಟ್ ನವನೀತ ಹಾಗೂ ಜೇಮಿಸನ್ ಕಣ್ಣೋಟದ ಫೋಟೋ
Kyle Jamieson and Navnita Gautam
TV9 Web
| Edited By: |

Updated on:Sep 21, 2021 | 8:03 AM

Share

ಸೋಮವಾರ ಅಬುಧಾಬಿಯಲ್ಲಿ (Abu Dabhi) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 31ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲುಕಂಡಿತು. ಇಯಾನ್ ಮಾರ್ಗನ್​ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ (KKR vs RCB) 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಆರ್​ಸಿಬಿಯ ಕಳಪೆ ಪ್ರದರ್ಶನ ಒಂದುಕಡೆ ಸುದ್ದಿಯಾಗುತ್ತಿದ್ದರೆ, ಇತ್ತ ಒಂದು ಫೋಟೋ ಭರ್ಜರಿ ವೈರಲ್ (Viral Photo) ಆಗುತ್ತಿದೆ. ಅದುವೇ ಬೆಂಗಳೂರು ಫ್ರಾಂಚೈಸಿಯ ಸಪೋರ್ಟ್ ಸ್ಟಾಫ್ ಮಸಾಜ್ ಥೆರಫಿಸ್ಟ್ ನವನೀತ ಗೌತಮ್ (Navnita Gautam) ಮತ್ತು ತಂಡದ ಪ್ರಮುಖ ವೇಗಿ ನ್ಯೂಜಿಲೆಂಡ್​ನ ಕೈಲ್ ಜೇಮಿಸನ್ (Kyle Jamieson) ಅವರ ಕಣ್ಣೋಟದ ಫೋಟೋ.

ಹೌದು, ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಸ್ವತಃ ಕೊಹ್ಲಿ ಅವರೇ ತಮ್ಮ ನಿರ್ಧಾರವನ್ನು ಹುಸಿಗೊಳಿಸಿ ಮೊದಲಿಗರಾಗಿ ಕೇವಲ 5 ರನ್​ಗೆ ಪೆವಿಲಿಯನ್ ಸೇರಿಕೊಂಡರು. ನಂತರ ಒಬ್ಬರ ಹಿಂದೆ ಒಬ್ಬರಂತೆ ಔಟಾಗ ತೊಡಗಿದರು.

9.4 ಓವರ್ ಆಗುವ ಹೊತ್ತಿಗೆ ಆರ್​ಸಿಬಿ 53 ರನ್​ಗೆ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದೇ ಸಂದರ್ಭ ಕ್ಯಾಮೆರಾ ಒಮ್ಮೆಲೆ ಆರ್​ಸಿಬಿಯ ಡಗೌಟ್ ಕಡೆ ಕಣ್ಣು ಹಾಹಿಸುತ್ತೆ. ಆಗ ಕಂಡು ಬಂದ ದೃಶ್ಯ ಸದ್ಯ ಎಲ್ಲಡೆ ವೈರಲ್ ಆಗುತ್ತಿದೆ. ಆರ್​ಸಿಬಿ ಥೆರಫಿಸ್ಟ್ ನವನೀತ ಗೌತಮ್ ಮತ್ತು ವೇಗಿ ಕೈಲ್ ಜೇಮಿಸನ್ ನಗೆ ಬೀರುತ್ತಾ ಕಣ್ಣು ಕಣ್ಣು ನೋಡುತ್ತಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಸದ್ಯ ಈ ಫೋಟೋ ಸಾಮಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಭರ್ಜರಿ ಕಮೆಂಟ್​ಗಳು ಬರುತ್ತಿವೆ.

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 19 ಓವರ್​ನಲ್ಲಿ ಕೇವಲ 92 ರನ್​ಗೆ ಸರ್ವಪತನ ಕಂಡಿತು. ತಂಡದ ಪರ ದೇವದತ್ ಪಡಿಕ್ಕಲ್ 22 ಹಾಗೂ ಶ್ರೀಕರ್ ಭರತ್ 16 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಸ್ಟಾರ್ ಬ್ಯಾಟ್ಸ್​ಮನ್​ಗಳಾದ ಕೊಹ್ಲಿ 5 ರನ್, ಮ್ಯಾಕ್ಸ್​ವೆಲ್ 10 ಮತ್ತು ಎಬಿ ಡಿವಿಲಿಯರ್ಸ್ ಸೊನ್ನೆ ಸುತ್ತಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಆರ್​ಸಿಬಿ ಪರ ಯಾವೊಬ್ಬ ಬ್ಯಾಟ್ಸ್​ಮನ್ ಸಿಕ್ಸರ್ ಸಿಡಿಸಿಲ್ಲ ಎಂಬುದು ದುರಾದೃಷ್ಟಕರ. ಕೆಕೆಆರ್ ಪರ ವರುಣ್ ಚಕ್ರವರ್ತಿ ಹಾಗೂ ಆಂಡ್ರೊ ರಸೆಲ್ ತಲಾ 3 ವಿಕೆಟ್ ಕಿತ್ತರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ತಂಡ ಕೇವಲ 10 ಓವರ್​​ನಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ 9 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಶುಭ್ಮನ್ ಗಿಲ್ 34 ಎಸೆತಗಳಲ್ಲಿ 48 ಹಾಗೂ ವೆಂಕಟೇಶ್ ಅಯ್ಯರ್ 27 ಎಸೆತಗಳಲ್ಲಿ ಅಜೇಯ 41 ರನ್ ಸಿಡಿಸಿದರು.

IPL 2021, PBKS vs RR: ಇಂದು ಪಂಜಾಬ್-ರಾಜಸ್ಥಾನ್ ಮುಖಾಮುಖಿ: ಯಾವ ತಂಡ ಬಲಿಷ್ಠ?

ಅತ್ಯಂತ ತುರ್ತಾಗಿ ನಮಗೆ ನೆರವಿನ ಅಗತ್ಯವಿದ್ದಾಗ ಈಸಿಬಿ ನಡುನೀರಿನಲ್ಲಿ ಕೈಬಿಟ್ಟಿದ್ದು ವಿಪರೀತ ಬೇಸರ ತರಿಸಿದೆ: ರಮೀಜ್ ರಾಜಾ

(IPL 2021 KKR vs RCB Kyle Jamieson seen smiling in the dugout looking the teams massage therapist Navnita Gautam Photo viral)

Published On - 8:02 am, Tue, 21 September 21

Follow Us
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ