RCB vs DC, IPL 2023: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದ ಆರ್​ಸಿಬಿ- ಡೆಲ್ಲಿ ಮ್ಯಾಚ್

|

Updated on: Apr 15, 2023 | 6:58 AM

LSG vs PBKS, IPL 2023: ಐಪಿಎಲ್ 2023 ರಲ್ಲಿಂದು ಎರಡು ಪಂದ್ಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲ್. ಮತ್ತೊಂದು ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ.

RCB vs DC, IPL 2023: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದ ಆರ್​ಸಿಬಿ- ಡೆಲ್ಲಿ ಮ್ಯಾಚ್
RCB vs DC and LSG vs PBKS
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುರುವಾಗಲಿರುವ ಮೊದಲ ಮ್ಯಾಚ್​ನಲ್ಲಿ ಫಾಫ್ ಡುಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಲಖನೌದ ಏಕಾನ ಸ್ಟೇಡಿಯಂನಲ್ಲಿ ಸಂಜೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ಮತ್ತು ಶಿಖರ್ ಧವನ್ ಅವರ ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಈ ಎರಡೂ ಪಂದ್ಯಗಳು ಸಾಕಷ್ಟು ರೋಚಕತೆ ಸೃಷ್ಟಿಸಿದ್ದು ಹೈವೋಲ್ಟೇಜ್ ಮ್ಯಾಚ್ ಆಗುವ ನಿರೀಕ್ಷೆ ಇದೆ.

ಆರ್​ಸಿಬಿ-ಡೆಲ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಆಡಿದ ಮೂರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿ ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಕಳೆದ ಮ್ಯಾಚ್​ನಲ್ಲಿ 200+ ರನ್ ಕಲೆಹಾಕಿದ್ದರೂ ಆರ್​ಸಿಬಿಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಬೌಲರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಹರ್ಷಲ್ ಪಟೇಲ್ ಹಾಗೂ ಕರ್ಣ್ ಶರ್ಮಾ ದುಬಾರಿ ಆಗುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ವೇಯ್ನ್ ಪಾರ್ನೆಲ್ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್ ಪಡೆದುಕೊಂಡಿದ್ದರು. ಆದರೆ, 41 ರನ್ ನೀಡಿದ್ದರು. ಡೇವಿಡ್ ವಿಲ್ಲೆ ಹಾಗೂ ಮೊಹಮ್ಮದ್ ಸಿರಾಜ್ ಮಾತ್ರ ಆರ್​ಸಿಬಿ ಪರ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ.

ಬೆಂಗಳೂರು ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಆಗುವುದು ಖಚಿತ. ಶ್ರೀಲಂಕಾದ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ ಮರಳಿರುವುದರಿಂದ ಓರ್ವ ವಿದೇಶಿ ಪ್ಲೇಯರ್ ಹಿಂದೆ ಸರಿಯಬೇಕಿದೆ. ಹರ್ಷಲ್ ಪಟೇಲ್ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ. ಉಳಿದಂತೆ ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲುಮ್ರೂರ್, ಅನುಜ್ ರಾವತ್ ಇದ್ದಾರೆ.

ಇದನ್ನೂ ಓದಿ
IPL 2023: ಐಪಿಎಲ್ ಪ್ರಭಾವ; ಕರ್ನಾಟಕ ಸೇರಿ ದಕ್ಷಿಣದ ಮಾರುಕಟ್ಟೆಗಳಲ್ಲಿ ಡಿಸ್ನಿ ಸ್ಟಾರ್ ವೀಕ್ಷಕರ ಸಂಖ್ಯೆ ಭಾರೀ ಹೆಚ್ಚಳ
IPL 2023: 13 ಕೋಟಿಗೆ ಕೊನೆಗೂ ಬಂತು ಬೆಲೆ; 55 ಎಸೆತಗಳಲ್ಲಿ ಅಬ್ಬರದ ಶತಕ ಸಿಡಿಸಿದ ಬ್ರೂಕ್..!
IPL 2023: ಧೋನಿಗೆ ಮುತ್ತಿಕ್ಕಿದ ಸ್ಟಾರ್ ನಟಿಯ ಅತ್ತೆ..! ಫೋಟೋ ನೋಡಿ
IPL 2023: ಬೆಂಗಳೂರಿನಲ್ಲೇ ಆರ್​ಸಿಬಿ ಸೋಲಿಸಲು ಪಣತೊಟ್ಟ ಪಂತ್..!

IPL 2023 RCB vs DC Live Streaming: ಉಭಯ ತಂಡಗಳಿಗೂ ಬೇಕಿದೆ ಜಯ; ಪಂದ್ಯ ಎಷ್ಟು ಗಂಟೆಗೆ ಆರಂಭ?

ಇತ್ತ ಇದುವರೆಗೆ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಸೋತಿರುವ ಡೆಲ್ಲಿಗೆ ಗೆಲುವು ಅನಿವಾರ್ಯ. ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ಘನೆತೆಗ ತಕ್ಕಂತೆ ಆಡುತ್ತಿಲ್ಲ. ಪೃಥ್ವಿ ಶಾ, ಮನೀಶ್ ಪಾಂಡೆ, ಯಶ್ ದುಲ್, ರೋಮನ್ ಪಾವೆಲ್, ಲಲಿತ್ ಯಾದವ್ ಕಡೆಯಿಂದ ರನ್ ಬರುತ್ತಿಲ್ಲ. ಅಕ್ಷರ್ ಪಟೇಲ್ ಮಾತ್ರ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲೂ ಮುಖೇಶ್ ಕುಮಾರ್, ಮುಸ್ತಫಿಜುರ್ ರೆಹ್ಮಾನ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಮಾರಕವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಪಂದ್ಯ ಆರಂಭ: ಮಧ್ಯಾಹ್ನ 3:30ಕ್ಕೆ

ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಲಖನೌ-ಪಂಜಾಬ್:

ಲಖನೌ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೆ ಸೋತು ಮೂರು ಪಂದ್ಯಗಳನ್ನು ಗೆದ್ದಿದೆ. ನಾಯಕ ಕೆಎಲ್ ರಾಹುಲ್ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರದಿದ್ದರೂ ವಿದೇಶಿ ಪ್ಲೇಯರ್ಸ್ ಅಬ್ಬರಿಸುತ್ತಿದ್ದಾರೆ. ಖೈಲ್ ಮೇಯರ್ಸ್, ಮಾರ್ಕಸ್ ಸ್ಟಾಯಿನಿಸ್ ಹಾಗೂ ನಿಕೋಲಸ್ ಪೂರನ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಆಯುಷ್ ಬದೋನಿ ಕೊಡುಗೆ ಕೂಡ ತಂಡಕ್ಕಿದೆ. ಬೌಲಿಂಗ್​ನಲ್ಲಿ ರವಿ ಬಿಷ್ಟೋಯಿ, ಮಾರ್ಕ್ ವುಡ್ ವಿಕೆಟ್ ಟೇಕಿಂಗ್ ಬೌಲರ್​ಗಳಾಗಿದ್ದಾರೆ. ಜಯದೇವ್ ಉನಾದ್ಕಟ್, ಆವೇಶ್ ಖಾನ್, ಕ್ರುನಾಲ್ ಪಾಂಡ್ಯ, ಅಮಿತ್ ಮಿಶ್ರಾ ಕೂಡ ಇದ್ದಾರೆ.

ಪಂಜಾಬ್ ತಂಡ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿದ್ದು ಬಿಟ್ಟರೆ ನಂತರ ಆಡಿದ ಎರಡು ಮ್ಯಾಚ್​ನಲ್ಲಿ ಸೋಲುಂಡಿದೆ. ನಾಯಕ ಶಿಖರ್ ಧವನ್ ಮಾತ್ರ ತಂಡಕ್ಕೆ ನೆರವಾಗುತ್ತಿದ್ದಾರೆ. ಮ್ಯಾಥ್ಯೂ ಶಾರ್ಟ್, ರಾಜಪಕ್ಸ, ಜಿತೇಶ್ ಶರ್ಮಾ, ಸ್ಯಾಮ್ ಕುರ್ರನ್, ಶಾರುಖ್ ಖಾನ್ ಅಬ್ಬರಿಸಬೇಕಿದೆ. ಬೌಲಿಂಗ್​ನಲ್ಲಿ ಕೂಡ ಪಂಜಾಬ್ ಅರ್ಶ್​ದೀಪ್ ಸಿಂಗ್, ಕಗಿಸೊ ರಬಾಡ ರಂತಹ ಮಾರಕ ವೇಗಿಗಳಲ್ಲಿ ಹೊಂದಿದೆ. ಆದರೆ, ಇವರಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ.

ಪಂದ್ಯ ಆರಂಭ: ಸಂಜೆ 7: 30ಕ್ಕೆ

ಸ್ಥಳ: ಏಕಾನ ಸ್ಟೇಡಿಯಂ, ಲಖನೌ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ