- Kannada News Photo gallery Cricket photos IPL 2023 ms dhoni kissed by mother in law of actress Khushbu Sundar
IPL 2023: ಧೋನಿಗೆ ಮುತ್ತಿಕ್ಕಿದ ಸ್ಟಾರ್ ನಟಿಯ ಅತ್ತೆ..! ಫೋಟೋ ನೋಡಿ
MS Dhoni: ಚೆನ್ನೈ ತಂಡವು ಮುಂದಿನ ಪಂದ್ಯವನ್ನು ಏಪ್ರಿಲ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.
Updated on:Apr 14, 2023 | 9:04 PM

40 ರ ಹರೆಯದ ಮಹೇಂದ್ರ ಸಿಂಗ್ ಧೋನಿಗೆ ವಯಸ್ಸಾದಂತೆ ಅಭಿಮಾನಿಗಳ ಬಳಗ ಹೆಚ್ಚಾಗುತ್ತಲೆ ಇದೆ. ಇದಕ್ಕೆ ಕಾರಣ ಮೈದಾನದಲ್ಲಿ ಧೋನಿಯ ಆಟ. ಅದರಲ್ಲೂ ಈ ಐಪಿಎಲ್ನಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲ ಧೋನಿ ಅಬ್ಬರಿಸಿದ್ದಾರೆ.

ಅದರಲ್ಲೂ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರಾದರೂ, ತಂಡವನ್ನು ಗೆಲ್ಲಿಸಲಾಗಲಿಲ್ಲ. ಇದೀಗ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿರುವ ಧೋನಿಯನ್ನು ವಿಶೇಷ ಅಭಿಮಾನಿಯೊಬ್ಬರು ಭೇಟಿಯಾಗಿದ್ದಾರೆ.

ಈ ವಯಸ್ಸಾದ ಮಹಿಳೆ ಬೇರೆ ಯಾರೂ ಅಲ್ಲ, ಧೋನಿಯ ದೊಡ್ಡ ಅಭಿಮಾನಿಯಾಗಿರುವ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರ ಅತ್ತೆ. ಧೋನಿ ಜೊತೆಗಿನ ಫೋಟೋ ಕ್ಲಿಕ್ಕಿಸಿಕೊಂಡ ಖುಷ್ಬೂ ಅತ್ತೆ, ಆ ಬಳಿಕ ಮಹಿಯ ಕೆನ್ನೆಗೆ ಮುತ್ತಿಟ್ಟರು.

ಖುಷ್ಬು ಸುಂದರ್ ಕೂಡ ಧೋನಿ ಜೊತೆ ಫೋಟೋ ತೆಗೆಸಿಕೊಂಡಿದ್ದು ಆ ಬಳಿಕ ಧೋನಿ ಜೊತೆಗಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

ಈ ಸೀಸನ್ನಲ್ಲಿ ಧೋನಿ ಮೂರು ಇನ್ನಿಂಗ್ಸ್‌ಗಳಲ್ಲಿ 58 ರ ಸರಾಸರಿಯಲ್ಲಿ 58 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 200ಕ್ಕಿಂತ ಹೆಚ್ಚಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಬ್ಬರಿಸಿದ್ದ ಧೋನಿ 17 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ಆದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಚೆನ್ನೈ ತಂಡವು ಮುಂದಿನ ಪಂದ್ಯವನ್ನು ಏಪ್ರಿಲ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಈ ಪಂದ್ಯದಲ್ಲಿ ಧೋನಿ ಅಬ್ಬರಿಸುವ ನಿರೀಕ್ಷೆಯಿದೆ.
Published On - 9:04 pm, Fri, 14 April 23



















