IPL 2023: ಈ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಹೊಡೆಸಿಕೊಂಡಿರುವ ಬೌಲರ್​ಗಳಿವರು

IPL 2023: ಇದುವರೆಗೆ ಈ ಟೂರ್ನಿಯಲ್ಲಿ ಬರೋಬ್ಬರಿ 265 ಸಿಕ್ಸರ್​ಗಳು ಸಿಡಿದಿವೆ. ಇದರಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನು ಹೊಡೆಸಿಕೊಂಡ ಬೌಲರ್​ಗಳು ಯಾರ್ಯಾರು ಎಂಬುದರ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: Apr 14, 2023 | 5:37 PM

16ನೇ ಆವೃತ್ತಿಯ ಐಪಿಎಲ್​ನಲ್ಲಿ ಇದುವರೆಗೆ 18 ಪಂದ್ಯಗಳು ನಡೆದಿವೆ. ಈ 18 ಪಂದ್ಯಗಳಲ್ಲಿ ಬೌಂಡರಿ, ಸಿಕ್ಸರ್​ಗಳ ಮಳೆಯೇ ಸುರಿದಿದೆ. ಇದುವರೆಗೆ ಈ ಟೂರ್ನಿಯಲ್ಲಿ ಬರೋಬ್ಬರಿ 265 ಸಿಕ್ಸರ್​ಗಳು ಸಿಡಿದಿವೆ. ಇದರಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನು ಹೊಡೆಸಿಕೊಂಡ ಬೌಲರ್​ಗಳು ಯಾರ್ಯಾರು ಎಂಬುದರ ವಿವರ ಇಲ್ಲಿದೆ.

1 / 7
ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆಸಿಕೊಂಡ ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಆಟಗಾರರು ಅಗ್ರ 3 ಸ್ಥಾನದಲ್ಲಿದ್ದಾರೆ. ಅವರಲ್ಲಿ ಗುಜರಾತ್ ಟೈಟಾನ್ಸ್ ವೇಗದ ಬೌಲರ್ ಯಶ್ ದಯಾಲ್ ಅತಿ ಹೆಚ್ಚು ಸಿಕ್ಸರ್ ತಿಂದ ಮೊದಲ ಬೌಲರ್ ಆಗಿದ್ದು, ಇದುವರೆಗು ಈ ಆಟಗಾರ ಒಟ್ಟು 11 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ.

2 / 7
ಅದರಲ್ಲೂ ಒಂದೇ ಓವರ್‌ನಲ್ಲಿ ಬರೋಬ್ಬರಿ ಐದು ಸಿಕ್ಸರ್‌ಗಳನ್ನು ಯಶ್ ದಯಾಲ್ ಹೊಡೆಸಿಕೊಂಡಿದ್ದರು. ಕೋಲ್ಕತ್ತಾ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಈ ಐದು ಸಿಕ್ಸರ್​ಗಳ ದಾಖಲೆ ಬರೆದಿದ್ದರು.

3 / 7
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ಕೂಡ ಸಿಕ್ಸರ್ ಹೊಡೆಸಿಕೊಂಡವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಆಟಗಾರ ಒಟ್ಟು 10 ಸಿಕ್ಸರ್ ತಿಂದಿದ್ದಾರೆ. ಈ ಸೀಸನ್​ನಲ್ಲಿ 4 ಪಂದ್ಯಗಳನ್ನಾಡಿರುವ ತುಷಾರ್ 7 ವಿಕೆಟ್ ಪಡೆದಿದ್ದರಾದರೂ 11.44 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

4 / 7
ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಮುಖೇಶ್ ಕುಮಾರ್ ಅತಿ ಹೆಚ್ಚು ಸಿಕ್ಸರ್ ತಿಂದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇದುವರೆಗು ಒಟ್ಟು 9 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ.

5 / 7
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಕ್ ವುಡ್ ಇಲ್ಲಿಯವರೆಗೆ 8 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ.

6 / 7
ಇವರಲ್ಲದೆ ಆರ್​ಸಿಬಿ ತಂಡದ ಕರ್ಣ್ ಶರ್ಮಾ, ಗುಜರಾತ್ ಟೈಟಾನ್ಸ್ ತಂಡದ ಅಲ್ಜಾರಿ ಜೋಸೆಫ್ ಮತ್ತು ಲಿಟಲ್ ಕೂಡ ತಲಾ 8 ಸಿಕ್ಸರ್​ಗಳನ್ನು ಹೊಡೆಸಿಕೊಂಡಿದ್ದಾರೆ.

7 / 7
Follow us