ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ನ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬ್ರೂಕ್ ಕೊನೆಯವರೆಗೂ ಅಜೇಯರಾಗಿ ಉಳಿದು ಕೇವಲ 55 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಂತೆ 100 ರನ್ ಬಾರಿಸಿದರು.
ವಾಸ್ತವವಾಗಿ ಬ್ರೂಕ್ ಮೊದಲ 3 ಪಂದ್ಯಗಳಲ್ಲಿ ಸೂಪರ್ ಫ್ಲಾಪ್ ಆಗಿದ್ದರು. ಹೀಗಾಗಿ ಬ್ರೂಕ್ ಅವರಿಗೆ ಮಿನಿ ಹರಾಜಿನಲ್ಲಿ ಟ13 ಕೋಟಿ ನೀಡಿದ್ದು ವ್ಯರ್ಥ ಎಂದು ಹಲವರು ಮಾತನಾಡಲಾರಂಭಿಸಿದ್ದರು. ಆದರೆ ಇಂದಿನ ಪಂದ್ಯದಲ್ಲಿನ ಇನ್ನಿಂಗ್ಸ್ ಮೂಲಕ ಬ್ರೂಕ್ ಎಲ್ಲರಿಗೂ ಉತ್ತರ ನೀಡಿದ್ದಾರೆ.
ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಸುನಿಲ್ ನರೈನ್ರಂತಹ ಸ್ಟಾರ್ ಬೌಲರ್ಗಳಿಗೆ ಮಣ್ಣು ಮುಕ್ಕಿಸಿದ ಬ್ರೂಕ್ 32 ಎಸೆತಗಳಲ್ಲಿ 50 ರನ್ ಪೂರೈಸಿದರು. 50 ರನ್ ಪೂರೈಸಿದ ನಂತರ ಮತ್ತಷ್ಟು ಆಕ್ರಮಣಕಾರಿಯಾದ ಬ್ರೂಕ್, ಲಾಕಿ ಫರ್ಗುಸನ್ ಅವರ ಓವರ್‌ನಲ್ಲಿ ಬೌಂಡರಿ ಸಿಕ್ಸರ್ಗಳ ಮಳೆಗರೆದು ಈ ಓವರ್‌ನಲ್ಲಿ 23 ರನ್ ಕಲೆಹಾಕಿದರು.
ಈ ಶತಕದೊಂದಿಗೆ ಐಪಿಎಲ್ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಬರೆದ ಬ್ರೂಕ್, 16ನೇ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದರು.
ಇವರಲ್ಲದೆ ತಂಡದ ನಾಯಕ ಮಾರ್ಕ್ರಾಮ್ ಕೂಡ ಕೋಲ್ಕತ್ತಾ ವಿರುದ್ಧ 26 ಎಸೆತಗಳಲ್ಲಿ 50 ರನ್ ಗಳಿಸಿದರು. ಮಾರ್ಕ್ರಾಮ್ ಅವರ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 5 ಸಿಕ್ಸರ್ ಹಾಗೂ 2 ಬೌಂಡರಿ ಸೇರಿದ್ದವು.
Published On - 9:39 pm, Fri, 14 April 23