WTC Final 2023: ಐಪಿಎಲ್ ಮೀಸಲು ದಿನದಿಂದ ಟೀಮ್ ಇಂಡಿಯಾಕ್ಕೆ ಹೊಡೆತ: ಗಿಲ್, ಶಮಿ, ಜಡೇಜಾ ಭಾರತದಲ್ಲೇ ಬಾಕಿ

|

Updated on: May 29, 2023 | 11:02 AM

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಜೂನ್ 7ಕ್ಕೆ ಆರಂಭವಾಗಲಿದೆ. ಗಿಲ್, ಶಮಿ, ಜಡೇಜಾ ಗುರುವಾರ ಲಂಡನ್​ಗೆ ತಲುಪಲಿದ್ದಾರೆ. ನಂತರ ಒಂದು ದಿನದ ವಿಶ್ರಾಂತಿ ಪಡೆದುಕೊಂಡು ಅಭ್ಯಾಸ ಶುರು ಮಾಡಬೇಕಿದೆ.

WTC Final 2023: ಐಪಿಎಲ್ ಮೀಸಲು ದಿನದಿಂದ ಟೀಮ್ ಇಂಡಿಯಾಕ್ಕೆ ಹೊಡೆತ: ಗಿಲ್, ಶಮಿ, ಜಡೇಜಾ ಭಾರತದಲ್ಲೇ ಬಾಕಿ
Gill Shami and Jadeja
Follow us on

ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ (WTC Final 2023) ತಯಾರಿ ನಡೆಸುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಫೈನಲ್ (IPL 2023 Fianl) ಅಂದುಕೊಂಡಂತೆ ಭಾನುವಾರ ನಡೆಯದ ಕಾರಣ ಮೀಸಲು ದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ಲಂಡನ್​ಗೆ ತೆರಳಬೇಕಿದ್ದ ಟೀಮ್ ಇಂಡಿಯಾದ ಮೂವರು ಪ್ಲೇಯರ್ಸ್ ಭಾರತದಲ್ಲೇ ಬಾಕಿ ಆಗಿದ್ದಾರೆ. ಗುಜರಾತ್ ತಂಡದ ಶುಭ್​ಮನ್ ಗಿಲ್ (Shubman Gill), ಮೊಹಮ್ಮದ್ ಶಮಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ನ ರವೀಂದ್ರ ಜಡೇಜಾ ಇಂದು ಯುಕೆಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಐಪಿಎಲ್ 2023 ಫೈನಲ್ ಒಂದು ದಿನ ಮುಂದೆ ಹೋಗಿರುವ ಪರಿಣಾಮ ಭಾರತದಲ್ಲೇ ಉಳಿಯಬೇಕಾಗಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಜೂನ್ 7ಕ್ಕೆ ಆರಂಭವಾಗಲಿದೆ. ಗಿಲ್, ಶಮಿ, ಜಡೇಜಾ ಗುರುವಾರ ಲಂಡನ್​ಗೆ ತಲುಪಲಿದ್ದಾರೆ. ನಂತರ ಒಂದು ದಿನದ ವಿಶ್ರಾಂತಿ ಪಡೆದುಕೊಂಡು ಅಭ್ಯಾಸ ಶುರು ಮಾಡಬೇಕಿದೆ. ಈ ಮೂವರನ್ನು ಬಿಟ್ಟು ಉಳಿದ ಎಲ್ಲ ಪ್ಲೇಯರ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಕೋಚ್ ದ್ರಾವಿಡ್​ಗೆ ಸಂಪೂರ್ಣ ಆಟಗಾರರನ್ನು ಒಟ್ಟಿಗೆ ಸೇರಿಸಿ ಅಭ್ಯಾಸ ನಡೆಸಲು ಕಷ್ಟವಾಗಲಿದೆ.

CSK Vs GT Final Weather Forecast: ಸೋಮವಾರವೂ ಅಹಮದಾಬಾದ್​ನಲ್ಲಿ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ

ಇದನ್ನೂ ಓದಿ
CSK vs GT Head to Head: ಚೆನ್ನೈ-ಗುಜರಾತ್ ಪೈಕಿ ಯಾರು ಬಲಿಷ್ಠ?: ಇಂದು ಯಾರಿಗೆ ಗೆಲುವು?
IPL Final Reserve Day: ಇಂದು ಮೀಸಲು ದಿನ ಕೂಡ ಮಳೆ ಬಂದರೆ ಏನಾಗಲಿದೆ ಫೈನಲ್?: ಚಾಂಪಿಯನ್ ಯಾರು?, ಇಲ್ಲಿದೆ ಮಾಹಿತಿ
CSK vs GT, IPL 2023 Rain: ರಣಭೀಕರ ಮಳೆಗೆ ತತ್ತರಿಸಿದ ನರೇಂದ್ರ ಮೋದಿ ಸ್ಟೇಡಿಯಂ: ಇಂದುಕೂಡ ಫೈನಲ್ ಅನುಮಾನ
IPL 2023 Final: ಐಪಿಎಲ್ ಫೈನಲ್ ಫಿಕ್ಸ್? CSK ರನ್ನರ್ ಅಪ್..?

ನಾಯಕ ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಬದಲು ಆಯ್ಕೆ ಆಗಿರುವ ಯಶಸ್ವಿ ಜೈಸ್ವಾಲ್ ಎರಡನೇ ಬ್ಯಾಚ್ ಆಗಿ ಭಾನುವಾರ ಸಂಜೆ ತಲುಪಿದ್ದಾರೆ. ಮೊದಲ ಬ್ಯಾಚ್ ಮೇ 24ಕ್ಕೆ ತೆರಳಿತ್ತು. ಇದರಲ್ಲಿ ವಿರಾಟ್ ಕೊಹ್ಲಿ, ಅಶ್ವಿನ್, ಅಕ್ಷರ್ ಪಟೇಲ್ ಸೇರಿದಂತೆ ಕೆಲ ಆಟಗಾರರಿದ್ದರು. ಇವರೆಲ್ಲ ಈಗಾಗಲೇ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಕ್ಯಾಪ್ಟನ್ ರೋಹಿತ್ ಇಂದು ಪ್ರ್ಯಾಕ್ಟೀಸ್​ಗೆ ಇಳಿಯಲಿದ್ದಾರೆ.

ಫೈನಲ್ ವೇಳೆ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ:

ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನ ವೇಳಾಪಟ್ಟಿಯನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಮಾಹಿತಿ ನೀಡಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದ ಸ್ಥಳಗಳನ್ನು ಘೋಷಿಸಲಾಗುವುದು. ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಟೆಸ್ಟ್ ಆಡುವ ದೇಶಗಳು ಮತ್ತು ಅಸೋಸಿಯೇಟ್ ರಾಷ್ಟ್ರಗಳ ಸದಸ್ಯರ ನಡುವಿನ ಸಭೆಯ ನಂತರ ಏಷ್ಯಾ ಕಪ್ 2023ರ ಭವಿಷ್ಯವನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ