IPL 2023: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಸಿಹಿ ಸುದ್ದಿ- ಸಿಎಸ್​ಕೆಗೆ ಕಹಿ ಸುದ್ದಿ..!

|

Updated on: Feb 20, 2023 | 4:48 PM

IPL 2023: ಗಾಯದಿಂದ ಚೇತರಿಸಿಕೊಂಡಿರುವ ಮ್ಯಾಕ್ಸ್‌ವೆಲ್, ದೇಶೀ ಪಂದ್ಯಾವಳಿಯಲ್ಲಿ ಆಡುವುದರೊಂದಿಗೆ ಅಂತಾರಾಷ್ಟ್ರೀಯ ತಂಡಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ.

IPL 2023: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಸಿಹಿ ಸುದ್ದಿ- ಸಿಎಸ್​ಕೆಗೆ ಕಹಿ ಸುದ್ದಿ..!
ಕೊಹ್ಲಿ- ಧೋನಿ
Follow us on

ಐಪಿಎಲ್ 16ನೇ ಸೀಸನ್ (IPL 2023) ಆರಂಭವಾಗಲು ದಿನಗಣನೆ ಆರಂಭವಾಗಿದೆ. ಇದರ ವೇಳಾಪಟ್ಟಿಯೂ ಈಗಾಗಲೇ ಬಿಡುಗಡೆಯಾಗಿದೆ. ಈ ಆವೃತ್ತಿಯ ಐಪಿಎಲ್​ನ ಮೊದಲ ಪಂದ್ಯ ಮಾರ್ಚ್ 31 ರಂದು ಆರಂಭವಾಗಲಿದ್ದು, ಮೊದಲ ಪಂದ್ಯ ಕಳೆದ ವರ್ಷದ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Gujarat Titans and Chennai Super Kings) ನಡುವೆ ನಡೆಯಲಿದೆ. ಆದರೆ ಈ ನಡುವೆ ಎರಡು ಪ್ರಮುಖ ತಂಡಗಳಿಗೆ ಕಹಿ- ಸಿಹಿ ಸುದ್ದಿ ಎದುರಾಗಿದೆ. ಐಪಿಎಲ್​ನ ಬದ್ಧವೈರಿ ತಂಡಗಳಾದ ಸಿಎಸ್​ಕೆ (CSK) ಹಾಗೂ ಆರ್​ಸಿಬಿ (RCB) ತಂಡಗಳ ಬಗ್ಗೆ ಇಲ್ಲಿ ಮಾತನಾಡುತ್ತಿದ್ದು, ಇದರಲ್ಲಿ ಆರ್​ಸಿಬಿಗೆ ಸಿಹಿ ಸುದ್ದಿ ಸಿಕ್ಕರೆ, ಸಿಎಸ್​ಕೆ ತಂಡಕ್ಕೆ ಕಹಿ ಸುದ್ದಿ ಎದುರಾಗಿದೆ.

ಸಿಎಸ್​ಕೆ ತಂಡಕ್ಕೆ ಕಹಿ ಸುದ್ದಿ

ಮಿನಿ ಹರಾಜಿನಲ್ಲಿ ಚೆನ್ನೈ ತಂಡವನ್ನು ಸೇರಿಕೊಂಡಿದ್ದ ನ್ಯೂಜಿಲೆಂಡ್ ಆಲ್ ರೌಂಡರ್ ಜೇಮಿಸನ್ ಬೆನ್ನುನೋವಿನಿಂದಾಗಿ ಐಪಿಎಲ್ ಸೀಸನ್​ನಿಂದ ಹೊರಗುಳಿದಿದ್ದಾರೆ. ಕಳೆದ 6-7 ತಿಂಗಳಿಂದ ಅವರು ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯ ಮೊದಲು ಜೇಮಿಸನ್ ಅಭ್ಯಾಸ ಪಂದ್ಯದಲ್ಲಿ ಆಡಿದ್ದರು. ಆದರೆ ನಂತರ ಅವರು ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯಬೇಕಾಯಿತು.

Jasprit Bumrah: ದೇಶದ ಪರ ಅಲ್ಲ… ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಬುಮ್ರಾ..!

ಆರ್‌ಸಿಬಿಗೆ ಸಂತಸದ ಸುದ್ದಿ

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಫಿಟ್ ಆಗಿರುವುದು ಆರ್​ಸಿಬಿ ಪಾಲಿಗೆ ಸಂತಸದ ಸುದ್ದಿ. ಮ್ಯಾಕ್ಸ್‌ವೆಲ್ ದೇಶೀಯ ಕ್ರಿಕೆಟ್ ಪಂದ್ಯಾವಳಿಗೆ ಪುನರಾಗಮನ ಮಾಡಿರುವುದು ಆರ್​ಸಿಬಿಗೆ ಆನೆಬಲ ಬಂದಂತ್ತಾಗಿದೆ. ವಾಸ್ತವವಾಗಿ ಪಾರ್ಟಿಯ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಮ್ಯಾಕ್ಸ್‌ವೆಲ್ ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಆದರೀಗ ಗಾಯದಿಂದ ಚೇತರಿಸಿಕೊಂಡಿರುವ ಮ್ಯಾಕ್ಸ್‌ವೆಲ್, ದೇಶೀ ಪಂದ್ಯಾವಳಿಯಲ್ಲಿ ಆಡುವುದರೊಂದಿಗೆ ಅಂತಾರಾಷ್ಟ್ರೀಯ ತಂಡಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ.

ಇದೇ ವೇಳೆ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದ್ದು, ಒಟ್ಟು 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಈ 10 ತಂಡಗಳನ್ನು ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಸೀಸನ್​ನಲ್ಲಿ ಎಲ್ಲಾ ಪಂದ್ಯಗಳನ್ನು ದೇಶದ ಒಟ್ಟು 12 ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ. ಮುಂಬೈ ತನ್ನ ಆರಂಭಿಕ ಪಂದ್ಯವನ್ನು ಬೆಂಗಳೂರು ವಿರುದ್ಧ ಆಡಲಿದ್ದು, ಈ ಪಂದ್ಯ ಏಪ್ರಿಲ್ 2 ರಂದು ರಾತ್ರಿ 7:30 ಕ್ಕೆ ಆರಂಭವಾಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Mon, 20 February 23