ಹಾರ್ದಿಕ್ ಪಾಂಡ್ಯ (Hardik Pandya) ವಿಚಾರದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆಲ್ಲ ತೆರೆ ಬಿದ್ದಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ, ಈ ಆವೃತ್ತಿಯಿಂದ ಮತ್ತೊಮ್ಮೆ ತಮ್ಮ ಹಳೆಯ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಊಹಪೋಹಾಗಳು ಎದ್ದಿದ್ದವು. ಆದರೆ ಇದೀಗ ಗುಜರಾತ್ ಫ್ರಾಂಚೈಸಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಹಾರ್ದಿಕ್ರನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಫ್ರಾಂಚೈಸ್ ಯಶಸ್ವಿಯಾಗಿದೆ.
ಆದರೆ ಹಾರ್ದಿಕ್ ಮುಂಬೈ ಸೇರಲು ಇನ್ನು ಅವಕಾಶವಿದೆ. ವಾಸ್ತವವಾಗಿ ಇಂದು ಆಟಗಾರರನ್ನು ಉಳಿಸಿಕೊಳ್ಳಲು ಹಾಗೂ ತಂಡದಿಂದ ಬಿಡುಗಡೆ ಮಾಡಲು ಎಲ್ಲಾ ತಂಡಗಳಿಗೆ ಕೊನೆಯ ದಿನ. ಆದರೆ ಆಟಗಾರರ ಟ್ರೇಡ್ ವಿಂಡೋ ಇನ್ನು ಡಿಸೆಂಬರ್ 12 ರವರೆಗೆ ಸಕ್ರಿಯವಾಗಿರಲಿದೆ. ಹೀಗಾಗಿ ಹಾರ್ದಿಕ್ ಅವರನ್ನು ವ್ಯಾಪಾರದ ಮೂಲಕ ಖರೀದಿಸುವ ಅವಕಾಶ ಮುಂಬೈ ತಂಡಕ್ಕೆ ಇನ್ನೂ ಇದೆ. ಹೀಗಾಗಿ ಟ್ರೇಡಿಂಗ್ ಅವದಿ ಮುಗಿಯುವವರೆಗು ಹಾರ್ದಿಕ್ ವಿಚಾರದಲ್ಲಿ ಏನನ್ನು ಹೇಳಲು ಸಾಧ್ಯವಿಲ್ಲ.
Our Retained & Released Player List.. pic.twitter.com/OcDFIFyJab
— Gujarat Titans (@Gujrat_titans_) November 26, 2023
ತಂಡದಿಂದ ಬಿಡುಗಡೆಯಾದ ಆಟಗಾರರು: ಯಶ್ ದಯಾಳ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ್ ಸಾಂಗ್ವಾನ್, ಒಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದಸುನ್ ಶನಕ.
ಉಳಿಸಿಕೊಂಡ ಆಟಗಾರರ ಪಟ್ಟಿ: ಡೇವಿಡ್ ಮಿಲ್ಲರ್, ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ರಶೀದ್ ಖಾನ್, ಜೋಶ್ ಲಿಟಲ್, ಮೋಹಿತ್ ಶರ್ಮಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:39 pm, Sun, 26 November 23