IND vs AUS 2nd T20 Highlights: ಆಸ್ಟ್ರೇಲಿಯಾ ವಿರುದ್ಧ ಸತತ 2ನೇ ಪಂದ್ಯ ಗೆದ್ದ ಭಾರತ

ಪೃಥ್ವಿಶಂಕರ
|

Updated on:Nov 26, 2023 | 10:51 PM

India vs Australia 2nd T20I Highlights in Kannada: ಆಆಸ್ಟ್ರೇಲಿಯಾ ವಿರುದ್ಧ ತಿರುವನಂತಪುರಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.

IND vs AUS 2nd T20 Highlights: ಆಸ್ಟ್ರೇಲಿಯಾ ವಿರುದ್ಧ ಸತತ 2ನೇ ಪಂದ್ಯ ಗೆದ್ದ ಭಾರತ
ಭಾರತ- ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧ ತಿರುವನಂತಪುರಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ರುತುರಾಜ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ 235 ರನ್ ಕಲೆಹಾಕತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 26 Nov 2023 10:51 PM (IST)

    44 ರನ್‌ಗಳ ಜಯ

    ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 44 ರನ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 235 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.

  • 26 Nov 2023 10:49 PM (IST)

    19 ಓವರ್‌ ಮುಕ್ತಾಯ

    ಆಸ್ಟ್ರೇಲಿಯ ತಂಡ 19 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ. ಮುಖೇಶ್ ಕುಮಾರ್ ಆಟದ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.

  • 26 Nov 2023 10:38 PM (IST)

    9ನೇ ವಿಕೆಟ್

    ಆಸ್ಟ್ರೇಲಿಯ ತಂಡ 155 ರನ್ ಗಳಿಸುವಷ್ಟರಲ್ಲಿ 9ನೇ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾ ಗೆಲುವಿಗೆ ಕೇವಲ 1 ವಿಕೆಟ್ ಅಂತರದಲ್ಲಿದೆ.

  • 26 Nov 2023 10:29 PM (IST)

    8ನೇ ವಿಕೆಟ್

    ಟೀಂ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದಿದೆ. ಆಸ್ಟ್ರೇಲಿಯಾ 152 ರನ್‌ಗಳಿಗೆ 8ನೇ ವಿಕೆಟ್ ಕಳೆದುಕೊಂಡಿತು.

  • 26 Nov 2023 10:22 PM (IST)

    7ನೇ ಹೊಡೆತ

    ಆಸ್ಟ್ರೇಲಿಯಾ ತಂಡವೂ 7ನೇ ವಿಕೆಟ್ ಕಳೆದುಕೊಂಡಿದೆ. ಪ್ರಸಿದ್ಧ್ ಕೃಷ್ಣ, ಶಾನ್ ಅಬಾಟ್ ವಿಕೆಟ್ ಪಡೆದರು.

  • 26 Nov 2023 10:18 PM (IST)

    ಸ್ಟೊಯಿನಿಸ್ ಔಟ್

    ಟೀಂ ಇಂಡಿಯಾ ಅತಿ ಮುಖ್ಯವಾದ ವಿಕೆಟ್ ಪಡೆದುಕೊಂಡಿದೆ. 45 ರನ್‌ಗಳ ಇನಿಂಗ್ಸ್‌ ಆಡಿದ್ದ ಮಾರ್ಕಸ್ ಸ್ಟೊಯಿನಿಸ್ ಕೂಡ ಔಟಾದರು.

  • 26 Nov 2023 10:12 PM (IST)

    ಡೇವಿಡ್ ವಿಕೆಟ್

    ಆಸ್ಟ್ರೇಲಿಯಾ ತಂಡ ಐದನೇ ವಿಕೆಟ್ ಕಳೆದುಕೊಂಡಿದೆ. ಟಿಮ್ ಡೇವಿಡ್ 37 ರನ್‌ಗಳ ಇನಿಂಗ್ಸ್‌ನಲ್ಲಿ ಔಟಾದರು. ರವಿ ಬಿಷ್ಣೋಯ್ ಟಿಮ್ ಡೇವಿಡ್ ವಿಕೆಟ್ ಪಡೆದರು.

  • 26 Nov 2023 10:06 PM (IST)

    ಸ್ಟೋಯ್ನಿಸ್ ಅಬ್ಬರ

    ಆಸ್ಟ್ರೇಲಿಯ 13 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಮಾರ್ಕಸ್ ಸ್ಟೋನಿಸ್ 42 ರನ್ ಹಾಗೂ ಟಿಮ್ ಡೇವಿಡ್ 33 ರನ್ ಗಳಿಸಿ ಆಡುತ್ತಿದ್ದಾರೆ. ಇಬ್ಬರು ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಿದ್ದಾರೆ.

  • 26 Nov 2023 09:58 PM (IST)

    10 ಓವರ್‌ ಮುಕ್ತಾಯ

    ಆಸ್ಟ್ರೇಲಿಯ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ. ಸದ್ಯ ಮಾರ್ಕಸ್ ಸ್ಟೊಯಿನಿಸ್ ಮತ್ತು ಟಿಮ್ ಡೇವಿಡ್ ಕ್ರೀಸ್‌ನಲ್ಲಿದ್ದಾರೆ.

  • 26 Nov 2023 09:39 PM (IST)

    ನಾಲ್ಕನೇ ವಿಕೆಟ್ ಪತನ

    ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡಕ್ಕೆ ನಾಲ್ಕನೇ ಹೊಡೆತ ನೀಡಿದೆ. ಸ್ಟೀವ್ ಸ್ಮಿತ್ 15 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.

  • 26 Nov 2023 09:29 PM (IST)

    ಮ್ಯಾಕ್ಸ್‌ವೆಲ್ ಕೂಡ ಔಟ್

    ಟೀಂ ಇಂಡಿಯಾ ಮೂರನೇ ಯಶಸ್ಸು ಕಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ 12 ರನ್ ಗಳಿಸಿ ಔಟಾದರು.

  • 26 Nov 2023 09:25 PM (IST)

    ಎರಡನೇ ವಿಕೆಟ್ ಪತನ

    ಆಸ್ಟ್ರೇಲಿಯ ತಂಡ 39 ರನ್ ಗಳಿಸುವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ರವಿ ಬಿಷ್ಣೋಯ್, ಜೋಶ್ ಇಂಗ್ಲಿಸ್ ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

  • 26 Nov 2023 09:25 PM (IST)

    ಶಾರ್ಟ್ ವಿಕೆಟ್

    ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ಮೊದಲ ಹೊಡೆತ ನೀಡಿದೆ. ರವಿ ಬಿಷ್ಣೋಯ್ ಅವರು ಮ್ಯಾಥ್ಯೂ ಶಾರ್ಟ್ ವಿಕೆಟ್ ಪಡೆದರು.

  • 26 Nov 2023 09:11 PM (IST)

    ಅಬ್ಬರದ ಆರಂಭ

    ಆಸ್ಟ್ರೇಲಿಯ ತಂಡ 2 ಓವರ್‌ಗಳಲ್ಲಿ 31 ರನ್ ಗಳಿಸಿದೆ. ಸ್ಟೀವ್ ಸ್ಮಿತ್ ಮತ್ತು ಮ್ಯಾಥ್ಯೂ ಶಾರ್ಟ್ ಸದ್ಯ ಕ್ರೀಸ್‌ನಲ್ಲಿದ್ದಾರೆ.

  • 26 Nov 2023 08:55 PM (IST)

    236 ರನ್‌ಗಳ ಗುರಿ

    ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿತು. ರಿತುರಾಜ್ ಗಾಯಕ್ವಾಡ್ ಟೀಂ ಇಂಡಿಯಾ ಪರ ಗರಿಷ್ಠ 58 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 53 ರನ್ ಮತ್ತು ಇಶಾನ್ ಕಿಶನ್ 52 ರನ್ ಗಳಿಸಿದರು. ಕೊನೆಯ ಓವರ್‌ಗಳಲ್ಲಿ ರಿಂಕು ಸಿಂಗ್ ಮತ್ತೊಮ್ಮೆ ವೇಗದಲ್ಲಿ ರನ್ ಗಳಿಸಿದರು. ಅವರು 9 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗಿ ಉಳಿದರು.

  • 26 Nov 2023 08:47 PM (IST)

    ರುತುರಾಜ್ ಔಟ್

    ರುತುರಾಜ್ ಗಾಯಕ್ವಾಡ್ 43 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ 19.2 ಓವರ್‌ಗಳಲ್ಲಿ 221 ರನ್ ಗಳಿಸಿದೆ.

  • 26 Nov 2023 08:43 PM (IST)

    ಕೊನೆಯ ಓವರ್ ಬಾಕಿ

    19 ಓವರ್‌ಗಳ ಆಟ ಮುಗಿದಾಗ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದೆ. ರಿತುರಾಜ್ ಗಾಯಕ್ವಾಡ್ 52 ರನ್ ಹಾಗೂ ರಿಂಕು ಸಿಂಗ್ 25 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್​ನಲ್ಲಿ ರಿಂಕು ಬೌಂಡರಿಗಳ ಮಳೆಗರೆದರು.

  • 26 Nov 2023 08:35 PM (IST)

    ಸೂರ್ಯ ಔಟ್

    ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು. 189 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಮೂರನೇ ವಿಕೆಟ್ ಕಳೆದುಕೊಂಡಿತು.

  • 26 Nov 2023 08:35 PM (IST)

    ಗಾಯಕ್ವಾಡ್ ಅರ್ಧಶತಕ

    ರಿತುರಾಜ್ ಗಾಯಕ್ವಾಡ್ ಕೂಡ ಅರ್ಧಶತಕ ಗಳಿಸಿದ್ದಾರೆ. 39 ಎಸೆತಗಳಲ್ಲಿ 50 ರನ್‌ಗಳ ಗಡಿ ಮುಟ್ಟಿದ್ದಾರೆ.

  • 26 Nov 2023 08:20 PM (IST)

    ಕಿಶನ್ ಔಟ್

    ಇಶಾನ್ ಕಿಶನ್ 32 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. 164 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಎರಡನೇ ವಿಕೆಟ್ ಕಳೆದುಕೊಂಡಿತು.

  • 26 Nov 2023 08:15 PM (IST)

    ಕಿಶನ್ ಅರ್ಧಶತಕ

    ಇಶಾನ್ ಕಿಶನ್ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಅದೇ ಹೊತ್ತಿಗೆ ಟೀಂ ಇಂಡಿಯಾ 15 ಓವರ್‌ಗಳಲ್ಲಿ 164 ರನ್ ಗಳಿಸಿದೆ. ರಿತುರಾಜ್ ಗಾಯಕ್ವಾಡ್ ಕೂಡ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 26 Nov 2023 08:13 PM (IST)

    ಮ್ಯಾಕ್ಸ್​ವೆಲ್ ದುಬಾರಿ

    ರಿತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. 14 ಓವರ್‌ಗಳ ನಂತರ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದೆ. ಗ್ಲೆನ್ ಮಾಡಿದ ಈ ಓವರ್​ನಲ್ಲಿ ಕಿಶನ್ ಬೌಂಡರಿಗಳ ಮಳೆಗರೆದರು.

  • 26 Nov 2023 08:04 PM (IST)

    ನಿದಾನಗತಿಯ ಬ್ಯಾಟಿಂಗ್

    12 ಓವರ್‌ಗಳ ಆಟ ಮುಗಿದಿದ್ದು, ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. ರಿತುರಾಜ್ ಗಾಯಕ್ವಾಡ್ 34 ರನ್ ಹಾಗೂ ಇಶಾನ್ ಕಿಶನ್ 20 ರನ್ ಗಳಿಸಿ ಆಡುತ್ತಿದ್ದಾರೆ. ಈ ಇಬ್ಬರಿಗೂ ಸದ್ಯ ಯಾವುದೇ ಬೌಂಡರಿಗಳು ಸಿಗುತಿಲ್ಲ. ಹೀಗಾಗಿ ಭಾರತದ ರನ್ ರೇಟ್ ಕಡಿಮೆ ಆಗಿದೆ.

  • 26 Nov 2023 07:53 PM (IST)

    10 ಓವರ್‌ಗಳ ನಂತರ ಟೀಂ ಇಂಡಿಯಾ ಸ್ಕೋರ್

    ಟೀಂ ಇಂಡಿಯಾ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ರಿತುರಾಜ್ ಗಾಯಕ್ವಾಡ್ 29 ರನ್ ಹಾಗೂ ಇಶಾನ್ ಕಿಶನ್ 10 ರನ್ ಗಳಿಸಿ ಆಡುತ್ತಿದ್ದಾರೆ.

  • 26 Nov 2023 07:44 PM (IST)

    8 ಓವರ್‌ ಮುಕ್ತಾಯ

    ಟೀಂ ಇಂಡಿಯಾ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ. ಸದ್ಯ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದಾರೆ.

  • 26 Nov 2023 07:33 PM (IST)

    24 ಎಸೆತಗಳಲ್ಲಿ ಅರ್ಧಶತಕ

    77 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾ ಮೊದಲ ಆಘಾತ ಅನುಭವಿಸಿದೆ. ಯಶಸ್ವಿ ಜೈಸ್ವಾಲ್ 25 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಔಟಾಗುವುದಕ್ಕೂ ಮುನ್ನ ಜೈಸ್ವಾಲ್ ಕೇವಲ 24 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದರು.

  • 26 Nov 2023 07:22 PM (IST)

    ಯಶಸ್ವಿ ಅಬ್ಬರ

    ಟೀಂ ಇಂಡಿಯಾ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 36 ರನ್ ಹಾಗೂ ರಿತುರಾಜ್ ಗಾಯಕ್ವಾಡ್ 10 ರನ್ ಗಳಿಸಿ ಆಡುತ್ತಿದ್ದಾರೆ. 4ನೇ ಓವರ್​ನಲ್ಲಿ ಜೈಸ್ವಾಲ್ 2 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು.

  • 26 Nov 2023 07:16 PM (IST)

    ಉತ್ತಮ ಆರಂಭ

    ಟೀಂ ಇಂಡಿಯಾ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ರಿತುರಾಜ್ ಗಾಯಕ್ವಾಡ್ ಸದ್ಯ ಕ್ರೀಸ್‌ನಲ್ಲಿದ್ದಾರೆ.

  • 26 Nov 2023 06:44 PM (IST)

    ಆಸ್ಟ್ರೇಲಿಯಾ ತಂಡ

    ಸ್ಟೀವ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ತನ್ವೀರ್ ಸಂಘ.

  • 26 Nov 2023 06:37 PM (IST)

    ಭಾರತ ತಂಡ

    ಸೂರ್ಯಕುಮಾರ್ ಯಾದವ್ (ನಾಯಕ), ರಿತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್.

  • 26 Nov 2023 06:34 PM (IST)

    ಟಾಸ್ ಗೆದ್ದ ಆಸ್ಟ್ರೇಲಿಯಾ

    ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಲಿದೆ.

  • Published On - Nov 26,2023 6:34 PM

    Follow us
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ