ರಿಷಬ್​ ಪಂತ್ ಇನ್​, ರೋವ್‌ಮನ್ ಪೊವೆಲ್ ಔಟ್​: ದೆಹಲಿ ಕ್ಯಾಪಿಟಲ್ಸ್​ನಲ್ಲಿ ಉಳಿದ, ಹೊರನಡೆದ ಆಟಗಾರರ ಪಟ್ಟಿ ಇಲ್ಲಿದೆ 

Delhi Capitals: ದೆಹಲಿ ಕ್ಯಾಪಿಟಲ್ಸ್​​ ತಂಡ ಕೂಡ ತನ್ನ ಉಳಿಸಿಕೊಂಡಿರುವ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ರಿಷಬ್​ ಪಂತ್​ ತಂಡದಲ್ಲಿ ಉಳಿದುಕೊಂಡಿದ್ದು, ರೋವ್‌ಮನ್ ಪೊವೆಲ್​ರನ್ನು ಕೈಬಿಡಲಾಗಿದೆ.

ರಿಷಬ್​ ಪಂತ್ ಇನ್​, ರೋವ್‌ಮನ್ ಪೊವೆಲ್ ಔಟ್​: ದೆಹಲಿ ಕ್ಯಾಪಿಟಲ್ಸ್​ನಲ್ಲಿ ಉಳಿದ, ಹೊರನಡೆದ ಆಟಗಾರರ ಪಟ್ಟಿ ಇಲ್ಲಿದೆ 
ಡೇವಿಡ್ ವಾರ್ನರ್, ರಿಷಬ್​ ಪಂತ್
Follow us
ಗಂಗಾಧರ​ ಬ. ಸಾಬೋಜಿ
|

Updated on:Nov 26, 2023 | 10:13 PM

ಇಂಡಿಯನ್​ ಪ್ರೀಮಿಯರ್​ ಲೀಗ್​ 2024ರ (IPL 2024) ಮಿನಿ ಹರಾಜಿಗೂ ಮುಂಚೆ ಭಾನುವಾರ ಫ್ರಾಂಚೈಸಿಗಳಿಗೆ ನೀಡಿದ್ದ ಧಾರಣೆಯ ಗಡುವು ಇಂದಿಗೆ ಮುಕ್ತಾಯವಾಗಿದೆ. ಅದೇ ರೀತಿಯಾಗಿ ಎಲ್ಲಾ ತಂಡಗಳು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ದೆಹಲಿ ಕ್ಯಾಪಿಟಲ್ಸ್​​ ತಂಡ ಕೂಡ ತನ್ನ ಉಳಿಸಿಕೊಂಡಿರುವ ಮತ್ತು ಕೈಬಿಟ್ಟ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ರಿಷಬ್​ ಪಂತ್​ ತಂಡದಲ್ಲಿ ಉಳಿದುಕೊಂಡಿದ್ದು, ರೋವ್‌ಮನ್ ಪೊವೆಲ್​ರನ್ನು ಕೈಬಿಡಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ರಿಷಬ್​ ಪಂತ್ 2023ರ  ಐಪಿಎಲ್​ನಿಂದ ಹೊರಗುಳಿದಿದ್ದರು. ಸದ್ಯ ಚೇತರಿಸಿಕೊಂಡಿರುವ ಅವರು ಇತ್ತೀಚೆಗೆ ದೆಹಲಿ ಕ್ಯಾಪಿಟಲ್ಸ್ ತರಬೇತಿ ಶಿಬಿರದಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದರು. ಭಾರಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಲಕ್ನೋದಲ್ಲೇ ಉಳಿದ ರಾಹುಲ್: ತಂಡದಿಂದ ಹೊರಬಿದ್ದ 8 ಆಟಗಾರರು ಯಾರ್ಯಾರು ಗೊತ್ತಾ?

ದೆಹಲಿ ಕ್ಯಾಪಿಟಲ್ಸ್​ ಕಳೆದ ಐಪಿಎಲ್ ಆವೃತ್ತಿಯ 14 ಪಂದ್ಯಗಳಲ್ಲಿ 5 ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 9 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ 9ನೇ ಸ್ತಾನವನ್ನು ಗಳಿಸಿತ್ತು. ಆದರೆ ಪ್ಲೇಆಫ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

ಉಳಿಸಿಕೊಂಡ ಆಟಗಾರರ ಪಟ್ಟಿ:

ರಿಷಬ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಮಿಚೆಲ್ ಮಾರ್ಷ್, ಯಶ್ ಧುಲ್, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್, ಎನ್ರಿಚ್ ನೋಕಿಯಾ, ಕುಲದೀಪ್ ಯಾದವ್, ಲುಂಗಿ ಎನ್‌ಗಿಡಿ, ಖಲೀಲ್ ಅಹ್ಮದ್, ಇಶಾಂತ್ ಕುಮಾರ್ ಶರ್ಮಾ, ಮುಖೇಶ್ ಕುಮಾರ್ ಶರ್ಮಾ.

ಬಿಡುಗಡೆಯಾದ ಆಟಗಾರರು:

ರಿಲೀ ರೊಸೊವ್, ಚೇತನ್ ಸಕರಿಯಾ, ರೋವ್‌ಮನ್ ಪೊವೆಲ್, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಅಮನ್ ಖಾನ್, ಪ್ರಿಯಮ್ ಗಾರ್ಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:12 pm, Sun, 26 November 23

ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ