IND vs AUS 2nd T20I: 9 ಎಸೆತಗಳಲ್ಲಿ 31 ರನ್ಸ್: ಫಿನಿಶರ್ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಹೇಗಿತ್ತು ನೋಡಿ

Rinku Singh Six Video, India vs Australia 2nd T20I: ರಿಂಕು ಸಿಂಗ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕೂಡ ಕೇವಲ 9 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 31 ರನ್ ಚಚ್ಚಿದರು. ಇವರ ಸ್ಫೋಟಕ ಆಟದಿಂದ ಭಾರತ 20 ಓವರ್‌ಗಳಲ್ಲಿ 235 ರನ್ ಗಳಿಸಿತು. ರಿಂಕು ಸಿಂಗ್ ಅವರ ಬಿರುಸಿನ ಆಟದ ವಿಡಿಯೋ ಇಲ್ಲಿದೆ ನೋಡಿ.

IND vs AUS 2nd T20I: 9 ಎಸೆತಗಳಲ್ಲಿ 31 ರನ್ಸ್: ಫಿನಿಶರ್ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಹೇಗಿತ್ತು ನೋಡಿ
|

Updated on:Nov 27, 2023 | 7:42 AM

ರಿಂಕು ಸಿಂಗ್ (Rinku Singh) ತಮಗೆ ನೀಡಿರುವ ಫಿನಿಶಿಂಗ್ ಜವಾಬ್ದಾರಿಯನ್ನು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದರು. ಕೇವಲ 9 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 31 ರನ್ ಚಚ್ಚಿ ಟೀಮ್ ಇಂಡಿಯಾ ಟಿ20 ಸ್ವರೂಪದಲ್ಲಿ ಐದನೇ ಗರಿಷ್ಠ ಮೊತ್ತವನ್ನು ದಾಖಲಿಸಿತು. ಭಾರತ ನಿಗದಿತ 20 ಓವರ್‌ಗಳಲ್ಲಿ 235 ರನ್ ಗಳಿಸಲು ನೆರವಾದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಿಂಕು ಸಿಂಗ್, ”ನಾನು ಸ್ವಲ್ಪ ಸಮಯದಿಂದ 5-6ನೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ, ಆಗ ನಾನು ಶಾಂತವಾಗಿ ಮತ್ತು ಏಕಾಗ್ರತೆಯಿಂದ ಇರಲು ಪ್ರಯತ್ನಿಸುತ್ತೇನೆ. ನಾನು ಚೆಂಡನ್ನು ಸೂಕ್ಷ್ಮವಾಗಿ ನೋಡುತ್ತೇನೆ ಮತ್ತು ಅದಕ್ಕೆ ತಕ್ಕಂತೆ ಆಡುತ್ತೇನೆ. ಸೂರ್ಯಕುಮಾರ್ ನಿಜವಾಗಿಯೂ ಒಳ್ಳೆಯವರು, ನಾವು ಅವರ ನಾಯಕತ್ವದಲ್ಲಿ ಆನಂದಿಸುತ್ತಿದ್ದೇವೆ. ಕೊನೆಯ 5 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ನನ್ನ ಕೆಲಸ, ಆದ್ದರಿಂದ ನಾನು ಅವರ ಫಿನಿಶಿಂಗ್ ಕೌಶಲ್ಯದ ಮೇಲೆ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ನೆಟ್ ಸೆಷನ್‌ಗಳನ್ನು ಅದೇ ಮನಸ್ಥಿತಿಯೊಂದಿಗೆ ಅಭ್ಯಾಸ ಮಾಡುತ್ತೇನೆ,” ಎಂದು ಹೇಳಿದರು. ರಿಂಕು ಅವರ ಸ್ಫೋಟಕ ಆಟದ ವಿಡಿಯೋ ಇಲ್ಲಿದೆ ನೋಡಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Mon, 27 November 23

Follow us