AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS, 1st T20I: ಫಿನಿಶರ್ ರಿಂಕು ಸಿಂಗ್ ಸಿಡಿಸಿದ ಸಿಕ್ಸ್ ನೋಡಲು ಮಿಸ್ ಮಾಡಿದ್ರಾ?: ಇಲ್ಲಿದೆ ನೋಡಿ

IND vs AUS, 1st T20I: ಫಿನಿಶರ್ ರಿಂಕು ಸಿಂಗ್ ಸಿಡಿಸಿದ ಸಿಕ್ಸ್ ನೋಡಲು ಮಿಸ್ ಮಾಡಿದ್ರಾ?: ಇಲ್ಲಿದೆ ನೋಡಿ

Vinay Bhat
|

Updated on: Nov 24, 2023 | 7:38 AM

Rinku Singh Six Video, India vs Australia 1st T20I: ಗುರುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟರ್ ರಿಂಕು ಸಿಂಗ್ ತಮಗೆ ನೀಡಿದ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚರುಕಟ್ಟಾಗಿ ನಿರ್ವಹಿಸಿದರು. ಕೊನೆಯ 1 ಎಸೆತದಲ್ಲಿ ಜಯಕ್ಕೆ 1 ರನ್ ಬೇಕಾಗಿದ್ದಾಗ ರಿಂಕು ಸಿಕ್ಸರ್‌ ಸಿಡಿಸಿ ರೋಚಕ ಜಯ ತಂದುಕೊಟ್ಟರು. ಇದರ ವಿಡಿಯೋ ವೈರಲ್ ಆಗುತ್ತಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಹೈ-ಸ್ಕೋರಿಂಗ್ ಥ್ರಿಲ್ಲರ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಟೀಮ್ ಇಂಡಿಯಾ (Team India) ತಮ್ಮ ಟಿ20 ವಿಶ್ವಕಪ್ 2024 ರ ತಯಾರಿಯನ್ನು ಗೆಲುವಿನ ಮೂಲಕ ಪ್ರಾರಂಭಿಸಿತು. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅರ್ಧಶತಕ ಬಾರಿಸಿದರೆ, ರಿಂಕು ಸಿಂಗ್ ಫಿನಿಶಿಂಗ್ ಜವಾಬ್ದಾರಿ ನಿರ್ವಹಿಸಿದರು. ಭಾರತ ಟಾರ್ಗೆಟ್ ಬೆನ್ನಟ್ಟುವ ಕೊನೆಯ 2 ಓವರ್‌ಗಳಲ್ಲಿ ದೊಡ್ಡ ಡ್ರಾಮವೇ ನಡೆದು ಹೋಯಿತು. ಕೊನೆಯ 1 ಎಸೆತದಲ್ಲಿ ಜಯಕ್ಕೆ 1 ರನ್ ಬೇಕಾಗಿತ್ತು. ಆಗ ರಿಂಕು ಸಿಂಗ್ ಸಿಕ್ಸರ್‌ ಸಿಡಿಸಿ ಜಯ ತಂದುಕೊಟ್ಟರು. ರಿಂಕು ಸಿಡಿಸಿದ ಸಿಕ್ಸ್ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಆಟದ ನಂತರ ಮಾತನಾಡಿದ, ರಿಂಕು ಸಿಂಗ್ ಪಂದ್ಯ ಕೊನೆಯ ಎಸೆದವರೆಗೆ ಸಾಗಿದರೆ ಅಲ್ಲಿ ನನಗೆ ಗೆಲ್ಲಿಸಿ ಕೊಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. “ನನ್ನ ಮೇಲೆ ನನಗೆ ವಿಶ್ವಾಸವಿತ್ತು. ನಾನು ಇದನ್ನು ಸಾಕಷ್ಟು ಬಾರಿ ಮಾಡಿದ್ದೇನೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಕೂಡ ನಾನು ಈ ಸ್ಥಾನದಲ್ಲಿ ಆಡಿದ್ದೇನೆ,” ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ