IND vs AUS 1st T20I: ರೋಚಕ ಗೆಲುವಿನ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಆಡಿದ ಮಾತುಗಳೇನು ನೋಡಿ

Suryakumar Yadav post match presentation: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಸೂರ್ಯಕುಮಾರ್ ಯಾದವ್-ಇಶಾನ್ ಕಿಶನ್, ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಕ್ಯಾಪ್ಟನ್ ಸೂರ್ಯ ಏನು ಹೇಳಿದ್ದಾರೆ ನೋಡಿ.

|

Updated on: Nov 24, 2023 | 6:58 AM

ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್​ನಲ್ಲಿ ಸೋಲುಂಡ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತ ಭರ್ಜರಿ ಆಗಿ ಆರಂಭಿಸಿದೆ. ಗುರುವಾರ ವಿಶಾಖಪಟ್ಟಣಂನ ಡಾ. ವೈಎಸ್. ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

1 / 7
ನಾಯಕ ಸೂರ್ಯಕುಮಾರ್ ಯಾದವ್-ಇಶಾನ್ ಕಿಶನ್ ಬೊಂಬಾಟ್ ಅರ್ಧಶತಕ ಒಂದು ಕಡೆಯಾದರೆ ರಿಂಕು ಸಿಂಗ್ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಕ್ಯಾಪ್ಟನ್ ಸೂರ್ಯ ಏನು ಹೇಳಿದ್ದಾರೆ ನೋಡಿ.

2 / 7
ನಮ್ಮ ಆಟಗಾರರು ಆಡಿದ ರೀತಿ ನನಗೆ ತುಂಬಾ ಸಂತೋಷವಾಗಿದೆ. ನಾವು ಒತ್ತಡಕ್ಕೆ ಒಳಗಾಗಿದ್ದೆವು, ಇದರ ನಡುಗೆ ಎಲ್ಲರೂ ಆಡಿದ ಶೈಲಿ ಅದ್ಭುತವಾಗಿದೆ. ಇದು ಹೆಮ್ಮೆಯ ಕ್ಷಣ, ತುಂಬಾ ಹೆಮ್ಮೆಯ ಕ್ಷಣ, ನೀವು ಪ್ರತಿ ಬಾರಿ ಆಡುವಾಗ ಭಾರತವನ್ನು ಪ್ರತಿನಿಧಿಸುವ ಬಗ್ಗೆ ಯೋಚಿಸುತ್ತೀರಿ, ಆದರೆ ಇಲ್ಲಿಗೆ ಬಂದು ಭಾರತದ ನಾಯಕತ್ವ ವಹಿಸುವುದು ದೊಡ್ಡ ಕ್ಷಣವಾಗಿದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

3 / 7
ಸ್ವಲ್ಪ ಇಬ್ಬನಿ ಇರುತ್ತದೆ ಎಂದು ಭಾವಿಸಿದ್ದೆವು, ಆದರೆ ಹಾಗೆ ಆಗಲಿಲ್ಲ. ಇದು ದೊಡ್ಡ ಮೈದಾನವಲ್ಲ ಹೀಗಾಗಿ ಬ್ಯಾಟಿಂಗ್ ಸುಲಭವಾಗುತ್ತದೆ ಎಂದು ನನಗೆ ತಿಳಿದಿತ್ತು. ಆಸ್ಟ್ರೇಲಿಯಾ 230-235 ರನ್ ಹೊಡೆಯಬಹುದು ಎಂದು ಅಂದುಕೊಂಡಿದ್ದೆವು. ಆದರೆ ನಮ್ಮ ಬೌಲರ್‌ಗಳು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದರು- ಸೂರ್ಯಕುಮಾರ್ ಯಾದವ್.

4 / 7
ಐಪಿಎಲ್ ಅಥವಾ ಇತರೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ನಾವು ಅನೇಕ ಬಾರಿ ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಇಶಾನ್‌ ಕಿಶನ್ ಎಂಜಾಯ್ ಮಾಡಿಕೊಂಡು ಆಡುತ್ತಾನೆ. ನಾನು ನಾಯಕತ್ವದ ಹೊರೆಯನ್ನು ಡ್ರೆಸ್ಸಿಂಗ್ ರೂಮಿನಲ್ಲಿ ಬಿಟ್ಟು ಬ್ಯಾಟಿಂಗ್​ಗೆ ಬಂದಿದ್ದೆ. ನಾನು ನನ್ನ ಶೈಲಿಯ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತೇನೆ ಎಂಬುದು ಸೂರ್ಯಕುಮಾರ್ ಯಾದವ್ ಮಾತು.

5 / 7
ಇಂದಿನ ವಾತಾವರಣವು ಅದ್ಭುತವಾಗಿತ್ತು, ಎಲ್ಲ ಪ್ರೇಕ್ಷಕರಿಗೆ ಧನ್ಯವಾದಗಳು. ರಿಂಕು ಸಿಂಗ್ ಆಟ ನೋಡಲು ತುಂಬಾ ಚೆನ್ನಾಗಿತ್ತು, ಆ ಪರಿಸ್ಥಿತಿ ಅವನಿಗೆ ಹೇಳಿ ಮಾಡಿಸಿದಂತಿತ್ತು. ರಿಂಕು ಶಾಂತ ಸ್ವಭಾವದ ವ್ಯಕ್ತಿ. ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತೇವೆ ಎಂದು ಪೋಸ್ಟ್ ಮ್ಯಾಚ್​ನಲ್ಲಿ ಸೂರ್ಯ ಹೇಳಿದ್ದಾರೆ.

6 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ಜೋಶ್ ಇಂಗ್ಲಿಸ್ 110 ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಭಾರತ ಸೂರ್ಯಕುಮಾರ್ ಅವರ 80, ಕಿಶನ್ ಅವರ 58 ಹಾಗೂ ರಿಂಕು ಸಿಂಗ್ ಅವರ ಅಜೇಯ 22 ರನ್​ಗಳ ನೆರವಿನಿಂದ 19.5 ಓವರ್​ಗಳಲ್ಲಿ ಗೆದ್ದು ಬೀಗಿತು.

7 / 7
Follow us
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ

ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ

ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು

ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?

ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು

ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ

ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್