ಲಕ್ನೋದಲ್ಲೇ ಉಳಿದ ರಾಹುಲ್: ತಂಡದಿಂದ ಹೊರಬಿದ್ದ 8 ಆಟಗಾರರು ಯಾರ್ಯಾರು ಗೊತ್ತಾ?
IPL 2024: ನಾಯಕ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿಯನ್ನು ತೊರೆಯುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಆ ಎಲ್ಲಾ ವದಂತಿಗಳಿಗೆ ಲಕ್ನೋ ಸೂಪರ್ ಜೈಂಟ್ಸ್ ಆಡಳಿತ ಮಂಡಳಿ ಎಳ್ಳು ನೀರು ಬಿಟ್ಟಿದೆ. ತಂಡದಿಂದ ಬಿಡುಗಡೆ ಮಾಡಿರುವ ಹಾಗೂ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಮಿನಿ ಹರಾಜಿಗೂ ಎಲ್ಲಾ 10 ತಂಡಗಳು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ವಾಸ್ತವವಾಗಿ ಈ ಹಿಂದೆ ನಾಯಕ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿಯನ್ನು ತೊರೆಯುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಆ ಎಲ್ಲಾ ವದಂತಿಗಳಿಗೆ ಲಕ್ನೋ ಸೂಪರ್ ಜೈಂಟ್ಸ್ ಆಡಳಿತ ಮಂಡಳಿ ಎಳ್ಳು ನೀರು ಬಿಟ್ಟಿದೆ. ರಾಹುಲ್ರನ್ನು ತಂಡದ ನಾಯಕನಾಗಿ ಮುಂದುವರೆಸಿರುವ ಫ್ರಾಂಚೈಸಿ, ತಂಡದಿಂದ ಬಿಡುಗಡೆ ಮಾಡಿರುವ ಹಾಗೂ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಬಿಳ್ಳಲಿದ್ದಾರೆಂದು ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಾಗದದ ಮೇಲೆ ಕೆಎಲ್ ರಾಹುಲ್ ಅವರ ಹೆಸರನ್ನು ಬರೆದಿರುವ ಒಂದು ಪೋಸ್ಟ್ನ್ನು ಹಂಚಿಕೊಂಡಿತ್ತು. ಆ ಮೂಲಕ ಸುಳ್ಳು ಸುದ್ದಿಯನ್ನು ತಳ್ಳಿಹಾಕಿದೆ.
Continue karo? 👇 pic.twitter.com/5Zxh3dehPU
— Lucknow Super Giants (@LucknowIPL) November 26, 2023
ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಡಿಸೆಂಬರ್ 19ರಂದು ನಡೆಯಲಿರುವ ಮಿನಿ ಹರಾಜಿಗೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಆ ಮೂಲಕ ಅವೇಶ್ ಖಾನ್ ಅವರನ್ನು ಕೈಬಿಟ್ಟಿದೆ.
ಲಕ್ನೋ ಸೂಪರ್ ಜೈಂಟ್ಸ್
ಬಿಡುಗಡೆಯಾದ ಆಟಗಾರರು: ಜಯದೇವ್ ಉನದ್ಕಟ್, ಡೇನಿಯಲ್ ಸ್ಯಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಅರ್ಪಿತ್ ಗುಲೇರಿಯಾ, ಸೂರ್ಯಾಂಶ್ ಶೆಡ್ಗೆ, ಕರುಣ್ ನಾಯರ್.
ಇದನ್ನೂ ಓದಿ: IPL 2024: ಹರಾಜಿಗೂ ಮುನ್ನ ಎಲ್ಲಾ 10 ತಂಡಗಳು ಉಳಿಸಿಕೊಂಡ, ಬಿಡುಗಡೆಗೊಳಿಸಿದ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ
ಉಳಿಸಿಕೊಂಡ ಆಟಗಾರರ ಪಟ್ಟಿ: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೆ ಗೌತಮ್, ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ಪ್ರೇರಕ್ ಮಂಕಡ್, ಯುಧ್ವೀರ್ ಸಿಂಗ್, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ, ಯಾಶ್ ಥಾಕಿ , ಅಮಿತ್ ಮಿಶ್ರಾ, ನವೀನ್-ಉಲ್-ಹಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 pm, Sun, 26 November 23