IPL 2027: ಮಿನಿ ಹರಾಜಿಗೂ ಮುನ್ನ 11 ಆಟಗಾರರ ತಂಡ ಬದಲು!

ಐಪಿಎಲ್ 2027ರ ರೀಟೆನ್ಷನ್ ಗಡುವಿಗೂ ಮುನ್ನವೇ ಟ್ರೇಡ್ ವಿಂಡೋದಲ್ಲಿ ಭರ್ಜರಿ ವಹಿವಾಟು ನಡೆದಿದ್ದು, 7 ತಂಡಗಳು ಆಟಗಾರರ ವಿನಿಮಯ ಮಾಡಿಕೊಂಡಿವೆ. ಈ ಬೃಹತ್ ಡೀಲ್‌ಗಳ ಫಲವಾಗಿ 11 ಪ್ರಮುಖ ಆಟಗಾರರು ಹೊಸ ತಂಡಗಳ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಹೀಗೆ ಫ್ರಾಂಚೈಸಿ ಬದಲಿಸಿದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ.

IPL 2027: ಮಿನಿ ಹರಾಜಿಗೂ ಮುನ್ನ 11 ಆಟಗಾರರ ತಂಡ ಬದಲು!
Ipl 2027
Image Credit source: IPL

Updated on: Nov 17, 2026 | 3:28 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ರೀಟೆನ್ಷನ್ ಪ್ರಕ್ರಿಯೆಗೂ ಮುನ್ನವೇ 7 ಫ್ರಾಂಚೈಸಿಗಳು ಟ್ರೇಡ್ ಡೀಲ್‌ಗಳನ್ನು ಕುದುರಿಸಿಕೊಂಡಿವೆ. ಈ ಮಹತ್ವದ ವಿನಿಮಯದ ಮೂಲಕ ಒಟ್ಟು 11 ಸ್ಟಾರ್ ಆಟಗಾರರು ತಮ್ಮ ಹಳೆಯ ತಂಡಗಳನ್ನು ತೊರೆದು ಹೊಸ ಫ್ರಾಂಚೈಸಿಗಳ ಪಾಲಾಗಿದ್ದಾರೆ. ಹೀಗೆ ತಂಡ ಬದಲಿಸಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

ಹಾರ್ದಿಕ್ vs ಅರ್ಷದೀಪ್ ಮೆಗಾ ಸ್ವಾಪ್!

ಟ್ರೇಡ್ ವಿಂಡೋದ ಅತ್ಯಂತ ದೊಡ್ಡ ಸುದ್ದಿಯೆಂದರೆ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ವಿನಿಮಯ. ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬರೋಬ್ಬರಿ ₹18 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಪ್ರತಿಯಾಗಿ, ಪಂಜಾಬ್ ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ಅಷ್ಟೇ ಮೊತ್ತಕ್ಕೆ (₹18 ಕೋಟಿ) ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Loading...

ತವರಿಗೆ ಮರಳಿದ ರಿಷಭ್ ಪಂತ್!

ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ₹15 ಕೋಟಿ ಮೊತ್ತದ ಡೀಲ್ ಮೂಲಕ ಮತ್ತೆ ತಮ್ಮ ಹಳೆಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ. ಪಂತ್ ಅವರನ್ನು ಪಡೆದುಕೊಂಡಿರುವ ಡೆಲ್ಲಿ ಫ್ರಾಂಚೈಸಿ, ಬದಲಾಗಿ ಅನುಭವಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ₹13.50 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಟ್ಟುಕೊಟ್ಟಿದೆ.

 4 ಆಟಗಾರರ ಡೀಲ್:

ಚೆನ್ನೈ ಸೂಪರ್ ಕಿಂಗ್ಸ್  ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಾಲ್ವರು ಆಟಗಾರರ ಬೃಹತ್ ವಿನಿಮಯ ನಡೆದಿದೆ.

  • CSK ಸೇರಿದವರು: ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ (₹6 ಕೋಟಿ) ಮತ್ತು ಆಸ್ಟ್ರೇಲಿಯಾದ ಜ್ಯಾಕ್ ಎಡ್ವರ್ಡ್ಸ್ (₹3 ಕೋಟಿ) ಸನ್​ರೈಸರ್ಸ್​ ಹೈದರಾಬಾದ್ ತೊರೆದು ಸಿಎಸ್‌ಕೆ ಪಾಳಯ ಸೇರಿದ್ದಾರೆ.
  • SRH ಸೇರಿದವರು: ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿದ್ದ ವೇಗಿಗಳಾದ ಖಲೀಲ್ ಅಹ್ಮದ್ (₹4.80 ಕೋಟಿ) ಮತ್ತು ಆಸ್ಟ್ರೇಲಿಯಾದ ನಾಥನ್ ಎಲ್ಲಿಸ್ (₹2 ಕೋಟಿ) ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ.

ನಟರಾಜನ್ ಮತ್ತು ಅನ್ಸಾರಿ ಟ್ರೇಡ್:

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಮತ್ತೊಂದು ಪ್ರಮುಖ ಡೀಲ್ ನಡೆದಿದೆ. ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ₹5 ಕೋಟಿ ಮೊತ್ತಕ್ಕೆ ಮತ್ತೆ ತಮ್ಮ ಹಳೆಯ ತಂಡ ಸನ್‌ರೈಸರ್ಸ್ ಹೈದರಾಬಾದ್‌ಗೆ ಮರಳಿದ್ದಾರೆ. ಇವರ ಬದಲಿಗೆ ಯುವ ಲೆಗ್ ಸ್ಪಿನ್ನರ್ ಝೀಶನ್ ಅನ್ಸಾರಿ ₹40 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

IPL 2027: ಮಿನಿ ಹರಾಜಿಗೂ ಮುನ್ನ ಟ್ರೇಡ್ ಆದ 11 ಆಟಗಾರರ ಪಟ್ಟಿ ಇಲ್ಲಿದೆ:

 ಸಂಖ್ಯೆ ಆಟಗಾರ ಹಳೆಯ ತಂಡ ಹೊಸ ತಂಡ ಟ್ರೇಡ್ ಮೊತ್ತ
1 ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (MI) ಪಂಜಾಬ್ ಕಿಂಗ್ಸ್ (PBKS) ₹18 ಕೋಟಿ
2 ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್ (PBKS) ಮುಂಬೈ ಇಂಡಿಯನ್ಸ್ (MI) ₹18 ಕೋಟಿ
3 ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ (LSG) ಡೆಲ್ಲಿ ಕ್ಯಾಪಿಟಲ್ಸ್ (DC) ₹15 ಕೋಟಿ
4 ಕುಲ್ದೀಪ್ ಯಾದವ್ ಡೆಲ್ಲಿ ಕ್ಯಾಪಿಟಲ್ಸ್ (DC) ಲಕ್ನೋ ಸೂಪರ್ ಜೈಂಟ್ಸ್ (LSG) ₹13.50 ಕೋಟಿ
5 ಲಿಯಾಮ್ ಲಿವಿಂಗ್‌ಸ್ಟೋನ್ ಸನ್‌ರೈಸರ್ಸ್ ಹೈದರಾಬಾದ್ (SRH) ಚೆನ್ನೈ ಸೂಪರ್ ಕಿಂಗ್ಸ್ (CSK) ₹6 ಕೋಟಿ
6 ಟಿ. ನಟರಾಜನ್ ಡೆಲ್ಲಿ ಕ್ಯಾಪಿಟಲ್ಸ್ (DC) ಸನ್‌ರೈಸರ್ಸ್ ಹೈದರಾಬಾದ್ (SRH) ₹5 ಕೋಟಿ
7 ಖಲೀಲ್ ಅಹ್ಮದ್ ಚೆನ್ನೈ ಸೂಪರ್ ಕಿಂಗ್ಸ್ (CSK) ಸನ್‌ರೈಸರ್ಸ್ ಹೈದರಾಬಾದ್ (SRH) ₹4.80 ಕೋಟಿ
8 ಹರ್ಷಲ್ ಪಟೇಲ್ ಸನ್‌ರೈಸರ್ಸ್ ಹೈದರಾಬಾದ್ (SRH) ಗುಜರಾತ್ ಟೈಟಾನ್ಸ್ (GT) ₹4 ಕೋಟಿ
9 ಜ್ಯಾಕ್ ಎಡ್ವರ್ಡ್ಸ್ ಸನ್‌ರೈಸರ್ಸ್ ಹೈದರಾಬಾದ್ (SRH) ಚೆನ್ನೈ ಸೂಪರ್ ಕಿಂಗ್ಸ್ (CSK) ₹3 ಕೋಟಿ
10 ನಾಥನ್ ಎಲ್ಲಿಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಸನ್‌ರೈಸರ್ಸ್ ಹೈದರಾಬಾದ್ (SRH) ₹2 ಕೋಟಿ
11 ಝೀಶನ್ ಅನ್ಸಾರಿ ಸನ್‌ರೈಸರ್ಸ್ ಹೈದರಾಬಾದ್ (SRH) ಡೆಲ್ಲಿ ಕ್ಯಾಪಿಟಲ್ಸ್ (DC) ₹40 ಲಕ್ಷ

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us