ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು (IPL 2024 Auction) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಭಾರತ ಮತ್ತು ವಿದೇಶಿ ಆಟಗಾರರು ಸೇರಿ ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಪೈಕಿ ಭಾರತದಿಂದ 214 ಹಾಗೂ ವಿದೇಶದಿಂದ 119 ಆಟಗಾರರಿದ್ದರು. ಇದರಲ್ಲಿ 72 ಆಟಗಾರರು ಮಾರಾಟವಾಗಿದ್ದಾರೆ. ಈ ಬಾರಿಯದ್ದು ಮಿನಿ ಹರಾಜಾಗಿದ್ದರೂ ಸಾಕಷ್ಟು ಕುತೂಹಲ ಕೆರಳಿಸಿತು. ಆಸ್ಟ್ರೇಲಿಯಾದ ಇಬ್ಬರು ಪ್ಲೇಯರ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆದರು. ಮಿಚೆಲ್ ಸ್ಟಾರ್ಕ್ ಅವರನ್ನು 24.7 ಕೋಟಿಗೆ ಕೆಕೆಆರ್ ಖರೀದಿಸಿದರೆ, ಪ್ಯಾಟ್ ಕಮಿನ್ಸ್ 20.5 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಪಾಲಾದರು. 10 ಫ್ರಾಂಚೈಸಿಗಳು 72 ಆಟಗಾರರಿಗೆ 230 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿತು.
ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು ಕೊನೆಗೂ ಮುಕ್ತಾಯವಾಗಿದೆ. 72 ಆಟಗಾರರಿಗೆ 230 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಜೋಡಿಯು 20 ಕೋಟಿ + ರೂಪಾಯಿಗಳಿಗೆ ಮಾರಾಟವಾಗಿ ಇತಿಹಾಸವನ್ನು ಸೃಷ್ಟಿಸಿದರು.
20 ಲಕ್ಷ ಮೂಲಬೆಲೆ ಹೊಂದಿದ್ದ ಸೌರವ್ ಚೌಹಾಣ್ ಅವರನ್ನು ಕೊನೆಯ ಆಟಗಾರನಾಗಿ ಆರ್ಸಿಬಿ ಖರೀದಿಸಿದೆ.
ಜಿ. ಅಜಿತೇಶ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
ಗುರ್ಜಪ್ನೀತ್ ಸಿಂಗ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
ಸ್ವಪ್ನಿಲ್ ಸಿಂಗ್ ಅವರು 20 ಲಕ್ಷ ಮೂಲಬೆಲೆಗೆ ಆರ್ಸಿಬಿ ಪಾಲಾದರು.
ಶಿವಾಲಿಕ್ ಶರ್ಮಾ 20 ಲಕ್ಷ ರೂ. ಮೂಲಬೆಲೆಗೆ ಮುಂಬೈ ಪಾಲಾದರು.
ಅಬಿದ್ ಮುಷ್ತಾಕ್ 20 ಲಕ್ಷ ರೂ. ಮೂಲಬೆಲೆಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ.
20 ಲಕ್ಷ ಮೂಲಬೆಲೆಗೆ ಭಾರತದ ಯುವ ಬ್ಯಾಟರ್ ಸ್ವಸ್ತಿಕ್ ಚಿಕಾರಾ ಅವರನ್ನು ಡೆಲ್ಲಿ ಖರೀದಿಸಿದೆ.
ಸೌರವ್ ಚುವಾಹಾನ್ – ಭಾರತ – 20 ಲಕ್ಷ ರೂ.
ಮೊಹಮ್ಮದ್ ವಕಾರ್ ಸಲಾಮ್ಖೇಲ್ – ಅಫ್ಘಾನಿಸ್ತಾನ – 50 ಲಕ್ಷ ರೂ.
ಮೈಕೆಲ್ ಬ್ರೇಸ್‌ವೆಲ್ – ನ್ಯೂಝಿಲೆಂಡ್ – 1 ಕೋಟಿ ರೂ.
ದುಷ್ಮಂತ ಚಮೀರ – ಶ್ರೀಲಂಕಾ – 50 ಲಕ್ಷ ರೂ.
1 ಕೋಟಿ ರೂ. ಮೂಲಬೆಲೆಗೆ ಇಂಗ್ಲೆಂಡ್ನ ಗಸ್ ಅಟ್ಕಿನ್ಸನ್ ಕೆಕೆಆರ್ ಪಾಲಾದರು.
ಶಾಯ್ ಹೋಪ್ 75 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
1.5 ಕೋಟಿ ರೂ. ಮೂಲಬೆಲೆಗೆ ಮೊಹಮ್ಮದ್ ನಬಿ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ.
20 ಲಕ್ಷ ರೂ. ಮೂಲಬೆಲೆಗೆ ಮೊಹಮ್ಮದ್ ಅರ್ಷದ್ ಖಾನ್ ಅವರನ್ನು ಲಕ್ನೋ ಖರೀದಿ ಮಾಡಿದೆ.
2 ಕೋಟಿ ಮೂಲಬೆಲೆಗೆ ಮುಜೀಬ್ ರೆಹಮಾನ್ ಅವರನ್ನು ಕೆಕೆಆರ್ ಖರೀದಿಸಿದೆ.
2 ಕೋಟಿ ರೂ. ಮೂಲಬೆಲೆಯ ಲಾಕಿ ಫರ್ಗುಸನ್ ಅವರನ್ನು ಆರ್ಸಿಬಿ ಖರೀದಿ ಮಾಡಿದೆ.
ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್ (2 ಕೋಟಿ ಮೂಲಬೆಲೆ) ಅನ್ಸೋಲ್ಡ್ ಆಗಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿದ್ದ ಆಫ್ರಿಕಾದ ರಿಲೀ ರೊಸೊವ್ ಎರಡನೇ ಸುತ್ತಿನ ಹರಾಜಿನಲ್ಲಿ 8 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇವರ ಖರೀದಿಗೆ ಡೆಲ್ಲಿ-ಪಂಜಾಬ್ ನಡುವೆ ಪೈಪೋಟಿ ನಡೆಯಿತು.
ಕರ್ನಾಟಕದ ಬ್ಯಾಟರ್ 50 ಲಕ್ಷ ಮೂಲಬೆಲೆಯ ಮನೀಶ್ ಪಾಂಡೆ ಕೋಲ್ಕತ್ತಾ ಪಾಲಾಗಿದ್ದಾರೆ.
50 ಲಕ್ಷ ಮೂಲಬೆಲೆ ಹೊಂದಿದ್ದ ಕರುಣ್ ನಾಯರ್ ಪುನಃ ಅನ್ಸೋಲ್ಡ್ ಆಗಿದ್ದಾರೆ.
ಗಿಲ್ (ನಾಯಕ), ರಶೀದ್, ಮಿಲ್ಲರ್, ತೆವಾಟಿಯಾ, ಶಮಿ, ವೇಡ್, ಸಹಾ, ವಿಲಿಯಮ್ಸನ್, ಮನೋಹರ್, ಸುದರ್ಶನ್, ನಲ್ಕಂಡೆ, ಶಂಕರ್, ಜಯಂತ್, ನೂರ್, ಸಾಯಿ ಕಿಶೋರ್, ಲಿಟಲ್, ಮೋಹಿತ್, ಒಮರ್ಜಾಯ್, ಉಮೇಶ್, ಶಾರುಖ್, ಸುಶಾಂತ್ ಮಿಶ್ರಾ, ತ್ಯಾಗಿ, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್.
ಮಾರ್ಕ್ರಾಮ್, ತ್ರಿಪಾಠಿ, ಕ್ಲಾಸೆನ್, ಅಗರ್ವಾಲ್, ಫಿಲಿಪ್ಸ್, ಭುವನೇಶ್ವರ್, ಶಹಬಾಜ್, ಸುಂದರ್, ಅಭಿಷೇಕ್, ಜಾನ್ಸೆನ್, ನಟರಾಜನ್, ಅನ್ಮೋಲ್ಪ್ರೀತ್, ಮಾರ್ಕಾಂಡೆ, ಉಮ್ರಾನ್, ಫಾರೂಕಿ, ಸಮದ್, ಉಪೇಂದ್ರ ಯಾದವ್, ನಿತೀಶ್ ರೆಡ್ಡಿ, ಸನ್ವಿರ್ ಸಿಂಗ್, ಹೆಡ್, ಹಸರಂಗ, ಕಮ್ಮಿನ್ಸ್, ಉನದ್ಕಟ್, ಸುಬ್ರಮಣ್ಯನ್.
ಜಾತವೇಧ್ ಸುಬ್ರಹ್ಮಣ್ಯನ್ (20 ಲಕ್ಷ ರೂ.) ಅವರನ್ನು ಮೂಲಬೆಲೆಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿಸಿದೆ.
20 ಲಕ್ಷ ರೂ. ಮೂಲಬೆಲೆಗೆ ಪ್ರಿನ್ಸ್ ಚೌಧರಿ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿದೆ.
ಸಾಕಿಬ್ ಹುಸೇನ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
ಕೆ.ಎಂ ಆಸಿಫ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
ಮೊಹಮ್ಮದ್ ಕೈಫ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
ಗುರ್ಜಪ್ನೀತ್ ಸಿಂಗ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
ಅಭಿಲಾಷ್ ಶೆಟ್ಟಿ – ಭಾರತ – 20 ಲಕ್ಷ ರೂ. (ಮೂಲಬೆಲೆ)
20 ಲಕ್ಷ ಮೂಲಬೆಲೆ ಹೊಂದಿದ್ದ ರಾಬಿನ್ ಮಿಂಜ್ ಅವರನ್ನು ಗುಜರಾತ್ ಟೈಟಾನ್ಸ್ 3.6 ಕೋಟಿಗೆ ಖರೀದಿಸಿದೆ. ಇವರನ್ನು ಖರೀದಿಸಲು ಚೆನ್ನೈ-ಮುಂಬೈ-ಗುಜರಾತ್-ಹೈದರಾಬಾದ್ ಕಠಿಣ ಪೈಪೋಟಿ ನಡೆಸಿತು.
ಶಶಾಂಕ್ ಸಿಂಗ್ ಅವರನ್ನು ಮೂಲಬೆಲೆ 20 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಖರೀದಿಸಿದೆ.
20 ಲಕ್ಷ ರೂ. ಮೂಲಬೆಲೆಯ ಆಲ್ರೌಂಡರ್ ವಿಶ್ವನಾಥ್ ಪ್ರತಾಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ.
20 ಲಕ್ಷ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡ ಸುಮಿತ್ ಕುಮಾರ್ ಖರೀದಿಗೆ ಡೆಲ್ಲಿ-ಕೆಕೆಆರ್ ನಡುವೆ ಭರ್ಜರಿ ಪೈಪೋಟಿ ಏರ್ಪಟಿತು. ಇವರು ಅಂತಿಮವಾಗಿ 1 ಕೋಟಿಗೆ ಡೆಲ್ಲಿ ಪಾಲಾದರು.
ಹರ್ಷ ದುಬೆ – ಭಾರತ – 20 ಲಕ್ಷ ರೂ. (ಮೂಲಬೆಲೆ)
ತನುಷ್ ಕೋಟ್ಯಾನ್ – ಭಾರತ – 20 ಲಕ್ಷ ರೂ. (ಮೂಲಬೆಲೆ)
20 ಲಕ್ಷ ಮೂಲಬೆಲೆಗೆ ಆಲ್ರೌಂಡರ್ ನಮನ್ ಧೀರ್ ಅವರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್.
ಶಶಾಂಕ್ ಸಿಂಗ್ – ಭಾರತ – 20 ಲಕ್ಷ ರೂ.
ಹಿಮ್ಮತ್ ಸಿಂಗ್ – ಭಾರತ – 20 ಲಕ್ಷ ರೂ.
ಸುಮೀತ್ ವರ್ಮಾ – ಭಾರತ – 20 ಲಕ್ಷ ರೂ.
ಭಾರತದ ವೇಗಿ ಸಂದೀಪ್ ವಾರಿಯರ್ (50 ಲಕ್ಷ ರೂ. ಮೂಲಬೆಲೆ) ಅನ್ಸೋಲ್ಡ್ ಆಗಿದ್ದಾರೆ.
50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಶ್ರೀಲಂಕಾ ಆಟಗಾರ ನುವಾನ್ ತುಷಾರ ಅವರನ್ನು 4.8 ಕೋಟಿಗೆ ಮುಂಬೈ ಖರೀದಿಸಿದೆ.
1. 5 ಕೋಟಿ ಮೂಲಬೆಲೆಯಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಜ್ಯೇ ರಿಚರ್ಡ್ಸನ್ ಖರೀದಿಗೆ ಆರ್ಸಿಬಿ-ಡೆಲ್ಲಿ ನಡುವೆ ಪೈಪೋಟಿ ನಡೆಯಿತು. ಕೊನೆಯಲ್ಲಿ ಇವರನ್ನು 5 ಕೋಟಿಗೆ ಡೆಲ್ಲಿ ಖರೀದಿಸಿದೆ.
ಆಡಮ್ ಮಿಲ್ನೆ – ನ್ಯೂಝಿಲೆಂಡ್ – 1 ಕೋಟಿ ರೂ. (ಮೂಲಬೆಲೆ)
ಲ್ಯಾನ್ಸ್ ಮೋರಿಸ್ – ಆಸ್ಟ್ರೇಲಿಯಾ – 75 ಲಕ್ಷ ರೂ. (ಮೂಲಬೆಲೆ)
50 ಲಕ್ಷ ಮೂಲಬೆಲೆಯಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಬೌಲರ್ ಸ್ಪೆನ್ಸರ್ ಜಾನ್ಸನ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಗುಜರಾತ್-ಡೆಲ್ಲಿ ನಡುವಣ ಕಾಳಗದಲ್ಲಿ ಇವರು ಅಂತಿಮವಾಗಿ 10 ಕೋಟಿಗೆ ಜಿಟಿ ಪಾಲಾಗಿದ್ದಾರೆ.
50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಶ್ರೀಲಂಕಾ ಬೌಲರ್ ದುಷ್ಮಂತ ಚಮೀರ ಅನ್ಸೋಲ್ಡ್ ಆಗಿದ್ದಾರೆ.
2 ಕೋಟಿ ರೂ. ಮೂಲಬೆಲೆಯ ಡೇವಿಡ್ ವಿಲ್ಲಿ ಲಕ್ನೋ ಪಾಲಾಗಿದ್ದಾರೆ.
ಕೀಮೋ ಪಾಲ್ – ವೆಸ್ಟ್ ಇಂಡೀಸ್ – 75 ಲಕ್ಷ ರೂ., ಜೇಮ್ಸ್ ನೀಶಮ್ – ನ್ಯೂಜಿಲೆಂಡ್ – 1.5 ಕೋಟಿ ರೂ. ಅನ್ಸೋಲ್ಡ್ ಆಗಿದ್ದಾರೆ.
1.5 ಕೋಟಿ ರೂ. ಮೂಲಬೆಲೆಯೊಂದಿಗೆ ಟಾಮ್ ಕರ್ರಾನ್ ಅವರನ್ನು ಆರ್ಸಿಬಿ ಖರೀದಿ ಮಾಡಿದೆ.
1 ಕೋಟಿ ಮೂಲಬೆಲೆಯ ಮೈಕೆಲ್ ಬ್ರೇಸ್‌ವೆಲ್ ಅನ್ಸೋಲ್ಡ್ ಆಗಿದ್ದಾರೆ.
2 ಕೋಟಿ ಮೂಲಬೆಲೆಯಲ್ಲಿ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅನ್ಸೋಲ್ಡ್ ಆಗಿದ್ದಾರೆ.
1 ಕೋಟಿ ಮೂಲೆಬೆಲೆ ಹೊಂದಿದ್ದ ಆಸ್ಟ್ರೇಲಿಯಾದ ಆಷ್ಟನ್ ಟರ್ನರ್ ಬೇಸ್ಪ್ರೈಸ್ಗೆ ಲಕ್ನೋ ಪಾಲಾಗಿದ್ದಾರೆ.
ಶೆರ್ಫೇನ್ ರುದರ್ಫೋರ್ಡ್ (1.5 ಕೋಟಿ ರೂ. ಮೂಲಬೆಲೆ) ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ.
1.5 ಕೋಟಿ ರೂ. ಮೂಲಬೆಲೆಯ ನ್ಯೂಝಿಲೆಂಡ್ನ ಕಾಲಿನ್ ಮನ್ರೊ ಕೂಡ ಅನ್ಸೋಲ್ಡ್ ಆಗಿದ್ದಾರೆ.
75 ಲಕ್ಷ ಮೂಲಬೆಲೆಯ ಫಿನ್ ಅಲೆನ್ ಅನ್ಸೋಲ್ಡ್ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: 6.75 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್: 6.55 ಕೋಟಿ
ಪಂಜಾಬ್ ಕಿಂಗ್ಸ್: 13.15 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: 3.20 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: 16.85 ಕೋಟಿ
ರಾಜಸ್ಥಾನ್ ರಾಯಲ್ಸ್: 0.90 ಕೋಟಿ
ಮುಂಬೈ ಇಂಡಿಯನ್ಸ್: 7.95 ಕೋಟಿ
ಗುಜರಾತ್ ಟೈಟಾನ್ಸ್: 21.45 ಕೋಟಿ
ಲಕ್ನೋ ಸೂಪರ್ ಜೈಂಟ್ಸ್: 4.15 ಕೋಟಿ
ಸನ್ ರೈಸರ್ಸ್ ಹೈದರಾಬಾದ್: 3.40 ಕೋಟಿ
ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ನೋಡುವುದಾದರೆ: ಮೊಹಮ್ಮದ್ ಸಿರಾಜ್, ರೋಸಿ ಟೋಪ್ಲಿ, ಅಲ್ಜರಿ ಜೋಸೆಫ್, ಆಕಾಶ್ ದೀಪ್, ಯಶ್ ದಯಾಳ್, ಮಯಾಂಕ್ ಡಗರ್, ಕರ್ಣ್ ಶರ್ಮಾ, ವೈಶಾಂಕ್.
20 ಲಕ್ಷ ರೂ. ಮೂಲಬೆಲೆಯ ಶ್ರೇಯಸ್ ಗೋಪಾಲ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ.
20 ಲಕ್ಷ ಮೂಲಬೆಲೆಯ ಮುರುಗನ್ ಅಶ್ವಿನ್ ಅನ್ಸೋಲ್ಡ್ ಆಗಿದ್ದಾರೆ.
20 ಲಕ್ಷ ರೂ. ಮೂಲಬೆಲೆ ಹೊದಿದ್ದ ಸ್ಪಿನ್ನರ್ ಎಂ. ಸಿದ್ಧಾರ್ಥ್ ಖರೀದಿಗೆ ಆರ್ಸಿಬಿ ಹಾಗೂ ಲಕ್ನೋ ಪೈಪೋಟಿ ನಡೆಸಿದವು. ಇವರು ಅಂತಿಮವಾಗಿ 2.4 ಕೋಟಿಗೆ ಲಕ್ನೋ ಪಾಲಾಗಿದ್ದಾರೆ.
ಮಾನವ್ ಸುತಾರ್ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ.
ಭಾರತದ ಯುವ ಸ್ಪಿನ್ನರ್ ಶಿವ ಸಿಂಗ್ (20 ಲಕ್ಷ ರೂ. ಮೂಲಬೆಲೆ) ಅನ್ಸೋಲ್ಡ್ ಆಗಿದ್ದಾರೆ.
20 ಲಕ್ಷ ಮೂಲಬೆಲೆಯ ಭಾರತದ ಯುವ ವೇಗಿ ರಾಸಿಖ್ ದಾರ್ ಬೇಸ್ಪ್ರೈಸ್ಗೆ ಡೆಲ್ಲಿ ಪಾಲಾದರು.
20 ಲಕ್ಷ ಮೂಲಬೆಲೆ ಹೊಂದಿದ್ದ ಕಾರ್ತಿಕ್ ತ್ಯಾಗಿ ಅವರನ್ನು 60 ಲಕ್ಷಕ್ಕೆ ಗುಜರಾತ್ ಟೈಟಾನ್ಸ್ ಖರೀದಿ ಮಾಡಿದೆ.
ಆಕಾಶ್ ಸಿಂಗ್ ಅವರನ್ನು ಮೂಲಬೆಲೆ 20 ಲಕ್ಷ ರೂ. ಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿ ಮಾಡಿದೆ.
20 ಲಕ್ಷ ಮೂಲಬೆಲೆಯಲ್ಲಿ ಕಾಣಿಸಿಕೊಂಡ ಭಾರತದ ಯುವ ವೇಗಿ ಸುಶಾಂತ್ ಮಿಶ್ರಾ ಅಚ್ಚರಿ ಎಂಬಂತೆ 2.2 ಕೋಟಿಗೆ ಗುಜರಾತ್ ಪಾಲಾಗಿದ್ದಾರೆ. ಹರಾಜಿನಲ್ಲಿ ಮುಂಬೈ-ಗುಜರಾತ್ ನಡುವೆ ಪೈಪೋಟಿ ಏರ್ಪಟ್ಟಿತ್ತು.
20 ಲಕ್ಷ ಮೂಲಬೆಲೆಯ ವೇಗಿ ಯಶ್ ದಯಾಳ್ ಖರೀದಿಗೆ ಆರ್ಸಿಬಿ ಹಾಗೂ ಗುಜರಾತ್ ನಡುವೆ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಇವರು 5 ಕೋಟಿಗೆ ಆರ್ಸಿಬಿ ಪಾಲಾಗಿದ್ದಾರೆ.
20 ಲಕ್ಷ ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ಕುಮಾರ್ ಕುಶಾಗ್ರಾ ಖರೀದಿಗೆ ಡೆಲ್ಲಿ-ಚೆನ್ನೈ-ಗುಜರಾತ್ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು 7.2 ಕೋಟಿಗೆ ಡೆಲ್ಲಿ ಪಾಲಾದರು. ಕುಶಾಗ್ರಾ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ.
20 ಲಕ್ಷ ರೂ. ಮೂಲಬೆಲೆಯ ರಿಕಿ ಭುಯಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
ಇಂಗ್ಲೆಂಡ್ ವಿಕೆಟ್-ಕೀಪರ್ ಬ್ಯಾಟರ್ ಟಾಮ್ ಕೊಹ್ಲರ್ (40 ಲಕ್ಷ ರೂ. ಮೂಲಬೆಲೆ) ಅವರನ್ನು ಬೇಸ್ ಪ್ರೈಸ್ಗೆ ರಾಜಸ್ಥಾನ್ ರಾಯಲ್ಸ್ ಖರೀದಿ ಮಾಡಿದೆ.
20 ಲಕ್ಷಕ್ಕೆ ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿಗೆ ಸೇರಿಕೊಂಡ ಅರ್ಶಿನ್ ಕುಲಕರ್ಣಿ ಬ್ಯಾಟಿಂಗ್ ವೈಭವ ನೋಡಿ
Arshin Kulkarni sold to Lucknow for 20 Lakhs. pic.twitter.com/tzPxtnruQJ
— Johns. (@CricCrazyJohns) December 19, 2023
ಮೂಲ ಬೆಲೆ 20 ಲಕ್ಷಕ್ಕೆ ಕೋಲ್ಕತ್ತಾ ತಂಡ ಸೇರಿಕೊಂಡ ರಮಣ್ದೀಪ್ ಸಿಂಗ್
ಭಾರತದ ಆಲ್ರೌಂಡರ್ ಶಾರುಖ್ ಖಾನ್ಗೆ ಜಿದ್ದಾಜಿದ್ದಿ ನಡೆಯುತ್ತಿದೆ.
ಗುಜರಾತ್ ಹಾಗೂ ಪಂಜಾಬ್ ನಡುವೆ ಫೈಟ್.
5 ಕೋಟಿ ಮೀರಿದ ಬಿಡ್.
7.4 ಕೋಟಿಗೆ ಗುಜರಾತ್ ಪಾಲಾದ ಶಾರುಖ್
20 ಲಕ್ಷ ಮೂಲಬೆಲೆಯ ಮೊಹಮ್ಮದ್ ಅರ್ಷದ್ ಖಾನ್, ಸರ್ಫರಾಜ್ ಖಾನ್, ರಾಜ್ ಅಂಗದ್ ಬಾವಾ, ವಿವ್ರಾಂತ್ ಶರ್ಮಾ ಅನ್ಸೋಲ್ಡ್ ಆಗಿದ್ದಾರೆ.
20 ಲಕ್ಷ ಮೂಲಬೆಲೆಯ ಸಮೀರ್ ರಿಜ್ವಿ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಕಠಿಣ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಬರೋಬ್ಬರಿ 8.4 ಕೋಟಿಗೆ ಸಿಎಸ್ಕೆ ಪಾಲಾಗಿದ್ದಾರೆ.
ಪ್ರಿಯಾಂಶ್ ಆರ್ಯ (20 ಲಕ್ಷ ಮೂಲಬೆಲೆ) ಅನ್ಸೋಲ್ಡ್ ಆಗಿದ್ದಾರೆ.
20 ಲಕ್ಷ ಮೂಲಬೆಲೆಯ ಸೌರವ್ ಚೌಹಾಣ್ ಅನ್ಸೋಲ್ಡ್ ಆಗಿದ್ದಾರೆ.
20 ಲಕ್ಷ ಮೂಲಬೆಲೆಯ ಶುಭಂ ದುಬೆ ಖರೀದಿಗೆ ಡೆಲ್ಲಿ-ರಾಜಸ್ಥಾನ್ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಅಚ್ಚರಿ ಎಂಬಂತೆ 5.80 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ 6ನೇ ಸೆಟ್ನ ಹರಾಜು ಪ್ರಕ್ರಿಯೆ ಶುರುವಾಗಲಿದೆ. ಇದರಲ್ಲಿ ಅನ್‌ಕ್ಯಾಪ್‌ಡ್ ಭಾರತೀಯ ಆಟಗಾರರ ಆಕ್ಷನ್ ನಡೆಯಲಿದೆ.
ಐಪಿಎಲ್ 2024 ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆದ ಮಿಚೆಲ್ ಸ್ಟಾರ್ಕ್ ವಿಡಿಯೋ ನೋಡಿ:
That’s a GRAND return to the IPL for Mitchell Starc 😎
DO NOT MISS the record-breaking bid of the left-arm pacer who will feature for @KKRiders 💜💪#IPLAuction | #IPL pic.twitter.com/D1A2wr2Ql3
— IndianPremierLeague (@IPL) December 19, 2023
ಆಸ್ಟ್ರೇಲಿಯಾದ ವಿಶ್ವ ಚಾಂಪಿಯನ್ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹಣದ ಮಳೆ ಸುರಿಸಿದೆ. ಕೇವಲ ಮೂವರು ಆಟಗಾರರಿಗೆ 50 ಕೋಟಿ ರೂ. ನೀಡಲಾಗಿದೆ.
ಮಿಚೆಲ್ ಸ್ಟಾರ್ಕ್- 24.75 ಕೋಟಿ (ಕೆಕೆಆರ್)
ಪ್ಯಾಟ್ ಕಮ್ಮಿನ್ಸ್- 20.50 ಕೋಟಿ (ಹೈದರಾಬಾದ್)
ಟ್ರಾವಿಸ್ ಹೆಡ್- 6.80 ಕೋಟಿ (ಹೈದರಾಬಾದ್)
ಐಪಿಎಲ್ 2024 ಹರಾಜಿನಲ್ಲಿ ಈವರೆಗೆ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಪ್ಲೇಯರ್ಸ್:
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ರಚಿನ್ ರವೀಂದ್ರ.
Rachin Ravindra on joining CSK. 🦁💛pic.twitter.com/vcparGYbQE
— Mufaddal Vohra (@mufaddal_vohra) December 19, 2023
ಮೊಹಮ್ಮದ್ ವಕಾರ್ – ಅಫ್ಘಾನಿಸ್ತಾನ
ಆದಿಲ್ ರಶೀದ್- ಇಂಗ್ಲೆಂಡ್
ಅಕೇಲ್ ಹೊಸೈನ್ – ವೆಸ್ಟ್ ಇಂಡೀಸ್
ಇಶ್ ಸೋಧಿ- ನ್ಯೂಜಿಲೆಂಡ್
ಮುಜೀಬ್ ಉರ್ ರೆಹಮಾನ್- ಅಫ್ಘಾನಿಸ್ತಾನ
ತಬ್ರೇಜ್ ಶಮ್ಸಿ- ದಕ್ಷಿಣ ಆಫ್ರಿಕಾ
ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ಮುಜೀಬ್ ರೆಹಮಾನ್ (2 ಕೋಟಿ ರೂ. ಮೂಲಬೆಲೆ) ಖರೀದಿಗೆ ಯಾವ ತಂಡ ಮುಂದೆಬರಲಿಲ್ಲ.
ಸೌತ್ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ (50 ಲಕ್ಷ ಮೂಲಬೆಲೆ) ಅನ್ಸೋಲ್ಡ್ ಆಗಿದ್ದಾರೆ.
75 ಲಕ್ಷ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡ ನ್ಯೂಝಿಲೆಂಡ್ ಸ್ಪಿನ್ನರ್ ಇಶ್ ಸೋಧಿ ಕೂಡ ಅನ್ಸೋಲ್ಡ್ ಆಗಿದ್ದಾರೆ.
50 ಲಕ್ಷ ಮೂಲಬೆಲೆ ಹೊಂದಿದ್ದ ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕೇಲ್ ಹೊಸೈನ್ ಅವರನ್ನು ಯಾರೂ ಖರೀದಿಸಲಿಲ್ಲ.
2 ಕೋಟಿ ಮೂಲಬೆಲೆಯ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಕೂಡ ಅನ್ಸೋಲ್ಡ್ ಆಗಿದ್ದಾರೆ.
ಅಫ್ಘಾನಿಸ್ತಾನ ಸ್ಪಿನ್ ಬೌಲರ್ ಮೊಹಮ್ಮದ್ ವಕಾರ್ ಸಲಾಮ್ಖೇಲ್ (50 ಲಕ್ಷ ಮೂಲಬೆಲೆ) ಅನ್ಸೋಲ್ಡ್ ಆಗಿದ್ದಾರೆ.
ಶ್ರೀಲಂಕಾ ಆಟಗಾರ
50 ಲಕ್ಷ ಮೂಲ ಬೆಲೆ
4.60 ಕೋಟಿಗೆ ಮುಂಬೈ ಇಂಡಿಯನ್ಸ್ ಸೇರಿದ ಲಂಕಾ ವೇಗಿ ದಿಲ್ಶನ್ ಮಧುಶಂಕ
50 ಲಕ್ಷ ಮೂಲಬೆಲೆಯ ಜಯದೇವ್ ಉನಾದ್ಕಟ್ 1.60 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪಾಲಾಗಿದ್ದಾರೆ.
2 ಕೋಟಿ ಮೂಲಬೆಲೆಯ ಜೋಶ್ ಹ್ಯಾಝಲ್‌ವುಡ್ ಅನ್ಸೋಲ್ಡ್ ಆಗಿದ್ದಾರೆ.
2 ಕೋಟಿ ಮೂಲಬೆಲೆ ಹೊಂದಿದ್ದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಖರೀದಿಗೆ ಡೆಲ್ಲಿ-ಮುಂಬೈ-ಕೆಕೆಆರ್-ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರನಾಗಿದ್ದಾರೆ.
50 ಲಕ್ಷ ಮೂಲಬೆಲೆ ಹೊಂದಿದ್ದ ಶಿವಂ ಮಾವಿ ಖರೀದಿಗೆ ಲಕ್ನೋ ಸೂಪರ್ ಜೇಂಟ್ಸ್ ಮತ್ತು ಆರ್ಸಿಬಿ ನಡುವೆ ಕಠಿಣ ಪೈಪೋಟಿ ನಡೆಯಿತು. ಅಂತಿಮವಾಗಿ ಇವರು ಅಚ್ಚರಿ ಎಂಬಂತೆ 6.40 ಕೋಟಿಗೆ ಲಕ್ನೋ ಫ್ರಾಂಚೈಸಿ ಪಾಲಾಗಿದ್ದಾರೆ.
2 ಕೋಟಿ ಮೂಲಬೆಲೆಯ ಉಮೇಶ್ ಯಾದವ್ ಖರೀದಿಗೆ ಗುಜರಾತ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹೈದರಾಬಾದ್ ಮುಂದೆಬಂತು. ಅಂತಿಮವಾಗಿ ಯಾದವ್ 5.80 ಕೋಟಿಗೆ ಗುಜರಾತ್ ಪಾಲಾದರು.
ವಿಂಡೀಸ್ ಮಾರಕ ವೇಗಿ ಅಲ್ಜಾರಿ ಜೋಸೆಫ್ (1 ಕೋಟಿ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೇಂಟ್ಸ್, ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಂದೆಬಂತು. ಇವರು ಅಂತಿಮವಾಗಿ 11.50 ಕೋಟಿಗೆ ಆರ್ಸಿಬಿ ಪಾಲಾದರು.
50 ಲಕ್ಷ ಮೂಲಬೆಲೆ ಹೊಂದಿದ್ದ ಚೇತನ್ ಸಕರಿಯಾ ಕೆಕೆಆರ್ ಪಾಲಾಗಿದ್ದಾರೆ.
ಸ್ಟಾರ್ ವೇಗಿ ಲಾಕಿ ಫರ್ಗುಸನ್ (2 ಕೋಟಿ ಮೂಲಬೆಲೆ) ಖರೀದಿಗೆ ಯಾವ ಫ್ರಾಂಚೈಸಿ ಕೂಡ ಮುಂದೆಬರಲಿಲ್ಲ.
ಲಂಕಾದ ವಿಕೆಟ್ ಕೀಪರ್-ಬ್ಯಾಟರ್ ಕುಸಾಲ್ ಮೆಂಡಿಸ್ (50 ಲಕ್ಷ ಮೂಲಬೆಲೆ) ಕೂಡ ಅನ್ಸೋಲ್ಡ್ ಆಗಿದ್ದಾರೆ.
2 ಕೋಟಿ ಮೂಲಬೆಲೆಯ ಇಂಗ್ಲೆಂಡ್ ಆಟಗಾರ ಜೋಶ್ ಇಂಗ್ಲಿಸ್ ಖರೀದಿಗೆ ಯಾವ ಫ್ರಾಂಚೈಸಿ ಮುಂದೆ ಬರಲಿಲ್ಲ. ಇವರು ಅನ್ಸೋಲ್ಡ್ ಆಗಿದ್ದಾರೆ.
ಭಾರತದ ಕೆಎಸ್ ಭರತ್ (50 ಲಕ್ಷ ಮೂಲಬೆಲೆ) ಅವರನ್ನು ಮೂಲಬೆಲೆಗೆ ಕೋಲ್ಕತ್ತಾ ಖರೀದಿಸಿದೆ.
ದ. ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ (50 ಲಕ್ಷ ಮೂಲಬೆಲೆ) ಅವರನ್ನು ಮೂಲಬೆಲೆಗೆ ಡೆಲ್ಲಿ ಪಾಲಾಗಿದ್ದಾರೆ.
1.5 ಕೋಟಿ ಮೂಲಬೆಲೆಯ ಫಿಲಿಪ್ ಸಾಲ್ಟ್ ಖರೀದಿಗೆ ಯಾವ ತಂಡ ಕೂಡ ಮುಂದೆ ಬಂದಿಲ್ಲ. ಇವರು ಅನ್ಸೋಲ್ಡ್ ಆಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರು:
Highest paid players in IPL history…..!!!! pic.twitter.com/cEL64yUx9Z
— Johns. (@CricCrazyJohns) December 19, 2023
ಐಪಿಎಲ್ 2024 ಮಿನಿ ಹರಾಜಿನಲ್ಲಿ ಸುಮಾರು 10 ನಿಮಿಷಗಳ ಅಲ್ಪ ವಿರಾಮ ನೀಡಲಾಗಿದೆ.
2 ಕೋಟಿ ಮೂಲಬೆಲೆಯ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ 4.20 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇವರನ್ನು ಖರೀದಿಸಲು ಪಂಜಾಬ್ಗೆ ಕೆಕೆಆರ್ ಕಠಿಣ ಪೈಪೋಟಿ ನೀಡಿತು.
Published On - 10:44 am, Tue, 19 December 23