ಐಪಿಎಲ್ ಮೆಗಾ ಹರಾಜಿಗೆ ಸ್ಥಳ ಫಿಕ್ಸ್; ಈ ಎರಡು ದಿನಗಳಲ್ಲಿ ನಡೆಯಲ್ಲಿದೆ ಖರೀದಿ ಪ್ರಕ್ರಿಯೆ

|

Updated on: Nov 04, 2024 | 3:42 PM

IPL 2025 Mega Auction: ಐಪಿಎಲ್ 2025ರ ಮೆಗಾ ಹರಾಜು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನವೆಂಬರ್ 24 ಮತ್ತು 25ರಂದು ನಡೆಯುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ 125 ಕೋಟಿ ರೂ.ಗಳ ಹರಾಜು ಪರ್ಸ್ ಅನ್ನು ಘೋಷಿಸಿದೆ. ಪಂಜಾಬ್ ಕಿಂಗ್ಸ್ ಹೆಚ್ಚು ಹಣವನ್ನು ಹೊಂದಿದ್ದು, ಪ್ರಮುಖ ಆಟಗಾರರ ಮೇಲೆ ಹಣದ ಮಳೆ ನಿರೀಕ್ಷಿಸಲಾಗಿದೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮುಂತಾದ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

ಐಪಿಎಲ್ ಮೆಗಾ ಹರಾಜಿಗೆ ಸ್ಥಳ ಫಿಕ್ಸ್; ಈ ಎರಡು ದಿನಗಳಲ್ಲಿ ನಡೆಯಲ್ಲಿದೆ ಖರೀದಿ ಪ್ರಕ್ರಿಯೆ
ಐಪಿಎಲ್ ಮೆಗಾ ಹರಾಜು
Follow us on

2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರಂದು ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಇದರಲ್ಲಿ ಕೆಲವು ಫ್ರಾಂಚೈಸಿಗಳು ಬಿಸಿಸಿಐ ರೂಪಿಸಿದ್ದ ಧಾರಣ ನಿಯಮವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು, ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಿದ್ದವು. ಇದೀಗ ಆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಮೆಗಾ ಹರಾಜಿನತ್ತ ನೆಟ್ಟಿದೆ. ಏಕೆಂದರೆ ಮೆಗಾ ಹರಾಜಿನಲ್ಲಿ ತಂಡಕ್ಕೆ ಅವಶ್ಯಕವಾದ ಆಟಗಾರರನ್ನು ಖರೀದಿಸುವುದು ಈ ಫ್ರಾಂಚೈಸಿಗಳ ಪ್ರಮುಖ ಗುರಿಯಾಗಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್‌ ಹೊರಬಿದ್ದಿದ್ದು, ಬಿಸಿಸಿಐ ಈ ಬಾರಿಯ ಐಪಿಎಲ್ ಹರಾಜಿಗೆ ಸ್ಥಳವನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ.

ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು

ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ 2025 ರ ಮೆಗಾ ಹರಾಜು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆಯಲಿದೆ. ಕೆಲವೇ ದಿನಗಳ ಹಿಂದೆ, ಬಿಸಿಸಿಐ ಲಂಡನ್ ಅಥವಾ ಸೌದಿಯಲ್ಲಿ ಹರಾಜು ಆಯೋಜಿಸಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಆದರೆ ಇದೀಗ ಬಿಸಿಸಿಐ, ರಿಯಾದ್​ನಲ್ಲಿ ಹರಾಜು ನಡೆಸಲು ತೀರ್ಮಾನಿಸಿದೆ. ಇದೀಗ ಇದರ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ನವೆಂಬರ್‌ನಲ್ಲಿ ಮೆಗಾ ಹರಾಜು

ವರದಿಗಳ ಪ್ರಕಾರ, ಐಪಿಎಲ್ 2025 ರ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಆದರೆ ಇದನ್ನು ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ. ಆದರೆ ನವೆಂಬರ್ 24 ಮತ್ತು 25 ಈ ಎರಡು ದಿನಗಳಲ್ಲಿ ಮೆಗಾ ಹರಾಜು ನಡೆಸಲಲು ಬಹುತೇಕ ತೀರ್ಮಾನಿಸಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಅವರಲ್ಲಿ ರಿಷಬ್ ಪಂತ್ ಅಲ್ಲದೆ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಜೋಸ್ ಬಟ್ಲರ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದು, ಇವರ ಮೇಲೆ ಹಣದ ಮಳೆಯನ್ನು ನಿರೀಕ್ಷಿಸಲಾಗಿದೆ.

ಈ ಆಟಗಾರರ ಮೇಲೆ ಹಣದ ಸುರಿಮಳೆ

ಐಪಿಎಲ್ 2025 ಕ್ಕೂ ಮುನ್ನ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಪರ್ಸ್‌ ಗಾತ್ರವನ್ನು ಹೆಚ್ಚಿಸಿತ್ತು. ಈ ಹಿಂದೆ ಪ್ರತಿ ತಂಡವು 100 ಕೋಟಿ ರೂ. ಹರಾಜು ಮೊತ್ತದೊಂದಿಗೆ ಹರಾಜಿಗಿಳಿಯುತ್ತಿದ್ದವು. ಆದರೆ ಹೊಸ ನಿಯಮದ ಪ್ರಕಾರ ಈಗ ಫ್ರಾಂಚೈಸಿಗಳಿಗೆ 125 ಕೋಟಿ ರೂ. ಹರಾಜು ಮೊತ್ತ ಸಿಗಲಿದೆ. ಪ್ರಸ್ತುತ ಪಂಜಾಬ್ ಕಿಂಗ್ಸ್ ಬಳಿ ಅಧಿಕ ಮೊತ್ತವಿದ್ದು, ಈ ಫ್ರಾಂಚೈಸಿ ಕೇವಲ ಇಬ್ಬರನ್ನು ಉಳಿಸಿಕೊಂಡಿದ್ದು, ಇದರ ಬಳಿ ಇನ್ನು 110.5 ರೂಪಾಯಿ ಹಣ ಉಳಿದಿದೆ. ಉಳಿದಂತೆ ಆರ್‌ಸಿಬಿ ಬಳಿ 83 ಕೋಟಿ, ಎಸ್‌ಆರ್‌ಎಚ್‌ ಬಳಿ 45 ಕೋಟಿ, ಎಲ್‌ಎಸ್‌ಜಿ ಬಳಿ 69 ಕೋಟಿ, ರಾಜಸ್ಥಾನ ಬಳಿ 79 ಕೋಟಿ, ಸಿಎಸ್‌ಕೆ ಬಳಿ 69 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್‌ ಬಳಿ 73 ಕೋಟಿ ರೂ. ಹಣವಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ