ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ವೇಗಿ ದೀಪಕ್ ಚಹರ್ (Deepak Chahar) ಗುರುವಾರ ಪಂಜಾಬ್ ಕಿಂಗ್ಸ್ (CSK vs PBKS) ವಿರುದ್ಧದ ಐಪಿಎಲ್ 2021 (IPL 2021) ಪಂದ್ಯ ಮುಗಿದ ಬೆನ್ನಲ್ಲೇ ಗೆಳತಿಗೆ ಪ್ರೇಮನಿವೇದನೆ ಮಾಡಿಕೊಂಡರು. ಈ ಪಂದ್ಯದಲ್ಲಿ ಸಿಎಸ್‌ಕೆ 6 ವಿಕೆಟ್‌ಗಳ ಸೋಲಿನ ಮುಖಭಂಗ ಅನುಭವಿಸಿತಾದರೂ, ದೀಪಕ್ ಚಹರ್ ಸೋಲಿನ ನಡುವೆಯೂ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ತಮ್ಮ ಪ್ರೇಯಸಿ ಜಯಾ ಭಾರದ್ವಾಜ್ (Jaya Bhardwaj) ಅವರಲ್ಲಿ ಪ್ರೇಮ ನಿವೇದನೆ ತೋಡಿಕೊಂಡರು. ಅಲ್ಲದೆ ಕ್ರೀಡಾಂಗಣದಲ್ಲೇ ಉಂಗುರ ತೊಡಿಸಿ ಸಂಭ್ರಮಿಸಿದರು. ಇದರಿಂದ ಆಟಗಾರರ ಮುಖದಲ್ಲಿ ಕೆಲವೇ ಕ್ಷಣಗಳಲ್ಲಿ ಸಂಭ್ರಮ ಮನೆ ಮಾಡಿತು. ಈ ಘಟನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಲು ಶುರು ಆಗೋ ಹೊತ್ತಿಗೆ ಚಹರ್ ಪ್ರೊಪೋಸ್ (Deepak Chahar Proposal) ಮಾಡಿದ ಆ ಹುಡುಗಿ ಯಾರು?, ಅವರು ಏನು ಕೆಲಸ ಮಾಡುತ್ತಿದ್ದಾರೆ? ಎಂಬ ಹುಡುಕಾಟ ಜೋರಾಗಿಯೇ ನಡೆಯಿತು.
ದೀಪಕ್ ಚಹರ್ ಕ್ರೀಡಾಂಗಣದಲ್ಲಿ ತಮ್ಮ ಪ್ರೇಯಸಿಗೆ ಉಂಗುರ ತೊಡಿಸಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಈಗಲೂ ಧೂಳೆಬ್ಬಿಸುತ್ತಿದೆ. ಹಲವು ಹಾಲಿ ಮಾಜಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದೀಪಕ್ ಚಹರ್ ಸಹೋದರಿ ಮಾಲತಿ ಚಹರ್, “ನನ್ನ ಸಹೋದರ ಇನ್ನು ಸಿಂಗಲ್ ಅಲ್ಲ. ನೋಡಿ ನನಗೆ ಅತ್ತಿಗೆ ಇವರೇ. ಹೊಳೆಯುವ ಮುಖ, ನಗುತ್ತಿರುವ ಕಣ್ಣುಗಳು. ಅವರ ಹೆಸರು ಜಯಾ ಭಾರದ್ವಾಜ್. ಹಾಗಂತ ಇವರು ವಿದೇಶದವರಲ್ಲ. ದಿಲ್ಲಿ ಹುಡುಗಿ. ಆ ದೇವರು ನಿಮ್ಮಿಬ್ಬಗೆ ಒಳ್ಳೆಯದು ಮಾಡಲಿ,” ಎಂದು ಮಾಲತಿ ಟ್ವೀಟ್ ಮಾಡಿದ್ದಾರೆ.
Special and one of the best moment of my life #love pic.twitter.com/jsCEhiAUZY
— Deepak chahar ?? (@deepak_chahar9) October 7, 2021
ಆದರೆ, ಜಯಾ ಭಾರದ್ವಾಜ್ ಎಲ್ಲಿಯೂ ವೈಯಕ್ತಿಕ ವಿವರಗಳನ್ನು ಯಾರೂ ಬಹಿರಂಗಪಡಿಸಿಲ್ಲ. ಸದ್ಯ ಇವರ ಬಗ್ಗೆ ಒಂದಿಷ್ಟು ಮಾಹಿತಿ ಹೊರಬಿದ್ದಿದೆ. ಜಯಾ ಅವರು ನಟ ಮತ್ತು ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನ ಜನಪ್ರಿಯ ಸ್ಪರ್ಧಾಳುವಾಗಿದ್ದ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೆಹಲಿಯವರಾದ ಜಯಾ, ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ದೀಪಕ್ ಚಾಹರ್ ಗೆಳತಿ ಜಯಾ ಅವರನ್ನು ಈಗಾಗಲೇ ಟೀಮ್ ಇಂಡಿಯಾದ ಆಟಗಾರರಿಗೆ ಪರಿಚಯಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ.
ಇನ್ನು ಕೆಲ ವರ್ಷಗಳಿಂದಲೂ ಇಬ್ಬರೂ ಪರಿಚಿತರಿದ್ದಾರೆ. ಚಾಹರ್ ಜೊತೆ ಜಯಾ ಕೂಡ ಐಪಿಎಲ್ ಪಂದ್ಯ ವೀಕ್ಷಿಸಲು ಯುಎಇಗೆ ಆಗಮಿಸುವ ಮುನ್ನವೇ ಇಬ್ಬರ ಮನಸು ಒಂದಾಗಿತ್ತು. ಐಪಿಎಲ್ ಪಂದ್ಯದ ವೇಳೆ ಜಯ ಅವರಿಗೆ ಪ್ರೊಪೋಸ್ ಮಾಡುವ ಐಡಿಯಾವನ್ನು ದೀಪಕ್ ಚಹರ್ ಎಂಎಸ್ ಧೋನಿ ಅವರಲ್ಲಿ ಇಟ್ಟಿದ್ದರು. ಅದಕ್ಕೆ ಧೋನಿ ಅವರು ಪ್ಲೇ ಆಫ್ಗೆ ಮುಂಚೆಯೇ ಪ್ರೊಪೋಸ್ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ, ಚಹರ್ ಅವರು ಚೆನ್ನೈನ ಕೊನೆಯ ಲೀಗ್ ಪಂದ್ಯವನ್ನು ತಮ್ಮ ಪ್ರಿಯತಮೆಯ ಪ್ರೊಪೋಸ್ಗೆ ಅಯ್ಕೆ ಮಾಡಿಕೊಂಡರಂತೆ.
ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ 6 ವಿಕೆಟ್‌ಗಳಿಂದ ಸಿಎಸ್‌ಕೆ ತಂಡವನ್ನು ಮಣಿಸಿತು. ಪಂಜಾಬ್‌ಗೆ ಕಡಿವಾಣ ಹಾಕಲು ವಿಫಲವಾದ ದೀಪಕ್ ಚಹರ್ ತಮ್ಮ 4 ಓವರ್ ಕೋಟಾದಲ್ಲಿ 1 ವಿಕೆಟ್ ಪಡೆದು 48 ರನ್ ಬಿಟ್ಟುಕೊಟ್ಟರು. ಸಿಎಸ್‌ಕೆ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
Mumbai Indians: ಮುಂಬೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಹೀಗೆ ಮಾಡಬೇಕು
RCB Predicted XI: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ತಂಡದಿಂದ ಇಬ್ಬರು ಆಟಗಾರರು ಔಟ್: 2 ಬದಲಾವಣೆ ಖಚಿತ
()