ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶೀ ಲೀಗ್ ರಣಜಿ ಟ್ರೋಫಿ (Ranji Trophy 2024) ಸೀಸನ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ (Mayank Agarwal) ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮಯಾಂಕ್ ಅವರನ್ನು ಕೂಡಲೇ ತ್ರಿಪುರಾದ ಅಗರ್ತಲಾ ಎಎಲ್ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ವಾಸ್ತವಾಗಿ ತ್ರಿಪುರ ವಿರುದ್ಧ ರಣಜಿ ಪಂದ್ಯವನ್ನಾಡಿದ್ದ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ರೈಲ್ವೇಸ್ ವಿರುದ್ಧ ಗುಜರಾತ್ನ ಸೂರತ್ನಲ್ಲಿ ಆಡಬೇಕಿತ್ತು. ಉಭಯ ತಂಡಗಳ ಈ ಪಂದ್ಯ ಇದೇ ಫೆಬ್ರವರಿ 2 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಕರ್ನಾಟಕ ರಣಜಿ ತಂಡದ ಆಟಗಾರರು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ವಿಮಾನದಲ್ಲಿ ನೀರು ಕುಡಿದ ಮಯಾಂಕ್ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮುಂದಿನ ರಣಜಿ ಪಂದ್ಯಕ್ಕಾಗಿ ಸೂರತ್ಗೆ ಪ್ರಯಾಣ ಬೆಳೆಸಲು ತಂಡದೊಂದಿಗೆ ವಿಮಾನವೇರಿದ್ದ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಇಟ್ಟಿದ್ದ ನೀರನ್ನು ಕೂಡಿದಿದ್ದಾರೆ. ಮಯಾಂಕ್ ನೀರು ಕುಡಿಯುತ್ತಿದ್ದಂತೆ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಹಾಗೆಯೇ ಬಾಯಿ, ನಾಲಿಗೆ ಸುಟ್ಟಂತ ಅನುಭವವಾಗಿದೆ. ಹೀಗಾಗಿ ಮಯಾಂಕ್ ಮಾತನಾಡಲು ಸಾಧ್ಯವಾಗದೆ ವಿಮಾನದಲ್ಲೇ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Ranji Trophy 2024: ಗೋವಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಮಯಾಂಕ್- ಪಡಿಕ್ಕಲ್..!
ಕಳೆದ 2 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ 32 ವರ್ಷದ ಮಯಾಂಕ್ ಅಗರ್ವಾಲ್, ಫೆಬ್ರವರಿ-ಮಾರ್ಚ್ 2022 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ನಂತರ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. ಆದರೆ, ಪ್ರಸಕ್ತ ರಣಜಿ ಟ್ರೋಫಿ ಸೀಸನ್ನಲ್ಲಿ ಮಯಾಂಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂಜಾಬ್ ವಿರುದ್ಧ ನಡೆದ ಮೊದಲ ರಣಜಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯಲಾಗದೆ ಮಯಾಂಕ್ ಔಟಾಗಿದ್ದರು. ಇದಾದ ಬಳಿಕ ನಡೆದ ಗುಜರಾತ್ ಮತ್ತು ಗೋವಾ ವಿರುದ್ಧ ಸತತ 2 ಪಂದ್ಯಗಳಲ್ಲಿ ಮಯಾಂಕ್ ಶತಕ ಬಾರಿಸಿದ್ದರು.
ಇಲ್ಲಿಯವರೆಗೆ ಆಡಿರುವ ನಾಲ್ಕು ರಣಜಿ ಟ್ರೋಫಿ ಪಂದ್ಯಗಳಲ್ಲಿ ಮಯಾಂಕ್ 44.28 ರ ಸರಾಸರಿಯಲ್ಲಿ ಎರಡು ಶತಕ ಸೇರಿದಂತೆ 460 ರನ್ ಗಳಿಸಿದ್ದಾರೆ. ರಣಜಿ ಟ್ರೋಫಿ ಎಲೈಟ್ ಗುಂಪಿನ ಸಿ ಗುಂಪಿನಲ್ಲಿ ಕರ್ನಾಟಕ ತಂಡವು ನಾಲ್ಕು ಪಂದ್ಯಗಳಲ್ಲಿ 15 ಅಂಕಗಳೊಂದಿಗೆ ಎರಡು ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಕಳೆದುಕೊಂಡು ಎರಡನೇ ಸ್ಥಾನದಲ್ಲಿದೆ.
ಭಾರತದ ಪರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 21 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಯಾಂಕ್ ಅವರು 21 ಪಂದ್ಯಗಳಲ್ಲಿ 41.3 ರ ಸರಾಸರಿಯಲ್ಲಿ 1488 ರನ್ ಗಳಿಸಿದ್ದಾರೆ, ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ಹಾಗೆಯೇ ಟೀಂ ಇಂಡಿಯಾ ಪರ ಮಯಾಂಕ್ ಐದು ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Tue, 30 January 24