ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಐಪಿಎಲ್ನ 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿನ ಸರಣಿಯನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತನ್ನ ನಾಯಕ ಶಿಖರ್ ಧವನ್ ಅನುಪಸ್ಥಿತಿಯಲ್ಲೂ ಬಲಿಷ್ಠ ಪ್ರದರ್ಶನ ನೀಡಿ 2 ವಿಕೆಟ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ನಾಯಕ ರಾಹುಲ್ ಅವರ ಅರ್ಧಶತಕದ ನೆರವಿನಿಂದ 159 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತ್ತಾದರೂ, ಕೆಳಕ್ರಮಾಂಕದಲ್ಲಿ ಬಂದ ಸಿಕಂದರ್ ರಜಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಶಾರುಖ್ ಖಾನ್ ಕೂಡ ಅಬ್ಬರದ ಇನ್ನಿಂಗ್ಸ್ ಆಡುವ ಮೂಲಕ ಪಂಜಾಬ್ ತಂಡಕ್ಕೆ ಗೆಲುವು ತಂದಿತ್ತರು.
20ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಎರಡು ಡಬಲ್ ಕದ್ದ ಶಾರುಖ್ 3ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಪಂಜಾಬ್ ತಂಡಕ್ಕೆ ಗೆಲುವು ತಂದುಕೊಟ್ಟರು.
19ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಬ್ರಾರ್ 5ನೇ ಎಸೆತದಲ್ಲಿ ಕೀಪರ್ಗೆ ಕ್ಯಾಚಿತ್ತು ಔಟಾದರು.
ಮಾರ್ಕ್ವುಡ್ ಅವರ 19ನೇ ಓವರ್ನ 2ನೇ ಎಸೆತದಲ್ಲಿ ಶಾರುಖ್ ಕೀಪರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.
ಪಂಜಾಬ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಸಿಕಂದರ್ ರಜಾ ರವಿ ಬಿಷ್ಣೋಯಿ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಜಿತೇಶ್ ಬಳಿಕ ಬಂದ ಶಾರುಖ್ ಖಾನ್ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು.
ಒಂದೆಡೆ ಸಿಕಂದರ್ ಅಬ್ಬರದ ಬ್ಯಾಟಿಂಗ್ ಆಡುತ್ತಿದ್ದರೆ, ಇನ್ನೊಂದೆಡೆ ಪಂಜಾಬ್ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದೆ. ಕರನ್ ವಿಕೆಟ್ ಬಳಿಕ ಬಂದಿದ್ದ ಜಿತೇಶ್ ರಾಹುಲ್ಗೆ ಕ್ಯಾಚಿತ್ತು ಔಟಾಗಿದ್ದಾರೆ.
ಮಾರ್ಕ್ವುಡ್ ಎಸೆದ 16ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸಿಕಂದರ್, ಮುಂದಿನ ಎಸೆತದಲ್ಲಿ ಸಿಂಗಲ್ ಕದ್ದು ತಮ್ಮ ಅರ್ಧಶತಕ ಪೂರೈಸಿದರು.
ಬಿಷ್ಣೋಯಿ ಎಸೆದ 15ನೇ ಓವರ್ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸ್ಯಾಮ್ ಕರನ್ ಅದರ ನಂತರದ ಎಸೆತದಲ್ಲೇ ಲಾಂಗ್ ಆಫ್ನಲ್ಲಿ ಕೃನಾಲ್ಗೆ ಕ್ಯಾಚಿತ್ತು ಔಟಾದರು.
ಕೃನಾಲ್ ಎಸೆದ 13ನೇ ಓವರ್ನ 2 ಮತ್ತು 3 ನೇ ಎಸೆತವನ್ನು ರಜಾ ಓವರ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ ಬಾರಿಸಿದರೆ, 4ನೇ ಎಸೆತವನ್ನು ಓವರ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರು.
12ನೇ ಓವರ್ ಎಸೆದ ಗೌತಮ್ 1 ಸಿಕ್ಸರ್ ಬಿಟ್ಟುಕೊಟ್ಟರು. ರಜಾ ಲಾಂಗ್ ಆಫ್ನಲ್ಲಿ ಸಿಕ್ಸರ್ ಬಾರಿಸಿದರು.
11ನೇ ಓವರ್ ಬೌಲ್ ಮಾಡಿದ ಕೃನಾಲ್ ಪಾಂಡ್ಯ ಹರ್ಪ್ರೀತ್ ಸಿಂಗ್ ವಿಕೆಟ್ ಕಬಳಿಸಿದರು. 22 ಎಸೆತಗಳಲ್ಲಿ 22 ರನ್ ಬಾರಿಸಿದ್ದ ಸಿಂಗ್ ಡೀಪ್ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
ಕೃನಾಲ್ ಎಸೆದ 9ನೇ ಓವರ್ನ ನಾಲ್ಕನೇ ಎಸೆತದಲ್ಲಿ ಹರ್ಪ್ರೀತ್ ಸಿಂಗ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರು.
ಶಾರ್ಟ್ ವಿಕೆಟ್ ಪತನವಾದ ಬಳಿಕ ಪಂಜಾಬ್ ಬ್ಯಾಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿದೆ. 2 ಓವರ್ಗಳಿಂದ ಯಾವುದೇ ಬೌಂಡರಿ ಬಂದಿಲ್ಲ.
ಪವರ್ ಪ್ಲೇನ ಕೊನೆಯ ಓವರ್ನ 5ನೇ ಎಸೆತವನ್ನು ಸಿಕ್ಸರ್ಗಟ್ಟಿದ ಶಾರ್ಟ್, ಕೊನೆಯ ಎಸೆತದಲ್ಲಿ ಮಿಡ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು. ಪಂಜಾಬ್ ಕಿಂಗ್ಸ್ 45 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತು.
5ನೇ ಓವರ್ ಎಸೆದ ಯದ್ವೀರ್ ಕೊಂಚ ದುಬಾರಿಯಾದರು. ಈ ಓವರ್ನಲ್ಲಿ ಶಾರ್ಟ್ 2 ಬೌಂಡರಿ ಬಾರಿಸಿದರು.
ಲಕ್ನೋ ಪರ ಮೊದಲ ಪಂದ್ಯವನ್ನಾಡುತ್ತಿರುವ ಯದ್ವೀರ್ ಮೊದಲ ಓವರ್ನಲ್ಲಿ ಒಂದು ವಿಕೆಟ್ ಉರುಳಿಸಿದರೆ, 2ನೇ ಓವರ್ನಲ್ಲಿ ಮತ್ತೊಂದು ವಿಕೆಟ್ ಉರುಳಿಸಿದರು. ಈ ಓವರ್ನ 2ನೇ ಎಸೆತದಲ್ಲಿ ಪ್ರಬ್ಸಿಮ್ರನ್ ಔಟಾದರು.
ಅವೇಶ್ ಖಾನ್ ಎಸೆದ 2ನೇ ಓವರ್ನಲ್ಲಿ ಶಾರ್ಟ್ 2 ಬೌಂಡರಿ ಬಾರಿಸಿದರು.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡದ ಮೊದಲ ವಿಕೆಟ್ ಪತನವಾಗಿದೆ. ಇಂದು ಮೊದಲ ಪಂದ್ಯವನ್ನಾಡಿದ ಯದ್ವೀರ್ ಸಿಂಗ್ ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
20ನೇ ಓವರ್ನಲ್ಲಿ 2 ವಿಕೆಟ್ ಉರುಳಿಸಿದ ನಾಯಕ ಸ್ಯಾಮ್ ಕರನ್ ಕೇವಲ 7 ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಲಕ್ನೋ ತಂಡ ನಾಯಕ ರಾಹುಲ್ ಅವರ ಅರ್ಧಶತಕದ ನೆರವಿನಿಂದ 159 ರನ್ ಕಲೆಹಾಕಿದೆ.
56 ಎಸೆತಗಳಲ್ಲಿ 74 ರನ್ ಬಾರಿಸಿದ್ದ ನಾಯಕ ರಾಹುಲ್ 19ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
18ನೇ ಓವರ್ನ 5ನೇ ಎಸೆತದಲ್ಲಿ ಸ್ಟೋಯ್ನಿಸ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
17ನೇ ಓವರ್ನ 4ನೇ ಎಸೆತವನ್ನು ರಾಹುಲ್ ಡೀಪ್ ಪಾಯಿಂಟ್ನಲ್ಲಿ ಸಿಕ್ಸರ್ಗಟ್ಟಿದರು. 17 ಓವರ್ ಅಂತ್ಯಕ್ಕೆ 138/4
16ನೇ ಓವರ್ನಲ್ಲಿ ಸ್ಟೋಯ್ನಿಸ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದರು. ಮೊದಲ ಸಿಕ್ಸರ್ ಬೌಲರ್ ತಲೆಯ ಮೇಲೆ ಬಂದರೆ, 2ನೇ ಸಿಕ್ಸರ್ ಡೀಪ್ ಮಿಡ್ ವಿಕೆಟ್ ಮೇಲೆ ಬಂತು.
ರಬಾಡ್ ಪಂಜಾಬ್ ತಂಡಕ್ಕೆ ಡಬಲ್ ಸಂತಸ ತಂದಿದ್ದಾರೆ. ಮೊದಲು ಪಾಂಡ್ಯ ವಿಕೆಟ್ ಪಡೆದ ರಬಾಡ, ಆ ಬಳಿಕ ಬಂದ ಡೇಂಜರಸ್ ಪೂರನ್ ವಿಕೆಟ್ ಉರುಳಿಸಿದರು. ಪೂರನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ರಾಹುಲ್ ಚಹರ್ ಎಸೆದ 14ನೇ ಓವರ್ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಹುಲ್ ತಮ್ಮ ಅರ್ಧಶತಕ ಪೂರೈಸಿದರು.
11ನೇ ಓವರ್ ಬೌಲ್ ಮಾಡಿದ ರಜಾ ನೋ ಬಾಲ್ ಎಸೆದರು. ಈ ಬಾಲ್ನಲ್ಲಿ ಬೌಂಡರಿ ಕೂಡ ಬಂತು. ನಂತರ ಫ್ರೀ ಹಿಟ್ ಬಾಲ್ನಲ್ಲಿ ಪಾಂಡ್ಯ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು.
10ನೇ ಓವರ್ ಎಸೆದ ಕರನ್ 2 ಬೌಂಡರಿ ಹೊಡೆಸಿಕೊಂಡರು. ರಾಹುಲ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರೆ, ಕೃನಾಲ್ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಹೊಡೆದರು.
9ನೇ ಓವರ್ ಬೌಲ್ ಮಾಡಿದ ರಜಾ 2ನೇ ಎಸೆತದಲ್ಲಿ ಬೌಂಡರಿ ತಿಂದರೆ, ಅದೇ ಓವರ್ನ 4ನೇ ಎಸೆತದಲ್ಲಿ ಹೂಡಾ ವಿಕೆಟ್ ಪಡೆದರು.
8ನೇ ಓವರ್ನ ನಾಲ್ಕನೇ ಎಸೆತದಲ್ಲಿ ಹಪ್ರೀತ್ ಬ್ರಾರ್ ಡೆಂಜರಸ್ ಮೇಯರ್ಸ್ ವಿಕೆಟ್ ಉರುಳಿಸಿದ್ದಾರೆ.
ಲಕ್ನೋ ಪಾಳಯದ 6 ಓವರ್ ಮುಗಿದಿದ್ದು, 6ನೇ ಓವರ್ನ ಮೊದಲ ಎಸೆತವನ್ನು ರಾಹುಲ್ ವೈಡ್ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರು.
4ನೇ ಓವರ್ನ 5ನೇ ಎಸೆತವನ್ನು ಮೇಯರ್ಸ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರು.
ರಬಾಡ ಬೌಲ್ ಮಾಡಿದ 3ನೇ ಓವರ್ನಲ್ಲಿ 2 ಬೌಂಡರಿಗಳು ಬಂದವು. ಮೊದಲನೇ ಬೌಂಡರಿ ಮೇಯರ್ಸ್ ಬಾರಿಸಿದರೆ, 2ನೇ ಬೌಂಡರಿಯನ್ನು ರಾಹುಲ್ ಬಾರಿಸಿದರು.
ಅರ್ಷದೀಪ್ ಸಿಂಗ್ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ರಾಹುಲ್ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿದರು.
ಲಕ್ನೋ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಮೇಯರ್ಸ್ ಹಾಗೂ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಓವರ್ನಲ್ಲಿ ಮೇಯರ್ಸ್ ಭರ್ಜರಿ ಸಿಕ್ಸರ್ ಬಾರಿಸಿದರು.
ಸ್ಯಾಮ್ ಕರನ್ (ನಾಯಕ), ಅಥರ್ವ್ ತಿಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಜಾ, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಧೋನಿ, ಅವೇಶ್ ಖಾನ್, ಮಾರ್ಕ್ ವುಡ್, ರವಿ ಬಿಷ್ಣೋಯ್.
ಬ್ಯಾಟಿಂಗ್ನಲ್ಲಿ ಕಿಂಗ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರೆ, ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಕನ್ನಡಿಗ ವೈಶಾಕ್ ಪ್ರಮುಖ 3 ವಿಕೆಟ್ ಉರುಳಿಸಿ ಆರ್ಸಿಬಿ ತಂಡದ ಗೆಲುವಿನ ಹೀರೋಗಳೆನಿಸಿಕೊಂಡರು. ಆರ್ಸಿಬಿ ನೀಡಿದ 174 ರನ್ಗಗಳ ಗುರಿ ಬೆನ್ನಟ್ಟಿದ ಡೆಲ್ಲಿ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:02 pm, Sat, 15 April 23