AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs DC Highlights IPL 2023: 3 ವಿಕೆಟ್ ಪಡೆದ ಕನ್ನಡಿಗ ವೈಶಾಕ್; ಡೆಲ್ಲಿಗೆ ಸತತ 5ನೇ ಸೋಲು

Royal Challengers Bangalore vs Delhi Capitals IPL 2023 Highlights in Kannada: ತವರಿನಲ್ಲಿ ಕೊನೆಗೂ ಆರ್​ಸಿಬಿ ಸೋಲಿನ ಸರಪಳಿಯಿಂದ ಹೊರಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕದನದಲ್ಲಿ ಡೆಲ್ಲಿ ತಂಡವನ್ನು 23 ರನ್​ಗಳಿಂದ ಮಣಿಸಿದ ಆರ್​ಸಿಬಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದೆ.

RCB vs DC Highlights IPL 2023: 3 ವಿಕೆಟ್ ಪಡೆದ ಕನ್ನಡಿಗ ವೈಶಾಕ್; ಡೆಲ್ಲಿಗೆ ಸತತ 5ನೇ ಸೋಲು
ಆರ್​ಸಿಬಿ- ಡೆಲ್ಲಿ ಮುಖಾಮುಖಿ
ಪೃಥ್ವಿಶಂಕರ
|

Updated on:Apr 15, 2023 | 7:25 PM

Share

ತವರಿನಲ್ಲಿ ಕೊನೆಗೂ ಆರ್​ಸಿಬಿ ಸೋಲಿನ ಸರಪಳಿಯಿಂದ ಹೊರಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕದನದಲ್ಲಿ ಡೆಲ್ಲಿ ತಂಡವನ್ನು 23 ರನ್​ಗಳಿಂದ ಮಣಿಸಿದ ಆರ್​ಸಿಬಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಕೊಹ್ಲಿಯ ಅರ್ಧಶತಕದ ನೆರವಿನಿಂದ 174 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ತಂಡದ ಪರ ಕನ್ನಡಿಗ ಮನೀಶ್ ಪಾಂಡೆ ಅರ್ಧಶರಕ ಬಾರಿಸಿದ್ದನ್ನು ಬಿಟ್ಡರೆ ಮತ್ತ್ಯಾರು ಪರಿಣಾಮಕಾರಿಯಾಗಲಿಲ್ಲ. ಆರ್​ಸಿಬಿ ಪರ ಮಾರಕ ದಾಳಿ ನಡೆಸಿದ ಕನ್ನಡಿಗ ವೈಶಾಕ್ ವಿಜಯ್​ಕುಮಾರ್ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಡೆಲ್ಲಿ ತಂಡ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 15 Apr 2023 07:00 PM (IST)

    ಅಮನ್ ಔಟ್

    10 ಬಾಲ್​ನಲ್ಲಿ 18 ರನ್ ಗಳಿಸಿದ್ದ ಅಮನ್ ಖಾನ್ ಸಿರಾಜ್ ಓವರ್​ನಲ್ಲಿ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಲಾಂಗ್ ಆನ್​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಔಟಾದರು.

  • 15 Apr 2023 06:58 PM (IST)

    ಅಮನ್ ಬೌಂಡರಿ

    ಹರ್ಷಲ್ ಎಸೆದ 17ನೇ ಓವರ್​ನಲ್ಲಿ ಅಮನ್ ಖಾನ್ ಡೀಪ್ ಕವರ್​ನಲ್ಲಿ ಬೌಂಡರಿ ಬಾರಿಸಿದರು.

  • 15 Apr 2023 06:51 PM (IST)

    ವೈಶಾಕ್ ಅದ್ಭುತ ಬೌಲಿಂಗ್

    ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದಾರೆ. 3ನೇ ವಿಕೆಟ್ ಆಗಿ ಲಲಿತ್ ಯಾದವ್ ಔಟಾದರು. ಡೆಲ್ಲಿ ತಂಡದ 8ನೇ ವಿಕೆಟ್ ಪತನವಾಗಿದೆ.

  • 15 Apr 2023 06:41 PM (IST)

    ಮನೀಶ್ ಔಟ್

    ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಮನೀಶ್ ಹಸರಂಗ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಡೆಲ್ಲಿ 7ನೇ ವಿಕೆಟ್ ಪತನವಾಯಿತು.

  • 15 Apr 2023 06:41 PM (IST)

    ಮನೀಶ್ ಅರ್ಧಶತಕ

    ಹಸರಂಗ ಎಸೆದ 14ನೇ ಓವರ್​ನಲ್ಲಿ 2ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಮನೀಶ್ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

  • 15 Apr 2023 06:33 PM (IST)

    ಅಕ್ಷರ್ ಔಟ್

    13ನೇ ಓವರ್ ಬೌಲ್ ಮಾಡಿದ ಕನ್ನಡಿಗ ವೈಶಾಕ್ ಉಪನಾಯಕ ಅಕ್ಷರ್ ಪಟೇಲ್ ವಿಕೆಟ್ ಉರುಳಿಸಿದ್ದಾರೆ. ಈ ವಿಕೆಟ್ ಮೂಲಕ ಡೆಲ್ಲಿ 6ನೇ ವಿಕೆಟ್ ಕಳೆದುಕೊಂಡಿದೆ.

  • 15 Apr 2023 06:23 PM (IST)

    ಅಕ್ಷರ್ ಫೋರ್

    ಹಸರಂಗ ಎಸೆದ 11ನೇ ಓವರ್​ನಲ್ಲಿ ಅಕ್ಷರ್ ಪಟೇಲ್ 2 ಬೌಂಡರಿ ಬಾರಿಸಿದರು. ಈ ಓವರ್​ನಲ್ಲಿ ಒಟ್ಟು 13 ರನ್ ಬಂದವು.

  • 15 Apr 2023 06:12 PM (IST)

    ಹರ್ಷಲ್​ಗೆ ವಿಕೆಟ್

    9ನೇ ಓವರ್ ಬೌಲ್ ಮಾಡಿದ ಹರ್ಷಲ್ ಪಟೇಲ್ ಅಭಿಷೇಕ್ ಪೊರೆಲ್ ವಿಕೆಟ್ ಪಡೆದು. ಈ ಮೂಲಕ ಡೆಲ್ಲಿ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ.

  • 15 Apr 2023 06:07 PM (IST)

    ಹಸರಂಗಗೆ ಬೌಂಡರಿ

    8ನೇ ಓವರ್ ಎಸೆದ ಹಸರಂಗಗೆ ಬೌಂಡರಿ ಸ್ವಾಗತ ಸಿಕ್ಕಿತು. ಓವರ್​ನ ಮೊದಲ ಎಸೆತದಲ್ಲೇ ಮನೀಶ್ ಬೌಂಡರಿ ಬಾರಿಸಿದರು.

  • 15 Apr 2023 05:57 PM (IST)

    ವಾರ್ನರ್ ವಿಕೆಟ್ ಪಡೆದ ಕನ್ನಡಿಗ ವೈಶಾಕ್​

    ಪವರ್ ಪ್ಲೇಯ ಕೊನೆಯ ಓವರ್ ಎಸೆಯಲು ಬಂದ ಕನ್ನಡಿಕ ವೈಶಾಕ್ ವಿಜಯ್ ಕುಮಾರ್ ಡೇಂಜರಸ್ ವಾರ್ನರ್ ವಿಕೆಟ್ ಪಡೆದಿದ್ದಾರೆ.

  • 15 Apr 2023 05:52 PM (IST)

    ಹ್ಯಾಟ್ರಿಕ್ ಬೌಂಡರಿ

    ಸಿರಾಜ್ ಎಸೆದ 5ನೇ ಓವರ್​ನ ಕೊನೆಯ 3 ಎಸೆತಗಳಲ್ಲಿ ವಾರ್ನರ್ 3 ಬೌಂಡರಿ ಬಾರಿಸಿದರು.

  • 15 Apr 2023 05:41 PM (IST)

    3ನೇ ವಿಕೆಟ್ ಪತನ

    ಸಿರಾಜ್ ಎಸೆದ 3ನೇ ಓವರ್ 2ನೇ ಎಸೆತದಲ್ಲಿ ಯಶ್ ದುಲ್ ಎಲ್​ಬಿ ಬಲೆಗೆ ಬಿದ್ದರು. ಡೆಲ್ಲಿ ಕೇವಲ 2 ರನ್​ಗೆ 3 ವಿಕೆಟ್ ಕಳೆದುಕೊಂಡಿದೆ.

  • 15 Apr 2023 05:39 PM (IST)

    ಮಾರ್ಷ್​ ಔಟ್

    ಪೃಥ್ವಿ ಬಳಿಕ ಬಂದಿದ್ದ ಮಿಚೆಲ್ ಮಾರ್ಷ್ ಕೂಡ ಯಾವುದೇ ರನ್ ಗಳಿಸದೆ 2ನೇ ಓವರ್ ಮೊದಲ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 15 Apr 2023 05:38 PM (IST)

    ಮೊದಲ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ವಿಕೆಟ್ ಪತನಗೊಂಡಿದೆ. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಪೃಥ್ವಿ ಶಾ ಅವರನ್ನು 0 ರನ್‌ಗಳಿಗೆ ರನ್ ಔಟ್ ಮಾಡಲಾಗಿದೆ. 1 ಓವರ್‌ನ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 1/1

  • 15 Apr 2023 05:11 PM (IST)

    174 ರನ್ ಟಾರ್ಗೆಟ್

    ನಿಗದಿತ 20 ಓವರ್​ಗಳಲ್ಲಿ ಆರ್​ಸಿಬಿ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದೆ. ತಂಡದ ಆರಂಭಿಕ ಮೂವರು ಬ್ಯಾಟರ್​ಗಳನ್ನು ಬಿಟ್ಟರೆ, ಮಿಡಲ್ ಆರ್ಡರ್ ಯಾವುದೇ ಪರಿಣಾಮ ಬೀರಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅನುಜ್ ರಾವತ್ ಯಾವುದೇ ಇಂಪ್ಯಾಕ್ಟ್ ಮಾಡಲಿಲ್ಲ.

  • 15 Apr 2023 05:10 PM (IST)

    2 ಬೌಂಡರಿ

    19ನೇ ಓವರ್​ನಲ್ಲಿ ಆರ್​ಸಿಬಿ 2 ಬೌಂಡರಿ ಬಾರಿಸಿತು. ಅನುಜ್ ರಾವತ್ 13 ರನ್ ಹಾಗೂ ಶಹಬಾಜ್ ಅಹ್ಮದ್ 17 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 166/6.

  • 15 Apr 2023 05:05 PM (IST)

    ಅನುಜ್ ಬೌಂಡರಿ

    ನೋಕಿಯಾ ಎಸೆದ 18ನೇ ಓವರ್​ನ ಕೊನೆಯ ಎಸೆತದಲ್ಲಿ ರಾವತ್ ಬೌಂಡರಿ ಬಾರಿಸಿದರು. ಅನುಜ್ ರಾವತ್ 11 ರನ್ ಹಾಗೂ ಶಹಬಾಜ್ ಅಹ್ಮದ್ 7 ರನ್ ಗಳಿಸಿ ಆಡುತ್ತಿದ್ದಾರೆ.18 ಓವರ್‌ಗಳಲ್ಲಿ ಬೆಂಗಳೂರು ಸ್ಕೋರ್ 154/6

  • 15 Apr 2023 05:04 PM (IST)

    ಶಹಬಾಜ್ ಬೌಂಡರಿ

    ಬೆಂಗಳೂರು ತಂಡ ದೊಡ್ಡ ಮೊತ್ತ ಕಲೆ ಹಾಕಲು ಪರದಾಡುತ್ತಿದೆ. 17ನೇ ಓವರ್​ನ ಕೊನೆಯ ಎಸೆತದಲ್ಲಿ ಶಹಬಾಜ್ ಬೌಂಡರಿ ಬಾರಿಸಿದರು. ಸದ್ಯ ಬೆಂಗಳೂರಿನ ಪರ ಅನುಜ್ ರಾವತ್ 4 ಹಾಗೂ ಶಹಬಾಜ್ ಅಹ್ಮದ್ 7 ರನ್ ಗಳಿಸಿ ಆಡುತ್ತಿದ್ದಾರೆ. 17 ಓವರ್‌ಗಳಲ್ಲಿ ಬೆಂಗಳೂರು ಸ್ಕೋರ್ 146/6

  • 15 Apr 2023 05:03 PM (IST)

    15 ಓವರ್‌ ಮುಕ್ತಾಯ

    ಬೆಂಗಳೂರು ತಂಡ ದೊಡ್ಡ ಮೊತ್ತ ಕಲೆ ಹಾಕಲು ಪರದಾಡುತ್ತಿದೆ. ಸದ್ಯ ಬೆಂಗಳೂರಿನ ಪರ ಅನುಜ್ ರಾವತ್ 0 ರನ್ ಹಾಗೂ ಶಹಬಾಜ್ ಅಹ್ಮದ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 15 Apr 2023 04:42 PM (IST)

    ಮ್ಯಾಕ್ಸ್​ವೆಲ್- ಕಾರ್ತಿಕ್ ಔಟ್

    ಹರ್ಷಲ್ ಪಟೇಲ್​ ಬಳಿಕ 15ನೇ ಓವರ್​ನ ಮೊದಲ ಎಸೆತದಲ್ಲಿ ಮ್ಯಾಕ್ಸ್ವೆಲ್ ಔಟಾದರೆ, ಆ ಬಳಿಕ ಬಂದ ದಿನೇಶ್ ಕಾರ್ತಿಕ್ ಕೂಡ ಶೂನ್ಯಕ್ಕೆ ಕ್ಯಾಚಿತ್ತು ಔಟಾದರು.

  • 15 Apr 2023 04:41 PM (IST)

    ಹರ್ಷಲ್ ಪಟೇಲ್ ಔಟ್

    14ನೇ ಓವರ್ ಎಸೆದ ಅಕ್ಷರ್ ಪಟೇಲ್ ಅವರ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.

  • 15 Apr 2023 04:38 PM (IST)

    ಮಹಿಪಾಲ್ ಔಟ್

    ಬೆಂಗಳೂರಿಗೆ ಮೂರನೇ ಹೊಡೆತ ಬಿದ್ದಿದೆ. ಮಹಿಪಾಲ್ ಲೊಮ್ರೋಡ್ ಔಟಾಗಿದ್ದಾರೆ. ಮಿಚೆಲ್ ಮಾರ್ಷ್ ಅವರ ಚೆಂಡನ್ನು ಆಡಲು ಪ್ರಯತ್ನಿಸಿದ ಮಹಿಪಾಲ್, ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಕೈಗೆ ಕ್ಯಾಚಿತ್ತು ಔಟಾದರು.

  • 15 Apr 2023 04:29 PM (IST)

    12 ಓವರ್‌ ಮುಕ್ತಾಯ

    ಮ್ಯಾಕ್ಸ್ ವೆಲ್ 15 ರನ್ ಹಾಗೂ ಮಹಿಪಾಲ್ ಲೊಮ್ರೋರ್ 20 ರನ್ ಗಳಿಸಿ ಆಡುತ್ತಿದ್ದಾರೆ. ಬೆಂಗಳೂರು ತಂಡ ಈಗ ದೊಡ್ಡ ಮೊತ್ತ ಕಲೆ ಹಾಕಬೇಕಿದೆ. 12 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 110/2

  • 15 Apr 2023 04:19 PM (IST)

    ಮ್ಯಾಕ್ಸ್​ವೆಲ್ ಸಿಕ್ಸರ್

    11ನೇ ಓವರ್​ನಲ್ಲಿ 2 ಸಿಕ್ಸರ್ ಬಾರಿಸಿದ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡವನ್ನು ಶತಕದ ಗಡಿ ದಾಟಿಸಿದರು.

  • 15 Apr 2023 04:18 PM (IST)

    ಕೊಹ್ಲಿ ಔಟ್

    33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಇನ್ನಿಂಗ್ಸ್​ನಲ್ಲಿ ಅವರು 1 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದರು.

  • 15 Apr 2023 04:17 PM (IST)

    ಕೊಹ್ಲಿಯ ಅದ್ಭುತ ಅರ್ಧಶತಕ

    10 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 89/1. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 47 ನೇ ಐಪಿಎಲ್ ಮತ್ತು ಸೀಸನ್​ ಮೂರನೇ ಅರ್ಧಶತಕವನ್ನು ಗಳಿಸಿದರು. ಈ ಓವರ್‌ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿತ್ತು.

  • 15 Apr 2023 04:03 PM (IST)

    8ನೇ ಓವರ್ ಅಂತ್ಯ

    ಲಲಿತ್ ಯಾದವ್ ಎಸೆದ 8ನೇ ಓವರ್​ನಲ್ಲಿ ಕೊಹ್ಲಿ 1 ಬೌಂಡರಿ ಬಾರಿಸಿದರು. 8 ಓವರ್ ಅಂತ್ಯಕ್ಕೆ ಆರ್​ಸಿಬಿ 1 ವಿಕೆಟ್ ಕಳೆದುಕೊಂಡು 6 ರನ್ ಪೇರಿಸಿದೆ.

  • 15 Apr 2023 03:54 PM (IST)

    ಪವರ್ ಪ್ಲೇ ಅಂತ್ಯ

    ನಾಯಕ ಫಾಫ್ ಔಟಾದ ಬಳಿಕ ಆರ್​ಸಿಬಿ ಇನ್ನಿಂಗ್ಸ್ ನಿಧಾನಗತಿಯಲ್ಲಿ ಸಾಗುತ್ತಿದೆ. 6ನೇ ಓವರ್​ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಪವರ್ ಪ್ಲೇ ಅಂತ್ಯಕ್ಕೆ ಆರ್​ಸಿಬಿ 1 ವಿಕೆಟ್ ಕಳೆದುಕೊಂಡು 47 ರನ್ ಬಾರಿಸಿದೆ.

  • 15 Apr 2023 03:50 PM (IST)

    ಫಾಫ್ ಔಟ್

    ಮಾರ್ಷ್ ಎಸೆದ 5ನೇ ಓವರ್​ನಲ್ಲಿ 1 ಬೌಂಡರಿ ಬಾರಿಸಿದ ಫಾಫ್, ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 15 Apr 2023 03:44 PM (IST)

    ಅಕ್ಷರ್​ಗೆ ಸಿಕ್ಸರ್

    4ನೇ ಓವರ್​ ಎಸೆದ ಅಕ್ಷರ್​ಗೆ ಫಾಫ್ ಲಾಂಗ್​ ಆನ್​ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಈ ಓವರ್​ನಲ್ಲಿ 7 ರನ್ ಬಂದವು

  • 15 Apr 2023 03:42 PM (IST)

    ಫಾಫ್ ಬೌಂಡರಿ

    2ನೇ ಓವರ್​ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ ಮೂರನೇ ಓವರ್​ನ ಎರಡನೇ ಮತ್ತು 4ನೇ ಎಸೆತದಲ್ಲಿ ಫಾಫ್ ಕೀಪರ್ ಹಿಂದೆ ಬೌಂಡರಿ ಬಾರಿಸಿದರು.

  • 15 Apr 2023 03:33 PM (IST)

    ಆರ್​ಸಿಬಿ ಬ್ಯಾಟಿಂಗ್ ಆರಂಭ

    ಆರ್​ಸಿಬಿ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಕೊಹ್ಲಿ- ಹಾಗೂ ಫಾಫ್ ಬ್ಯಾಟಿಂಗ್​ನಲ್ಲಿದ್ದಾರೆ. ನೋಕಿಯಾ ಎಸೆದ ಮೊದಲ ಓವರ್​ನಲ್ಲಿ ಕೊಹ್ಲಿ 2 ಬೌಂಡರಿ ಬಾರಿಸಿದರು.

  • 15 Apr 2023 03:26 PM (IST)

    ಉಭಯ ತಂಡಗಳು

  • 15 Apr 2023 03:25 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

  • 15 Apr 2023 03:24 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅನ್ರಿಚ್ ನೋಕಿಯಾ, ಮುಸ್ತಾಫಿಜುರ್ ರೆಹಮಾನ್

  • 15 Apr 2023 03:03 PM (IST)

    ಟಾಸ್ ಗೆದ್ದ ಡೆಲ್ಲಿ

    ಟಾಸ್ ಗೆದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.

  • 15 Apr 2023 02:47 PM (IST)

    ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ

    ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳನ್ನು ಆಡಿರುವ ಡೆಲ್ಲಿ ನಾಲ್ಕರಲ್ಲೂ ಸೋಲು ಕಂಡಿದೆ. ಇಂದು ಬೆಂಗಳೂರಿನ ತವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿಗೆ ಗೆಲುವು ಸುಲಭವಲ್ಲ.

Published On - Apr 15,2023 2:45 PM

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ