Maharaja T20 Trophy: ಗುಲ್ಬರ್ಗ vs ಬೆಂಗಳೂರು ನಡುವೆ ಎಲಿಮಿನೇಟರ್ ಪಂದ್ಯ

Maharaja T20 Trophy 2025: ಮಹಾರಾಜ ಟ್ರೋಫಿಯ ಪ್ಲೇಆಫ್ ಸುತ್ತಿಗೆ ನಾಲ್ಕು ತಂಡಗಳು ಪ್ರವೇಶಿಸಿದೆ. ಅದರಂತೆ ನಾಕೌಟ್ ಹಂತದಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆದರೆ, ಹುಬ್ಬಳ್ಳಿ ಟೈಗರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ನಡುವೆ ಮೊದಲ ಕ್ವಾಲಿಫೈಯರ್ ಮ್ಯಾಚ್ ಜರುಗಲಿದೆ.

Maharaja T20 Trophy: ಗುಲ್ಬರ್ಗ vs ಬೆಂಗಳೂರು ನಡುವೆ ಎಲಿಮಿನೇಟರ್ ಪಂದ್ಯ
Gulbarga Mystics Vs Bengaluru Blasters

Updated on: Aug 26, 2025 | 2:19 PM

ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸುವ ಮಹಾರಾಜ ಟ್ರೋಫಿ (Maharaja Trophy 2025) ಟಿ20 ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಆರು ತಂಡಗಳೊಂದಿಗೆ ಶುರುವಾದ ಈ ಟೂರ್ನಿಯಿಂದ ಈಗಾಗಲೇ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳು ಹೊರಬಿದ್ದಿವೆ. ಇನ್ನುಳಿದಿರುವುದು ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಮಂಗಳೂಡು ಡ್ರ್ಯಾಗನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್.

ಈ ನಾಲ್ಕು ತಂಡಗಳು ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದ್ದು, ಪ್ಲೇಆಫ್ ಹಂತದಲ್ಲಿ ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮೈಸೂರಿನ  ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ. ಹಾಗೆಯೇ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಹೀಗಾಗಿ ಇಂದಿನ ಮ್ಯಾಚ್ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಕ್ವಾಲಿಫೈಯರ್​ಗೆ ಸುತ್ತಿಗೆ ಪ್ರವೇಶಿಸುವ ತಂಡ ಯಾವುದೆಂದು ಕಾದು ನೋಡೋಣ.

ಗುಲ್ಬರ್ಗ ಮಿಸ್ಟಿಕ್ಸ್ ತಂಡ: ವಿಜಯಕುಮಾರ್ ವೈಶಾಕ್ (ನಾಯಕ), ಲವ್​ನೀತ್ ಸಿಸೋಡಿಯಾ, ಪ್ರವೀಣ್ ದುಬೆ, ಸ್ಮರಣ್ ಆರ್, ಸಿದ್ಧಾರ್ಥ್ ಕೆವಿ, ಮೊನಿಶ್ ರೆಡ್ಡಿ, ಲವಿಶ್ ಕೌಶಲ್, ಪೃಥ್ವಿರಾಜ್ ಕೆ, ಹರ್ಷವರ್ಧನ್, ಜಾಸ್ಪರ್ ಇಜೆ, ಮೋಹಿತ್ ಬಿಎ, ಫೈಜಾನ್ ರೈಜ್, ಸೌರಬ್ ಎಂ ಮುತ್ತೂರ್, ನಿಕಿನ್ ಜೋಸ್, ಪ್ರಜ್ವಲ್ ಪವನ್, ಯೂನುಸ್ ಅಲಿ ಬೇಗ್, ಲಿಖಿತ್ ಬನ್ನೂರು.

ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!

ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರವಾಲ್ (ನಾಯಕ), ಶುಭಾಂಗ್ ಹೆಗ್ಡೆ , ಸೂರಜ್ ಅಹುಜಾ, ನವೀನ್ ಎಂಜಿ, ಎ ರೋಹನ್ ಪಾಟೀಲ್, ಚೇತನ್ ಎಲ್‌ಆರ್, ಮೊಹ್ಸಿನ್ ಖಾನ್, ಸಿದ್ಧವ್ ಪ್ರಕಾಶ್, ವಿದ್ಯಾಧರ್ ಪಾಟೀಲ್, ಸಿದ್ಧಾರ್ಥ್ ಅಖಿಲ್, ಮಾಧವ್ ಪ್ರಕಾಶ್, ರೋಹನ್ ನವೀನ್, ಕೃತಿಕ್ ಕೃಷ್ಣ, ಅದ್ವಿತ್ ಎಂ ಶೆಟ್ಟಿ, ಭುವನ್ ಮೋಹನ್ ರಾಜು, ರೋಹನ್ ಎಂ ರಾಜು, ನಿರಂಜನ್ ನಾಯಕ್, ಪ್ರತೀಕ್ ಜೈನ್, ಇಶಾನ್ ಎಸ್.

ಎಷ್ಟು ಗಂಟೆಗೆ ಪಂದ್ಯ ಶುರು?

ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವಣ ನಿರ್ಣಾಯಕ ಪಂದ್ಯವು ರಾತ್ರಿ 7.15 ರಿಂದ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್​ನಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್​ ಸ್ಟಾರ್ ಹಾಗೂ ಫ್ಯಾನ್ ಕೋಡ್ ಆ್ಯಪ್ ಮತ್ತು ವೆಬ್​ಸೈಟ್​ಗಳಲ್ಲಿ ನೋಡಬಹುದು.