ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಮೂವರು ಔಟ್
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಸೋತಿರುವ ಆಸ್ಟ್ರೇಲಿಯಾ ತಂಡವು ಅಕ್ಟೋಬರ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ನ್ಯೂಝಿಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 3 ಟಿ20 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಿಗೆ ಕಿವೀಸ್ ತಂಡದ ಪ್ರಮುಖ ಮೂವರು ಆಟಗಾರರು ಅಲಭ್ಯರಾಗಿದ್ದಾರೆ.

ಆಸ್ಟ್ರೇಲಿಯಾ-ನ್ಯೂಝಿಲೆಂಡ್ ನಡುವಣ ಟಿ20 ಸರಣಿಯು ಅಕ್ಟೋಬರ್ 1 ರಿಂದ ಶುರುವಾಗಲಿದೆ. ಈ ಸರಣಿಯಿಂದ ನ್ಯೂಝಿಲೆಂಡ್ನ ಮೂವರು ಆಟಗಾರರು ಹೊರಬಿದ್ದಿದ್ದಾರೆ. ಬೆನ್ನಿನ ನೋವಿನಿಂದ ಬಳಲುತ್ತಿರುವ ಪ್ರಮುಖ ವೇಗಿ ವಿಲಿಯಂ ಒರೋಕ್ ಕನಿಷ್ಠ ಮೂರು ವಾರಗಳ ಕಾಲ ಕ್ರಿಕೆಟ್ ಅಂಗಳದಿಂದ ದೂರ ಉಳಿಯಲಿದ್ದಾರೆ.
ಇನ್ನು ಸ್ಫೋಟಕ ಆರಂಭಿಕ ದಾಂಡಿಗ ಫಿನ್ ಅಲೆನ್ ಅವರ ಬಲಗಾಲಿಗೆ ಗಾಯವಾಗಿದ್ದು, ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ.
ಮತ್ತೊಂದೆಡೆ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ತೊಡೆಸಂದು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಚಿಕಿತ್ಸೆ ಪಡೆಯುತ್ತಿರುವ ಫಿಲಿಪ್ಸ್ ಕೂಡ ಇನ್ನೂ ಒಂದು ತಿಂಗಳ ಕಾಲ ಮೈದಾನಕ್ಕಿಳಿಯಲ್ಲ.
ಅತ್ತ ದಿ ಹಂಡ್ರೆಡ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿದ್ದ ಮಿಚೆಲ್ ಸ್ಯಾಂಟ್ನರ್ ಕೂಡ ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇದೀಗ ವಿಶ್ರಾಂತಿಯಲ್ಲಿರುವ ಸ್ಯಾಂಟ್ನರ್ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ.
ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜೇಕಬ್ಸ್, ಆಡಮ್ ಮಿಲ್ನ್, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ಟಿಮ್ ಸೀಫರ್ಟ್, ಇಶ್ ಸೋಧಿ, ವಿಲಿಯಂ ಒರೋಕ್ (ಅಲಭ್ಯ), ಗ್ಲೆನ್ ಫಿಲಿಪ್ಸ್ (ಅಲಭ್ಯ), ಫಿನ್ ಅಲೆನ್ (ಅಲಭ್ಯ).
ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಕ್ಸೇವಿಯರ್ ಬಾರ್ಟ್ಲೆಟ್, ಜೋಶ್ ಇಂಗ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಮ್ಯಾಟ್ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚ್ ಓವನ್, ಮ್ಯಾಥ್ಯೂ ಶಾರ್ಟ್, ಆ್ಯಡಂ ಝಂಪಾ.
ನ್ಯೂಝಿಲೆಂಡ್ vs ಆಸ್ಟ್ರೇಲಿಯಾ ನಡುವ ಟಿ20 ಸರಣಿ ವೇಳಾಪಟ್ಟಿ:
- ಮೊದಲ ಟಿ20 ಪಂದ್ಯ, ಬೇ ಓವಲ್, ಬುಧವಾರ, 1 ಅಕ್ಟೋಬರ್ 2025, 19:15
- ಎರಡನೇ ಟಿ20 ಪಂದ್ಯ, ಬೇ ಓವಲ್, ಶುಕ್ರವಾರ, 3 ಅಕ್ಟೋಬರ್ 2025, 19:15
- ಮೂರನೇ ಟಿ20 ಪಂದ್ಯ, ಬೇ ಓವಲ್, ಶನಿವಾರ, 4 ಅಕ್ಟೋಬರ್ 2025, 19:15
ಈ ಸರಣಿಯ ಎಲ್ಲಾ ಪಂದ್ಯಗಳು ನ್ಯೂಝಿಲೆಂಡ್ನ ಮೌಂಟ್ ಮೌಂಗನುಯಿನಲ್ಲಿರುವ ಬೇ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
