MI vs RCB Highlights IPL 2023: ಸತ್ವ ಇಲ್ಲದ ಬೌಲಿಂಗ್; ಮುಂಬೈಗೆ ಸುಲಭ ತುತ್ತಾದ ಆರ್​ಸಿಬಿ

|

Updated on: May 09, 2023 | 11:19 PM

Mumbai Indians vs Royal Challengers Bangalore IPL 2023 Highlights in Kannada: ಐಪಿಎಲ್​ನ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಲೀಗ್​​ನಲ್ಲಿ 6ನೇ ಗೆಲುವು ದಾಖಲಿಸಿದೆ.

MI vs RCB Highlights IPL 2023: ಸತ್ವ ಇಲ್ಲದ ಬೌಲಿಂಗ್; ಮುಂಬೈಗೆ ಸುಲಭ ತುತ್ತಾದ ಆರ್​ಸಿಬಿ

ಐಪಿಎಲ್​ನ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಲೀಗ್​​ನಲ್ಲಿ 6ನೇ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ವಾಂಖೆಡೆಯಲ್ಲಿ ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕಗಳ ನೆರವಿನಿಂದ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಸೂರ್ಯ ಹಾಗೂ ವದೇರಾ ಅವರ ಸ್ಫೋಟಕ ಜೊತೆಯಾಟದಿಂದಾಗಿ 17ನೇ ಓವರ್​ನಲ್ಲೇ ಗೆಲುವಿನ ದಡ ಸೇರಿತು.

LIVE NEWS & UPDATES

The liveblog has ended.
  • 09 May 2023 11:13 PM (IST)

    ನಾಲ್ಕನೇ ವಿಕೆಟ್ ಪತನ

    ಟಿಮ್ ಡೇವಿಡ್ (0) ಮೊದಲ ಎಸೆತದಲ್ಲೇ ಔಟಾದರು. ಸೂರ್ಯ ನಂತರ ಕ್ರೀಸ್​ಗೆ ಬಂದ ಡೇವಿಡ್ ಕೂಡ ವಿಜಯಕುಮಾರ್ ವೈಶಾಕ್ ಓವರ್​ನಲ್ಲಿ ಪೆವಿಲಿಯನ್​ಗೆ ಮರಳಬೇಕಾಯಿತು.

  • 09 May 2023 11:04 PM (IST)

    ಸೂರ್ಯ ಔಟ್

    ಕೇವಲ 35 ಎಸೆತಗಳಲ್ಲಿ 83 ರನ್ ಬಾರಿಸಿದ್ದ ಸೂರ್ಯ 16ನೇ ಓವರ್​​ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ ಕ್ಯಾಚಿತ್ತು ಔಟಾದರು.


  • 09 May 2023 10:59 PM (IST)

    21 ರನ್ ಕೊಟ್ಟ ಹಸರಂಗ

    15ನೇ ಓವರ್​​ನಲ್ಲಿ ಹಸರಂಗ 21 ರನ್ ಬಿಟ್ಟುಕೊಟ್ಟರು. ಇದರಲ್ಲಿ ಸೂರ್ಯ 2 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರೆ, ವದೇರಾ ಕೂಡ ಬೌಂಡರಿ ಹೊಡೆದರು.

  • 09 May 2023 10:55 PM (IST)

    ಸೂರ್ಯಕುಮಾರ್ ಅರ್ಧಶತಕ

    ಸಿರಾಜ್ ಬೌಲ್ ಮಾಡಿದ 14ನೇ ಓವರ್​ನಲ್ಲಿ 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ ಸೂರ್ಯ ತಮ್ಮ ಅರ್ಧಶತಕ ಪೂರೈಸಿದರು.

  • 09 May 2023 10:50 PM (IST)

    ಹರ್ಷಲ್ ಮತ್ತೆ ದುಬಾರಿ

    13ನೇ ಓವರ್ ಬೌಲ್ ಮಾಡಿದ ಹರ್ಷಲ್ 1 ನೋ ಬಾಲ್ ಸೇರಿದಂತೆ 17 ರನ್ ಬಿಟ್ಟುಕೊಟ್ಟರು. ಈ ಓವರ್​ನಲ್ಲಿ 3 ಬೌಂಡರಿ ಬಂದವು.

  • 09 May 2023 10:39 PM (IST)

    ಹಸರಂಗಗೆ 2 ಸಿಕ್ಸ್

    11ನೇ ಓವರ್ ಬೌಲ್ ಮಾಡಿದ ಹಸರಂಗ 2 ಸಿಕ್ಸರ್ ನೀಡಿದರು. ಇದರೊಂದಿಗೆ ಮುಂಬೈ ತಂಡ ಶತಕ ಪೂರೈಸಿದರೆ, ವದೇರಾ ಹಾಗೂ ಸೂರ್ಯ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿದೆ.

  • 09 May 2023 10:35 PM (IST)

    10 ಓವರ್ ಅಂತ್ಯ

    10ನೇ ಓವರ್ ಎಸೆದ ಹರ್ಷಲ್ ಬೌಂಡರಿ ಸೇರಿದಂತೆ 8 ರನ್ ಬಿಟ್ಟುಕೊಟ್ಟರು.

  • 09 May 2023 10:32 PM (IST)

    ವೈಶಾಕ್​​ಗೆ ಬೌಂಡರಿ

    ವೈಶಾಕ್ ಬೌಲ್ ಮಾಡಿದ 8ನೇ ಓವರ್​ನ 2ನೇ ಎಸೆತವನ್ನು ಸೂರ್ಯ ಪಾಯಿಂಟ್​ನಲ್ಲಿ ಬೌಂಡರಿಗಟ್ಟಿದರು.

  • 09 May 2023 10:31 PM (IST)

    ಹರ್ಷಲ್ ದುಬಾರಿ

    ಹರ್ಷಲ್ ಎಸೆದ 7ನೇ ಓವರ್​​ನಲ್ಲಿ 2 ಬೌಂಡರಿ ಜೊತೆಗೆ 12 ರನ್ ಬಂದವು

  • 09 May 2023 10:16 PM (IST)

    ವದೇರಾ ಸಿಕ್ಸ್, ಪವರ್ ಪ್ಲೇ ಅಂತ್ಯ

    ವೈಶಾಕ್ ಬೌಲ್ ಮಾಡಿದ 6ನೇ ಓವರ್​​ನಲ್ಲಿ ವದೇರಾ ಡೀಪ್ ಸ್ಕ್ವೇರ್​ ಲೆಗ್​​ನಲ್ಲಿ ಸಿಕ್ಸರ್ ಬಾರಿಸಿದರು.

  • 09 May 2023 10:15 PM (IST)

    ರೋಹಿತ್ ಶರ್ಮಾ ಔಟ್

    ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (7) ಕೂಡ ಔಟಾದ ಬಳಿಕ ಮರಳಿದ್ದಾರೆ. ಹಸರಂಗ ಇಬ್ಬರೂ ಆರಂಭಿಕರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದರು.

  • 09 May 2023 10:09 PM (IST)

    ಮೊದಲ ವಿಕೆಟ್ ಪತನ

    ಮುಂಬೈಗೆ ಮೊದಲ ಹೊಡೆತ ಬಿದ್ದಿದ್ದು, ಇಶಾನ್ ಕಿಶನ್ (42) ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಂಡಿದೆ.

  • 09 May 2023 10:04 PM (IST)

    50 ರನ್ ಪೂರ್ಣ

    ಮುಂಬೈ ಸ್ಫೋಟಕ ಆರಂಭವನ್ನು ಮಾಡಿದ್ದು ಐದನೇ ಓವರ್‌ನಲ್ಲಿಯೇ 50 ರನ್ ಪೂರೈಸಿದೆ. ವನಿಂದು ಹಸರಂಗ ಅವರ ಓವರ್‌ನಲ್ಲಿ ಇಶಾನ್ ಕಿಶನ್ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು.

  • 09 May 2023 09:53 PM (IST)

    ಕಿಶನ್ ಸಿಕ್ಸರ್

    ಸಿರಾಜ್ ಬೌಲ್ ಮಾಡಿದ 3ನೇ ಓವರ್​ನ 4 ಮತ್ತು 5ನೇ ಎಸೆತದಲ್ಲಿ ಕಿಶನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದರು.

  • 09 May 2023 09:49 PM (IST)

    ರೋಹಿತ್ ಬೌಂಡರಿ

    ಹೇಜಲ್​ವುಡ್ ಬೌಲ್ ಮಾಡಿದ 2ನೇ ಓವರ್​ನ ಮೊದಲ ಎಸೆತದಲ್ಲೇ ರೋಹಿತ್ ಬೌಂಡರಿ ಹೊಡೆದರೆ, 5 ಮತ್ತು 6ನೇ ಎಸೆತದಲ್ಲಿ ಕಿಶನ್ ಬೌಂಡರಿ ಬಾರಿಸಿದರು.

  • 09 May 2023 09:44 PM (IST)

    ಮುಂಬೈ ಬ್ಯಾಟಿಂಗ್ ಆರಂಭ

    ಮುಂಬೈ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೈದಾನಕ್ಕೆ ಬಂದಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಇಶಾನ್ ಬೌಂಡರಿ ಬಾರಿಸಿದರು.

  • 09 May 2023 09:24 PM (IST)

    200 ರನ್ ಟಾರ್ಗೆಟ್

    20ನೇ ಓವರ್​ನಲ್ಲಿ ಕೇವಲ 6 ರನ್ ಬಂದವು. ಅಂತಿಮವಾಗಿ ಆರ್​ಸಿಬಿ ತಂಡ 6 ವಿಕೆಟ್ ಕಳೆದುಕೊಂಡು 199 ರನ್ ಬಾರಿಸಿದೆ.

  • 09 May 2023 09:17 PM (IST)

    ಹಸರಂಗ ಬೌಂಡರಿ

    19ನೇ ಓವರ್​ನಲ್ಲಿ ಡಿಕೆ ವಿಕೆಟ್ ಬಳಿಕ ಬಂದ ಹಸರಂಗ ಓವರ್​​ನಲ್ಲಿ 2 ಬೌಂಡರಿ ಬಾರಿಸಿದರು.

    ಈ ಓವರ್​​ನಲ್ಲಿ 8 ರನ್ ಬಂದವು.

  • 09 May 2023 09:15 PM (IST)

    ಡಿಕೆ ಔಟ್

    19ನೇ ಓವರ್ ಬೌಲ್ ಮಾಡಿದ ಜೋರ್ಡಾನ್ ಮೊದಲ ಎಸೆತದಲ್ಲೇ ಡಿಕೆ ವಿಕೆಟ್ ಉರುಳಿಸಿದರು

    ಡಿಕೆ 18 ಎಸೆತದಲ್ಲಿ 30 ರನ್ ಬಾರಿಸಿದರು.

    ಆರ್​ಸಿಬಿ 6ನೇ ವಿಕೆಟ್ ಪತನ

  • 09 May 2023 09:11 PM (IST)

    ಡಿಕೆ ಸಿಕ್ಸರ್

    ಕಾರ್ತಿಕೇಯ ಬೌಲ್ ಮಾಡಿದ 18ನೇ ಓವರ್​​ನಲ್ಲಿ 2 ಬೌಂಡರಿ 1 ಸಿಕ್ಸರ್ ಬಂದವು

    ಈ 3 ಬೌಂಡರಿಗಳು ಡಿಕೆ ಬ್ಯಾಟ್​ನಿಂದ ಬಂದವು

    ಈ ಓವರ್​​ನಲ್ಲಿ 15 ರನ್ ಬಂತು.

  • 09 May 2023 09:06 PM (IST)

    ಡಿಕೆಗೆ ಜೀವದಾನ

    17ನೇ ಓವರ್​ನ 3ನೇ ಎಸೆತದಲ್ಲಿ ಡಿಕೆ ಎಕ್ಸ್​ಟ್ರಾ ಕವರ್​​ನಲ್ಲಿ ಬೌಂಡರಿ ಬಾರಿಸಿದರು.

    ಈ ಓವರ್​ನಲ್ಲಿ ಡಿಕೆಗೆ ಜೀವದಾನವೂ ಸಿಕ್ಕಿತು

    ಗ್ರೀನ್ ಸುಲಭ ಕ್ಯಾಚ್ ಕೈಚೆಲ್ಲಿದರು.

  • 09 May 2023 08:59 PM (IST)

    ಡಿಕೆ ಬೌಂಡರಿ

    ಕಾರ್ತಿಕೇಯ ಬೌಲ್ ಮಾಡಿದ 16ನೇ ಓವರ್​ನ ಮೊದಲ ಎಸೆತದಲ್ಲಿ ಡಿಕೆ ಡೀಪ್ ಮಿಡ್ ವಿಕೆಟ್​ನಲ್ಲಿ ಬೌಂಡರಿ ಬಾರಿಸಿದರು.

  • 09 May 2023 08:54 PM (IST)

    ಫಾಫ್ ಕೂಡ ಔಟ್

    41 ಎಸೆತಗಳಲ್ಲಿ 65 ರನ್ ಬಾರಿಸಿದ್ದ ಫಾಫ್ ಶಾರ್ಟ್​ ಫೈನ್ ಲೆಗ್​ನಲ್ಲಿ ಕ್ಯಾಚಿತ್ತು ಔಟಾದರು.

  • 09 May 2023 08:52 PM (IST)

    ಲೊಮ್ರೋರ್ ಔಟ್

    14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಹಿಪಾಲ ಕ್ಲೀನ್ ಬೌಲ್ಡ್ ಆದರು.

    ಕೇವಲ 1 ರನ್ ಗಳಿಸಿದ ನಂತರ ಮಹಿಪಾಲ್ ಮರಳಿದರು.

  • 09 May 2023 08:37 PM (IST)

    ಮ್ಯಾಕ್ಸ್​ವೆಲ್ ಔಟ್

    68 ರನ್ ಸಿಡಿಸಿ ಮ್ಯಾಕ್ಸ್​ವೆಲ್ ಔಟ್

    ಜೇಸನ್ ಬೌಲಿಂಗ್​ನಲ್ಲಿ ನಿರ್ಗಮಿಸಿದ ಮ್ಯಾಕ್ಸಿ

    ಆರ್​ಸಿಬಿ: 136-3 (12.3 ಓವರ್)

  • 09 May 2023 08:27 PM (IST)

    ಫಾಫ್ ಅರ್ಧಶತಕ

    30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್

    ಫಾಫ್ ಕಡೆಯಿಂದ 5 ಫೋರ್, 2 ಸಿಕ್ಸ್ ಬಂದಿದೆ

    10.4 ಓವರ್ ಅಂತ್ಯಕ್ಕೆ ಆರ್​ಸಿಬಿ: 112-2

  • 09 May 2023 08:17 PM (IST)

    ಮ್ಯಾಕ್ಸ್​ವೆಲ್ ಅರ್ಧಶತಕ

    ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್

    ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮ್ಯಾಕ್ಸಿ

    ಮ್ಯಾಕ್ಸ್​ವೆಲ್ ಕಡೆಯಿಂದ 6 ಫೋರ್, 4 ಸಿಕ್ಸರ್

    9.2 ಓವರ್ ಅಂತ್ಯಕ್ಕೆ ಆರ್​ಸಿಬಿ: 92-2

  • 09 May 2023 08:07 PM (IST)

    ಅರ್ಧಶತಕದ ಜೊತೆಯಾಟ

    ಮ್ಯಾಕ್ಸ್​ವೆಲ್-ಫಾಫ್ ಅರ್ಧಶತಕದ ಜೊತೆಯಾಟ

    7ನೇ ಓವರ್​ ಕ್ರಿಸ್ ಜಾರ್ಡನ್ ಬೌಲಿಂಗ್​ನಲ್ಲಿ 2 ಸಿಕ್ಸ್

    ಮೊದಲ ಮತ್ತು 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್

    7 ಓವರ್ ಅಂತ್ಯಕ್ಕೆ ಆರ್​ಸಿಬಿ: 72-2

  • 09 May 2023 08:00 PM (IST)

    6ನೇ ಓವರ್​ನಲ್ಲಿ 12 ರನ್ಸ್

    6ನೇ ಓವರ್​ನ ಪಿಯೂಷ್ ಚಾವ್ಲಾ ಬೌಲಿಂಗ್​ನಲ್ಲಿ 12 ರನ್ಸ್

    ಮ್ಯಾಕ್ಸ್​ವೆಲ್​ರಿಂದ ಮೊದಲ ಎಸೆತದಲ್ಲಿ ಸಿಕ್ಸ್

    ಎರಡನೇ ಎಸೆತದಲ್ಲಿ ಫೋರ್

    6 ಓವರ್ ಅಂತ್ಯಕ್ಕೆ ಆರ್​ಸಿಬಿ: 56-2

  • 09 May 2023 07:56 PM (IST)

    ಫಾಫ್-ಮ್ಯಾಕ್ಸಿ ಜೊತೆಯಾಟ

    ಆರ್​ಸಿಬಿ ತಂಡಕ್ಕೆ ಫಾಫ್-ಮ್ಯಾಕ್ಸ್​ವೆಲ್ ಆಸರೆ

    ಕೊಹ್ಲಿ-ರಾವತ್ ನಿರ್ಗಮನದ ಬಳಿಕ ಫಾಫ್-ಮ್ಯಾಕ್ಸಿ ಜೊತೆಯಾಟ

    5ನೇ ಓವರ್​ನ ಜೇಸನ್ ಅವರ ಕೊನೆಯ ಎಸೆತದಲ್ಲಿ ಫಾಫ್​ರಿಂದ ಭರ್ಜರಿ ಸಿಕ್ಸ್

    5 ಓವರ್ ಅಂತ್ಯಕ್ಕೆ ಆರ್​ಸಿಬಿ:45-2

  • 09 May 2023 07:53 PM (IST)

    ಕೊಹ್ಲಿ-ರಾವತ್ ಔಟ್

    ಆರ್​ಸಿಬಿಗೆ ಆರಂಭದಲ್ಲೇ ದೊಡ್ಡ ಆಘಾತ ಉಂಟಾಗಿದೆ

    ವಿರಾಟ್ ಕೊಹ್ಲಿ (1) ಹಾಗೂ ಅನುಜ್ ರಾವತ್ (6) ಔಟಾಗಿದ್ದಾರೆ

    4.3 ಓವರ್ ಅಂತ್ಯಕ್ಕೆ ಆರ್​ಸಿಬಿ: 34-2

  • 09 May 2023 07:06 PM (IST)

    ಆರ್​ಸಿಬಿ ಮೊದಲು ಬ್ಯಾಟಿಂಗ್

    ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - 6:58 pm, Tue, 9 May 23

Follow us on