Mohammad Rizwan: ಕೊಹ್ಲಿ-ರಾಹುಲ್ ಸಾಧನೆ ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಮೊಹಮ್ಮದ್ ರಿಜ್ವಾನ್

Pakistan vs England: ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲೂ ಅಬ್ಬರಿಸಿದ ಮೊಹಮ್ಮದ್ ರಿಜ್ವಾನ್ 46 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 63 ರನ್ ಚಚ್ಚಿದರು. ಇದರ ಜೊತೆಗೆ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ ಯಾರೂ ಮಾಡಿರುವ ವಿಶೇಷ ದಾಖಲೆ ಕೂಡ ನಿರ್ಮಿಸಿದ್ದಾರೆ.

Mohammad Rizwan: ಕೊಹ್ಲಿ-ರಾಹುಲ್ ಸಾಧನೆ ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಮೊಹಮ್ಮದ್ ರಿಜ್ವಾನ್
Mohammad Rizwan
Edited By:

Updated on: Sep 30, 2022 | 7:53 AM

ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾಟೂರ್ನಿ ಹತ್ತಿರವಾಗುತ್ತಿದೆ ಎಂಬೊತ್ತಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಸದ್ಯ ಸಾಗುತ್ತಿರುವ ಇಂಗ್ಲೆಂಡ್ (PAK vs ENG) ವಿರುದ್ಧದ ಏಳು ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದ ಮುನ್ನಡೆ ಪಡೆದುಕೊಂಡಿದೆ. ತಂಡದ ಸ್ಟಾರ್ ಬ್ಯಾಟರ್ ಹಾಗೂ ಐಸಿಸಿ ಟಿ20 ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಮೊಹಮ್ಮದ್ ರಿಜ್ವಾನ್ (Mohammad Rizwan) ಭರ್ಜರಿ ಫಾರ್ಮ್​ನಲ್ಲಿದ್ದು ರನ್ ಮಳೆಯನ್ನೇ ಸುರಿಸುತ್ತಿದ್ದಾರೆ. ಐದನೇ ಟಿ20 ಪಂದ್ಯದಲ್ಲೂ ಅಬ್ಬರಿಸಿದ ರಿಜ್ವಾನ್ 46 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 63 ರನ್ ಚಚ್ಚಿದರು. ಇದರ ಜೊತೆಗೆ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ ಯಾರೂ ಮಾಡಿರುವ ವಿಶೇಷ ದಾಖಲೆ ಕೂಡ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಳು ಪಂದ್ಯಗಳ ಟಿ20 ಸರಣಿ ಪೈಕಿ ಸದ್ಯಕ್ಕೆ ಐದು ಪಂದ್ಯಗಳು ಮುಕ್ತಾಯಗೊಂಡಿದೆ. ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ರಿಜ್ವಾನ್ ಬ್ಯಾಟ್​ನಿಂದ ಅರ್ಧಶತಕ ಬಂದಿದೆ. ಮೊದಲ ಪಂದ್ಯದಲ್ಲಿ 68 ರನ್ ಗಳಿಸಿದ್ದ ಅವರು ಎರಡನೇ ಪಂದ್ಯದಲ್ಲಿ ಅಜೇಯ 88 ರನ್ ಬಾರಿಸಿದ್ದರು. ನಂತರ ಮೂರನೇ ಪಂದ್ಯದಲ್ಲಿ 8 ರನ್, ನಾಲ್ಕನೇ ಪಂದ್ಯದಲ್ಲಿ 88 ರನ್ ಹಾಗೂ ಐದನೇ ಪಂದ್ಯದಲ್ಲಿ 63 ರನ್ ಗಳಿಸಿದ್ದಾರೆ. ಇವರು ಐದು ಪಂದ್ಯಗಳಲ್ಲಿ 315 ರನ್ ಕಲೆಹಾಕಿದ್ದಾರೆ. ಈ ಮೂಲಕ ದ್ವಿಪಕ್ಷೀಯ ಸರಣಿಯಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿದ್ದಾರೆ.

ರಿಜ್ವಾನ್ ಸರಣಿಯಲ್ಲಿ ಅತ್ಯಧಿಕ ರನ್ ದಾಖಲಿಸುವ ಹಾದಿಯಲ್ಲಿ ಸರ್ಬಿಯಾದ ಲೆಸ್ಲಿ ಡನ್‌ಬಾರ್ ಅವರನ್ನು ಹಿಂದಿಕ್ಕಿದರು. ಡನ್ಬಾರ್ ಬಲ್ಗೇರಿಯಾ ತಂಡದ ವಿರುದ್ಧ 4 ಇನ್ನಿಂಗ್ಸ್‌ಗಳಲ್ಲಿ 284 ರನ್ ಗಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರ ಹೆಸರಲ್ಲಿತ್ತು. ಇವರು 5 ಇನ್ನಿಂಗ್ಸ್‌ಗಳಲ್ಲಿ 255 ರನ್ ಗಳಿಸಿದ್ದರು. ಅಲ್ಲದೆ 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 210 ರನ್ ಗಳಿಸಿದ್ದರು.ನಂತರದ ಸ್ಥಾನದಲ್ಲಿ 234 ರನ್ ಗಳಿಸಿ ಪಾಲ್ ಸ್ಟಿರ್ಲಿಂಗ್ (ಐದು ಇನ್ನಿಂಗ್ಸ್), 233 ರನ್ ಗಳಿಸಿ ಫ್ರಾನ್ಸಿಸ್ಕೊ ​​ಕುವಾನಾ (ಏಳು ಇನ್ನಿಂಗ್ಸ್), 231 ರನ್ ಗಳಿಸಿ ವಿರಾಟ್ ಕೊಹ್ಲಿ (ಐದು ಇನ್ನಿಂಗ್ಸ್) ಹಾಗೂ 224 ರನ್ ಕಲೆಹಾಕಿ ಕೆಎಲ್ ರಾಹುಲ್ (ಐದು ಇನ್ನಿಂಗ್ಸ್) ಇದ್ದಾರೆ.

ಇದನ್ನೂ ಓದಿ
National Games 2022: 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
380 ಪಂದ್ಯಗಳಲ್ಲಿ ಒಮ್ಮೆಯೂ ಎಲ್​ಬಿಡಬ್ಲ್ಯೂ ಔಟಾಗದೆ ಕ್ರಿಕೆಟ್​ಗೆ ವಿದಾಯ ಹೇಳಿದ ಆಸೀಸ್ ಕ್ರಿಕೆಟರ್..!
T20 World Cup 2022: ಟಿ20 ವಿಶ್ವಕಪ್‌ನಲ್ಲಿ ಗೇಮ್ ಚೇಂಜರ್ ಆಗಲಿರುವ ಐವರು ಸ್ಪಿನ್ನರ್‌ಗಳಿವರು
Rohit Sharma: ನಾಯಕತ್ವದಲ್ಲಿ ಧೋನಿಯನ್ನೇ ಹಿಂದಿಕ್ಕಿ ಹೊಸ ಇತಿಹಾಸ ಬರೆದ ರೋಹಿತ್ ಶರ್ಮಾ

ನಸೀಮ್ ಶಾಗೆ ಕೊರೊನಾ:

ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್ ವರದಿಯಲ್ಲಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ನಸೀಮ್ ಶಾ ಹೊರಗುಳಿದಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ನಸೀಮ್ ಅವರನ್ನು ಈ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ನ್ಯುಮೋನಿಯಾ ಸೋಂಕಿಗೆ ಒಳಗಾಗಿದ್ದರು. ಇದಾದ ನಂತರ ಅವರ ಕೋವಿಡ್ ವರದಿ ಕೂಡ ಪಾಸಿಟಿವ್ ಎಂದು ಕಂಡುಬಂದಿದೆ ನಸೀಮ್ ತಂಡದ ಹೋಟೆಲ್‌ಗೆ ಮರಳಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದ್ದು, ಅಲ್ಲಿ ಅವರು ಕೋವಿಡ್ -19 ಗೆ ಸಂಬಂಧಿಸಿದ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ ಎಂದು ಮಂಡಳಿ ಹೇಳಿಕೆ ನೀಡಿದೆ. ಮುಂದಿನ ವಾರ ಆರಂಭವಾಗಲಿರುವ ನ್ಯೂಜಿಲೆಂಡ್ ಪ್ರವಾಸದಲ್ಲಿ ನಸೀಮ್ ಶಾ ತಂಡದೊಂದಿಗೆ ಇರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪಿಸಿಬಿ ಸ್ಪಷ್ಟಪಡಿಸಿಲ್ಲ.

Published On - 7:53 am, Fri, 30 September 22