- Kannada News Photo gallery Cricket photos Australian cricketer Michael Hogan wraps up his career at 41
380 ಪಂದ್ಯಗಳಲ್ಲಿ ಒಮ್ಮೆಯೂ ಎಲ್‌ಬಿಡಬ್ಲ್ಯೂ ಔಟಾಗದೆ ಕ್ರಿಕೆಟ್‌ಗೆ ವಿದಾಯ ಹೇಳಿದ ಆಸೀಸ್ ಕ್ರಿಕೆಟರ್..!
ಮೈಕೆಲ್ ಹೊಗನ್ 380 ವೃತ್ತಿಪರ ಪಂದ್ಯಗಳನ್ನು ಆಡಿದ್ದು, ಅವರ ಖಾತೆಯಲ್ಲಿ 930 ವಿಕೆಟ್‌ಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ 4 ಅರ್ಧ ಶತಕಗಳನ್ನು ಬಾರಿಸಿರುವ ಹೂಗನ್, ತನ್ನ ಇಡೀ ವೃತ್ತಿಜೀವನದಲ್ಲಿ ಎಂದಿಗೂ ಎಲ್‌ಬಿಡಬ್ಲ್ಯೂ ಔಟಾಗಿಲ್ಲ.
Updated on:Sep 29, 2022 | 9:04 PM

ಗ್ಲಾಮೊರ್ಗಾನ್ ತಂಡದ ವೇಗದ ಬೌಲರ್ ಮೈಕೆಲ್ ಹೊಗನ್ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನ್ಯೂ ಸೌತ್ ವೇಲ್ಸ್‌ನಲ್ಲಿ ಜನಿಸಿದ ಈ 41 ವರ್ಷದ ಆಟಗಾರ ತಮ್ಮ ವೃತ್ತಿಜೀವನವನ್ನು ಇಂಗ್ಲಿಷ್ ಕೌಂಟಿ ತಂಡ ಗ್ಲಾಮೊರ್ಗಾನ್ ಪರ ಹೆಚ್ಚಾಗಿ ಕಳೆದರು. ಈ ತಂಡದ ಪರ ಅನೇಕ ದಾಖಲೆಗಳನ್ನು ಮಾಡಿರುವ ಹೊಗನ್ ಒಮ್ಮೆಯೂ ಎಲ್‌ಬಿಡಬ್ಲ್ಯೂ ಔಟ್ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಮೈಕೆಲ್ ಹೊಗನ್ 380 ವೃತ್ತಿಪರ ಪಂದ್ಯಗಳನ್ನು ಆಡಿದ್ದು, ಅವರ ಖಾತೆಯಲ್ಲಿ 930 ವಿಕೆಟ್‌ಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ 4 ಅರ್ಧ ಶತಕಗಳನ್ನು ಬಾರಿಸಿರುವ ಹೂಗನ್, ತನ್ನ ಇಡೀ ವೃತ್ತಿಜೀವನದಲ್ಲಿ ಎಂದಿಗೂ ಎಲ್‌ಬಿಡಬ್ಲ್ಯೂ ಔಟಾಗಿಲ್ಲ.

ಮೈಕೆಲ್ ಹೊಗನ್ 28 ನೇ ವಯಸ್ಸಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಪರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಕೊನೆಯದಾಗಿ 2016 ರಲ್ಲಿ ಆಸ್ಟ್ರೇಲಿಯಾ ಪರ ಆಡಿದ ಹೂಗನ್, ನಂತರ ಇಂಗ್ಲಿಷ್ ಕೌಂಟಿ ತಂಡ ಗ್ಲಾಮೊರ್ಗಾನ್ ಪರ ಆಡಲು ಆರಂಭಿಸಿದರು.

ಮೈಕೆಲ್ ಹೊಗನ್ ಎಲ್ಲಾ ಮೂರು ಸ್ವರೂಪಗಳಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದು, ಈ ಬಲಗೈ ವೇಗದ ಬೌಲರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 679 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ ಲಿಸ್ಟ್ A ನಲ್ಲಿ 118 ವಿಕೆಟ್‌ಗಳನ್ನು ಪಡೆದಿದ್ದರೆ, T20 ನಲ್ಲಿ ಹೊಗನ್ 132 ವಿಕೆಟ್‌ಗಳನ್ನು ಪಡೆದ ದಾಖಲೆ ಮಾಡಿದ್ದಾರೆ.

ಕ್ರಿಕೆಟಿಗನಾಗುವ ಮೊದಲು, ಮೈಕೆಲ್ ಹೋಗನ್ ಟೆಲಿಫೋನ್ ಕೇಬಲ್ ಹಾಕುವ ಕೆಲಸ ಮಾಡುತ್ತಿದ್ದರು ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ. ಆನಂತರ ತನ್ನ ಸಹೋದರನ ಮರಣದ ನಂತರ ಕ್ರಿಕೆಟ್ ಅನ್ನು ಗಂಭೀರವಾಗಿ ತೆಗೆದುಕೊಂಡ ಹೊಗನ್ ಆ ಬಳಿಕ ತಮ್ಮ ವೃತ್ತಿಬದುಕನ್ನು ಇದರಲ್ಲೇ ಆರಂಭಿಸಿದರು.
Published On - 9:04 pm, Thu, 29 September 22



















