ಚಿಕ್ಕಬಳ್ಳಾಪುರದಲ್ಲಿ ಇಂದು ಕ್ರಿಕೆಟ್ ದಿಗ್ಗಜರ ಸಮಾಗಮ: ಸಚಿನ್-ಯುವರಾಜ್ ನಡುವೆ ಟಿ20 ಫೈಟ್

|

Updated on: Jan 18, 2024 | 9:02 AM

One World One Family Cup: ಚಿಕ್ಕಬಳ್ಳಾಪುರದ ಸತ್ಯಸಾಯಿ‌ ಗ್ರಾಮದಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟಿ20 ಕ್ರಿಕೆಟ್ ಸ್ಪರ್ಧೆ ಏರ್ಪಡಿಸಲಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನೇತೃತ್ವದ ತಂಡಗಳ ನಡುವೆ ಈ ಪಂದ್ಯವನ್ನು ಆಯೋಜಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ಪಂದ್ಯದ್ದಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಕ್ರಿಕೆಟ್ ದಿಗ್ಗಜರ ಸಮಾಗಮ: ಸಚಿನ್-ಯುವರಾಜ್ ನಡುವೆ ಟಿ20 ಫೈಟ್
One World One Family Cup
Follow us on

ಚಿಕ್ಕಬಳ್ಳಾಪುರ ಇಂದು ಕ್ರಿಕೆಟ್ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಲಿದೆ. ಮುದ್ದೇನಹಳ್ಳಿಯ ಸತ್ಯಸಾಯಿ‌ ಗ್ರಾಮದಲ್ಲಿ ಟಿ20 ಕ್ರಿಕೆಟ್ (T20 Cricket) ಸ್ಪರ್ಧೆ ಏರ್ಪಡಿಸಲಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಕ್ರೀಡಾಂಗಣದ ಉದ್ಘಾಟನೆ ಪ್ರಯುಕ್ತ ಈ ಟಿ20 ಪಂದ್ಯವನ್ನಯ ಆಯೋಜಿಸಲಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನೇತೃತ್ವದ ತಂಡಗಳ ನಡುವೆ ಈ ಪಂದ್ಯವನ್ನು ಆಯೋಜಿಸಲಾಗಿದ್ದು, ಇದಕ್ಕೆ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಎಂದು ಹೆಸರಿಡಲಾಗಿದೆ.

ಸುನಿಲ್ ಗವಾಸ್ಕರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಡ್ಯಾನಿ ಮೋರಿಸನ್, ಮುತ್ತಯ್ಯ ಮುರಳೀಧರನ್, ಇರ್ಫಾನ್ ಪಠಾನ್, ಮಾಂಟೇ ಪನೇಸರ್, ವೆಂಕಟೇಶ್ ಪ್ರಸಾದ್, ಯೂಸಫ್ ಪಠಾನ್ ಸೇರಿದಂತೆ ಅನೇಕ ವಿಶ್ವ ಕ್ರಿಕೆಟ್ ಆಟಗಾರರು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ರಣರೋಚಕ ಸೂಪರ್ ಓವರ್ ಬಳಿಕ ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಏನು ಹೇಳಿದ್ರು ನೋಡಿ

ಇದನ್ನೂ ಓದಿ
ಬುಮ್ರಾ ಬೌಲಿಂಗ್ ಶೈಲಿಯಲ್ಲಿ ಸಿಕ್ಸರ್ ತಡೆದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ
ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ವಿಶ್ವ ದಾಖಲೆ ಮುರಿದ ಭಾರತ
ರಣರೋಚಕ ಸೂಪರ್ ಓವರ್ ಬಳಿಕ ರೋಹಿತ್ ಏನು ಹೇಳಿದ್ರು ನೋಡಿ
IND vs ENG: ಭಾರತದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಈ ವಿಶೇಷ ಪಂದ್ಯ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. ಆದರೆ, ಪಂದ್ಯವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುವುದಿಲ್ಲ. ಅಭಿಮಾನಿಗಳು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲೈವ್ ವೀಕ್ಷಿಸಬಹುದು. ಅಂತೆಯೆ ಲೈವ್ ಸ್ಟ್ರೀಮಿಂಗ್ ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್‌ನ ಯುಟ್ಯೂಬ್ ಚಾನೆಲ್‌ಗಳಲ್ಲಿಯೂ ಲಭ್ಯವಿರುತ್ತದೆ.

ಒನ್ ಫ್ಯಾಮಿಲಿ ತಂಡ: ಯುವರಾಜ್ ಸಿಂಗ್ (ನಾಯಕ), ಪಾರ್ಥಿವ್ ಪಟೇಲ್, ಮೊಹಮ್ಮದ್ ಕೈಫ್, ಡ್ಯಾರೆನ್ ಮ್ಯಾಡಿ, ಅಲೋಕ್ ಕಪಾಲಿ, ರೋಮೇಶ್ ಕಲುವಿತಾರಣ, ಯೂಸುಫ್ ಪಠಾಣ್, ಜೇಸನ್ ಕ್ರೆಜ್ಜಾ, ಮುತ್ತಯ್ಯ ಮುರಳೀಧರನ್, ಮಖಾಯಾ ಎನ್ಟಿನಿ, ಚಾಮಿಂದಾ ವಾಸ್, ವೆಂಕಟೇಶ್ ಪ್ರಸಾದ್.

ಒನ್ ವರ್ಲ್ಡ್ ತಂಡ: ಸಚಿನ್ ತೆಂಡೂಲ್ಕರ್ (ನಾಯಕ), ನಮನ್ ಓಜಾ, ಉಪುಲ್ ತರಂಗ, ಅಲ್ವಿರೋ ಪೀಟರ್ಸನ್, ಸುಬ್ರಮಣ್ಯಂ ಬದ್ರಿನಾಥ್, ಇರ್ಫಾನ್ ಪಠಾಣ್, ಅಶೋಕ್ ದಿಂಡಾ, ಅಜಂತಾ ಮೆಂಡಿಸ್, ಹರ್ಭಜನ್ ಸಿಂಗ್, ಮಾಂಟಿ ಪನೇಸರ್, ಆರ್‌ಪಿ ಸಿಂಗ್, ಡ್ಯಾನಿ ಮಾರಿಸನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ