
ಪಾಕಿಸ್ತಾನ ಕ್ರಿಕೆಟ್ಗೆ ಸಂಬಂಧಿಸಿದಂತೆ ದಿನಕ್ಕೊಂದು ವಿವಾದಗಳು ಹುಟ್ಟುತ್ತಲೇ ಇರುತ್ತವೆ. ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ಪಾಕ್ ತಂಡದ ಮೇಲೆ ಟೀಕೆಗಳ ಮಳೆ ಸುರಿಸಲಾಗುತ್ತಿದೆ. ಅಭಿಮಾನಿಗಳಿಂದ ಹಿಡಿದು ಮಾಜಿ ಆಟಗಾರರವರೆಗೆ ಎಲ್ಲರೂ ಇಡೀ ತಂಡದ ಬಗ್ಗೆ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ತಂಡದ ಮಾಜಿ ಆಟಗಾರ ರಶೀದ್ ಲತೀಫ್, ಪಾಕ್ ತಂಡದ ಹೆಡ್ ಕೋಚ್ ಮೈಕ್ ಹೆಸನ್ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಪಾಕ್ ತಂಡದ ಈ ಕಳಪೆ ಪ್ರದರ್ಶನಕ್ಕೆ ಕೋಚ್ ಮೇಲೆ ಗೂಬೆ ಕೂರಿಸಿರುವ ರಶೀದ್ ಲತೀಫ್, ಹೆಡ್ ಕೋಚ್ ಮೈಕ್ ಹೆಸನ್ ಭಾರತದ ಏಜೆಂಟ್, ಅವರು ಪಾಕ್ ತಂಡದಲ್ಲಿದ್ದುಕೊಂಡು ಪಾಕ್ ತಂಡವನ್ನು ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅವರು, ತಂಡದ ಹೆಡ್ ಕೋಚ್ ಮೈಕ್ ಹೆಸನ್ ಅವರನ್ನು ಭಾರತೀಯ ಏಜೆಂಟ್ ಎಂದು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. ಡಾ. ನೌಮನ್ ನಿಯಾಜ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ಬಗ್ಗೆ ಮಾತನಾಡಿರುವ ರಶೀದ್ ಲತೀಫ್, ‘ಮೈಕ್ ಹೆಸನ್ ಪಾಕ್ ತಂಡವನ್ನು ಕೂಡಿಕೊಳ್ಳುವ ಮುನ್ನ ಐಪಿಎಲ್‌ನಲ್ಲಿ ಹೆಡ್ ಕೋಚ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಅವರಿಗೆ ಭಾರತದೊಂದಿಗೆ ನಂಟಿದೆ. ಹೇಸನ್ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಇದರ ಆಧಾರದ ಮೇಲೆ, ಅವರನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಪಾಕಿಸ್ತಾನಕ್ಕೆ ಕಳುಹಿಸಿರಬಹುದು. ಹೆಸನ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಾಶಮಾಡಲು ಬಂದಿರುವ ಭಾರತೀಯ ಏಜೆಂಟ್ ಆಗಿರಬಹುದು’ ಎಂದಿದ್ದಾರೆ.
This is a former Pakistani test cricketer (Rashid Latif) calling Mike Hesson an Indian Agent indirectly via an unintelligent word salad. He is such a coward that he uses Dr Nauman Niaz to wiggle out by saying we have no evidence, we're just thinking out loud while he spews his… pic.twitter.com/1X2pGqjSjY
— कुशल मेहरा (@kushal_mehra) September 10, 2026
ಮೈಕ್ ಹೆಸನ್ ವಿರುದ್ಧ ರಶೀದ್ ಲತೀಫ್ ಮಾಡಿರುವ ಆರೋಪಗಳಿಗೆ ಪ್ರಸ್ತುತ ಯಾವುದೇ ಆಧಾರವಿಲ್ಲ. ಇದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಪರಿಣಾಮವಾಗಿ, ಅವರು ‘ಭಾರತೀಯ ಏಜೆಂಟ್’ ಎಂಬ ಪದವನ್ನು ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಪ್ರವಾಸದ ಮಧ್ಯದಲ್ಲಿ ಮೈಕ್ ಹೆಸನ್ ಪಾಕಿಸ್ತಾನ ಟೆಸ್ಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಹೆಸನ್ಗೂ ಮೊದಲು ಸರ್ಫರಾಜ್ ಅಹ್ಮದ್ ಪಾಕ್ ಟೆಸ್ಟ್ ತಂಡದ ಹೆಡ್ ಕೋಚ್ ಆಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಪಾಕ್ ತಂಡ ಹೀನಾಯ ಪ್ರದರ್ಶನ ನೀಡಿದ ಬಳಿಕ ಪಿಸಿಬಿ, ಸರ್ಫರಾಜ್ ಅಹ್ಮದ್ ಬದಲಿಗೆ ಹೆಸನ್ ಅವರನ್ನು ಟೆಸ್ಟ್ ತಂಡದ ತರಬೇತುದಾರರನ್ನಾಗಿ ತರಾತುರಿಯಲ್ಲಿ ನೇಮಿಸಿತು.
Published On - 5:16 pm, Thu, 10 September 26