AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಂಕಿ ದಾಟಲಿಲ್ಲ; ಇಂಗ್ಲೆಂಡ್‌ ನೆಲದಲ್ಲಿ ಹೀನಾಯ ದಾಖಲೆ ಬರೆದ ಪಾಕಿಸ್ತಾನ

ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ನಾಚಿಕೆಗೇಡಿನ ಕುಸಿತ ಕಂಡಿತು. ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪುವಲ್ಲಿ ವಿಫಲರಾದರು, ಇದು ಇಂಗ್ಲೆಂಡ್ ನೆಲದಲ್ಲಿ 140 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ಪಾಕ್ ಎರಡನೇ ಸೆಷನ್‌ನಲ್ಲಿಯೇ ಆಲೌಟ್ ಆಯಿತು, ಇದರಿಂದ ಅಭಿಮಾನಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಒಂದಂಕಿ ದಾಟಲಿಲ್ಲ; ಇಂಗ್ಲೆಂಡ್‌ ನೆಲದಲ್ಲಿ ಹೀನಾಯ ದಾಖಲೆ ಬರೆದ ಪಾಕಿಸ್ತಾನ
ಬಾಬರ್ ಆಝಂ
ಪೃಥ್ವಿಶಂಕರ
|

Updated on: Sep 09, 2026 | 8:40 PM

Share

ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಎರಡನೇ ಸೆಷನ್​ನಲ್ಲಿಯೇ ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಅಂತ್ಯವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಇಂಗ್ಲೆಂಡ್ ಟೆಸ್ಟ್ ಇತಿಹಾಸದಲ್ಲಿ ಇದುವರೆಗೆ ಕಾಣದ ನಾಚಿಕೆಗೇಡಿನ ಟೆಸ್ಟ್ ಕ್ರಿಕೆಟ್ ದಾಖಲೆಯನ್ನು ಬರೆಯಿತು. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಬಾರಿಗೆ, ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ತಲುಪುವಲ್ಲಿ ವಿಫಲವಾದರು.

ಪಾಕಿಸ್ತಾನದ ಅತ್ಯಂತ ನಾಚಿಕೆಗೇಡಿನ ದಾಖಲೆ

ಇಂಗ್ಲೆಂಡ್‌ ವೇಗಿಗಳ ದಾಳಿಗೆ ನಲುಗಿದ ಪಾಕಿಸ್ತಾನ ತಂಡವು ಮೊದಲ ದಿನದಾಟದ ಮೊದಲ ಸೆಷನ್​ನಲ್ಲಿಯೇ ಕೇವಲ 100 ರನ್‌ ಕಲೆಹಾಕಿ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಎರಡನೇ ಸೆಷನ್‌ನಲ್ಲಿಯೇ ಆಲೌಟ್ ಆಯಿತು. ಈ ಪಂದ್ಯಕ್ಕಾಗಿ ಪಾಕ್ ತಂಡ 4 ಬದಲಾವಣೆಗಳನ್ನು ಮಾಡಿತ್ತು. ಆದರೆ ಯಾವ ಬದಲಾವಣೆಯೂ ಪಾಕ್ ತಂಡದ ಕೈ ಹಿಡಿಯಲಿಲ್ಲ. ಆರಂಭಿಕ ಸ್ಯಾಮ್ ಅಯೂಬ್ 10 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರೆ, ಮತ್ತೊಬ್ಬ ಆರಂಭಿಕ ಅಜಾನ್ ಅವೈಸ್ 9 ರನ್ ಗಳಿಗೆ ಸುಸ್ತಾದರು.

ನಂತರ ಅಬ್ದುಲ್ಲಾ ಶಫೀಕ್ ಕೇವಲ ಮೂರು ರನ್ ಗಳಿಸಿ ರಾಬಿನ್ಸನ್ ಬೌಲಿಂಗ್‌ನಲ್ಲಿ ಔಟಾದರು. ಶಾನ್ ಮಸೂದ್ ಐದು ರನ್​ಗಳಿಗೆ ಸುಸ್ತಾದರೆ, ನಾಯಕ ಬಾಬರ್ 18 ಎಸೆತಗಳಲ್ಲಿ ಏಳು ರನ್ ಗಳಿಸಿ ಜೋಶ್ ಟಾಂಗ್ ಅವರ ಅದ್ಭುತ ಇನ್-ಕಟರ್‌ನಿಂದ ಕ್ಲೀನ್ ಬೌಲ್ಡ್ ಆದರು. ಇಂಗ್ಲೆಂಡ್ ನೆಲದಲ್ಲಿ 140 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡದ ಅಗ್ರ ಕ್ರಮಾಂಕವು ಮೊದಲ ಇನ್ನಿಂಗ್ಸ್‌ನಲ್ಲಿ ಒಂದಂಕಿ ದಾಟದಂತೆ ಕುಸಿದು ಬಿದ್ದದ್ದು ಇದೇ ಮೊದಲು.

133 ರನ್​ಗಳಿಗೆ ಆಲೌಟ್

ಅಗ್ರಕ್ರಮಾಂಕದ ಬಳಿಕ ಮಧ್ಯಮ ಕ್ರಮಾಂಕವೂ ತಂಡದ ಕೈ ಹಿಡಿಯಲಿಲ್ಲ. ಆದಾಗ್ಯೂ ಸೌದ್ ಶಕೀಲ್ ತಂಡದ ಪರ ಏಕಾಂಗಿ ಹೋರಾಟ ನಡೆಸಿ 43 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮೊಹಮ್ಮದ್ ಅಬ್ಬಾಸ್ ಮತ್ತು ಮೊಹಮ್ಮದ್ ಅಲಿ ಕೊನೆಯ ವಿಕೆಟ್‌ಗೆ 26 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರಿಂದಾಗಿ ಪಾಕಿಸ್ತಾನ 130 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಸೌದ್, ರಜಾವುಲ್ಲಾ ಮತ್ತು ಅಬ್ಬಾಸ್ ಹೊರತುಪಡಿಸಿ, ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಎರಡಂಕಿಯ ಮೊತ್ತ ತಲುಪಲಿಲ್ಲ. ಇಂಗ್ಲೆಂಡ್ ಪರ ಜೋಶ್ ಟಾಂಗ್ ನಾಲ್ಕು ವಿಕೆಟ್ ಪಡೆದರೆ, ಒಲ್ಲಿ ರಾಬಿನ್ಸನ್ ಮತ್ತು ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದರು.

ಎರಡಂಕಿ ದಾಟಿದ್ದು ಕೇವಲ ಮೂವರು ಮಾತ್ರ; ಇಂಗ್ಲೆಂಡ್‌ ವಿರುದ್ಧ ಮತ್ತೆ ಮುಗ್ಗರಿಸಿದ ಪಾಕಿಸ್ತಾನ

ಪಾಕ್ ತಂಡದ ಮೇಲೆ ಟೀಕೆಗಳ ಮಳೆ

ಪಾಕಿಸ್ತಾನದ ಈ ಅವಮಾನಕರ ಪ್ರದರ್ಶನದ ನಂತರ ಅಭಿಮಾನಿಗಳು ಕೋಪಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಂಡವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಕೂಡ ಅಗ್ರ ಕ್ರಮಾಂಕದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ‘ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಪಾಕಿಸ್ತಾನದ ಅಗ್ರ ಕ್ರಮಾಂಕ ಮತ್ತೊಮ್ಮೆ ಅಂಜುಬುರುಕ ವರ್ತನೆಯನ್ನು ಅಳವಡಿಸಿಕೊಂಡಿದೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್