Pat Cummins: ಪ್ಯಾಟ್ ಕಮಿನ್ಸ್ ಬೆಂಕಿ ಯಾರ್ಕರ್​ಗೆ ಹೆದರಿದ ಒಲೀ ಪೋಪ್ ಕ್ಲೀನ್ ಬೌಲ್ಡ್: ರೋಚಕ ವಿಡಿಯೋ ನೋಡಿ

|

Updated on: Jun 20, 2023 | 11:51 AM

ENG vs AUS, Ashes 2023: ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ 18.2 ಓವರ್​ಗೆ 63 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಅದರಲ್ಲೂ ಕಮಿನ್ಸ್ ಅವರು ಒಲೀ ಪೋಪ್ ವಿಕೆಟ್ ಪಡೆದುಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

Pat Cummins: ಪ್ಯಾಟ್ ಕಮಿನ್ಸ್ ಬೆಂಕಿ ಯಾರ್ಕರ್​ಗೆ ಹೆದರಿದ ಒಲೀ ಪೋಪ್ ಕ್ಲೀನ್ ಬೌಲ್ಡ್: ರೋಚಕ ವಿಡಿಯೋ ನೋಡಿ
Ollie Pope and Pat Cummins
Follow us on

ಬರ್ಮಿಂಗ್‌ಹ್ಯಾಮ್​ನ ಎಜ್‌ಬಾಸ್ಟನ್‌ನಲ್ಲಿ (Edgbaston) ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಆ್ಯಶಸ್ ಟೆಸ್ಟ್ (Ashes Test) ಸರಣಿಯ ಮೊದಲ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂದು ಅಂತಿಮ ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದೆ. ಇತ್ತ ಇಂಗ್ಲೆಂಡ್ ಗೆಲ್ಲಬೇಕಾದರೆ ಆಸೀಸ್​ನ 7 ವಿಕೆಟ್ ಕೀಳಬೇಕಿದೆ, ಅತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ 174 ರನ್ ಕಲೆಹಾಕಬೇಕು. ಹೀಗಾಗಿ ಎಲ್ಲರ ಚಿತ್ತ ಕೊನೆಯ ದಿನದಾಟದ ಮೇಲಿದೆ. ಮೊದಲ ಇನ್ನಿಂಗ್ಸ್​ನ ಪ್ರಥಮ ದಿನವೇ ಡಿಕ್ಲೇರ್ ಘೋಷಿಸಿ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದ ಇಂಗ್ಲೆಡ್ ಇದೀಗ ಸಂಕಷ್ಟಕ್ಕೆ ಸಿಲುಕಿದಂತೆ ಗೋಚರಿಸುತ್ತಿದೆ.

ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಂಗ್ಲರು 273 ರನ್​ಗಳಿಗೆ ಆಲೌಟ್ ಆದರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಗೆಲ್ಲಲು 281 ರನ್​ಗಳ ಟಾರ್ಗೆಟ್ ನೀಡಿತು. ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ 18.2 ಓವರ್​ಗೆ 63 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಅದರಲ್ಲೂ ಕಮಿನ್ಸ್ ಅವರು ಒಲೀ ಪೋಪ್ ವಿಕೆಟ್ ಪಡೆದುಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

ಇದನ್ನೂ ಓದಿ
Arshin Kulkarni: 13 ಎಸೆತಗಳಲ್ಲಿ 78 ರನ್ ಚಚ್ಚಿದ ಅರ್ಶಿನ್: ದಾಖಲೆಗಳೆಲ್ಲ ಧೂಳೀಪಟ, 1 ರನ್​ಗಳ ರೋಚಕ ಜಯ
Zimbabwe vs Nepal: ಜಿಂಬಾಬ್ವೆ ಅಭಿಮಾನಿಗಳಿಗೊಂದು ಸಲಾಂ: ಪಂದ್ಯ ಮುಗಿದ ಬಳಿಕ ಇಡೀ ಸ್ಟೇಡಿಯಂ ಕ್ಲೀನ್ ಮಾಡಿದ ಫ್ಯಾನ್ಸ್
ENG vs AUS, Ashes Test: ತಾನೇ ತೋಡಿದ ಹಳ್ಳಕ್ಕೆ ಬಿದ್ದ ಇಂಗ್ಲೆಂಡ್?: ರೋಚಕ ಘಟ್ಟದತ್ತ ಆ್ಯಶಸ್ ಪ್ರಥಮ ಟೆಸ್ಟ್
India Squad for WI: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಐಪಿಎಲ್​ನ ಈ 5 ಸ್ಟಾರ್ ಪ್ಲೇಯರ್ಸ್ ಆಯ್ಕೆ ಖಚಿತ

ಜೋ ರೂಟ್ ಜೊತೆಗೆ ಅರ್ಧಶತಕದ ಜೊತೆಯಾಟ ಆಡಿ ಕ್ರೀಸ್​ನಲ್ಲಿದ್ದ ಪೋಪ್ ಅವರು ಕಮಿನ್ಸ್ ಅವರ ಇನ್-ಸ್ವಿಂಗ್ ಯಾರ್ಕರ್ ಅನ್ನು ಎದುರಿಸಲಾಗದೆ ಹೀನಾಯವಾಗಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಪೋಪ್ ಆಟ 14 ರನ್​ಗಳಿಗೆ ಅಂತ್ಯವಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಮಿನ್ಸ್ ಅವರ ಈ ಎಸೆತವನ್ನು ಅನೇಕರು ಬಾಲ್ ಆಫ್ ದಿ ಈಯರ್ ಎಂದು ಹೇಳುತ್ತಿದ್ದಾರೆ.

World Cup Qualifiers 2023: 6 ವಿಕೆಟ್ ಕಬಳಿಸಿದ ಹಸರಂಗ: ಶ್ರೀಲಂಕಾಗೆ 175 ರನ್​ಗಳ ಭರ್ಜರಿ ಜಯ

 

ಆಸ್ಟ್ರೇಲಿಯಾ ಗೆಲುವಿಗೆ ಬೇಕು 174 ರನ್:

281 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾನ್ನರು ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿದೆ. ಕೊನೆಯ ಒಂದು ದಿನದಾಟ ಬಾಕಿ ಉಳಿದಿದ್ದು ಇಂಗ್ಲೆಂಡ್ ಗೆಲ್ಲಬೇಕಾದರೆ ಆಸೀಸ್​ನ 7 ವಿಕೆಟ್ ಕೀಳಬೇಕು, ಇತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ 174 ರನ್ ಕಲೆಹಾಕಬೇಕು. ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಉಸ್ಮಾನ್ ಖ್ವಾಜಾ 34 ರನ್ ಗಳಿಸಿ ಹಾಗೂ ಸ್ಕಾಟ್ ಬೋಲಂಡ್ 13 ರನ್ ಬಾರಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮೊದಲು ಬ್ಯಾಟಿಂಗ್​ಗೆ ಬಂದ ಡೇವಿಡ್ ವಾರ್ನರ್ (36), ಮಾರ್ನಸ್ ಲಾಬುಶೇನ್ (16) ಹಾಗೂ ಸ್ಟೀವ್ ಸ್ಮಿತ್ (6) ಬೇಗನೆ ಔಟಾಗಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಚ್ಚರಿ ಎಂಬಂತೆ ಮೊದಲ ದಿನ ಮುಕ್ತಾಯ ಆಗುವ ಮುನ್ನವೇ 78 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಜೋ ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್​ನೊಂದಿಗೆ ಅಜೇಯ 118 ರನ್ ಚಚ್ಚಿದರು. ತನ್ನ ಪ್ರಥಮ ಇನಿಂಗ್ಸ್​​​ ಆರಂಭದಲ್ಲಿ ಆಸೀಸ್ ತೃತೀಯ ದಿನದಾಟದ ಆರಂಭದಲ್ಲಿ 386 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಉಸ್ಮಾನ್ ಖ್ವಾಜಾ 321 ಎಸೆತಗಳಲ್ಲಿ 141 ರನ್ ಗಳಿಸಿದರು. ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 273 ರನ್​ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ 46 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ