
ಮೊಹಾಲಿಯಲ್ಲಿ ನಡೆದ ಐಪಿಎಲ್ನ 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ರನ್ ಚೇಸ್ ಆಯ್ಕೆ ಮಾಡಿಕೊಂಡರು. ಹೀಗಾಗಿ ತವರು ನೆಲದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 214 ರನ್ ಗಳಿಸಿತು. ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಜಿತೇಶ್ ಶರ್ಮಾ ಅವರ
ಶತಕದ ಜೊತೆಯಾಟ ಪಂಜಾಬ್, ಮುಂಬೈ ವಿರುದ್ಧ ಬೃಹತ್ ಮೊತ್ತ ದಾಖಲಿಸಲು ನೆರವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್ ಮತ್ತು ಸೂರ್ಯ ಅವರ ಅದ್ಭುತ ಅರ್ಧಶತಕದಿಂದಾಗಿ ಇನ್ನು 7 ಎಸೆತಗಳಲು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
19ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ತಿಲಕ್ ವರ್ಮಾ ಮುಂಬೈ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
19ನೇ ಓವರ್‌ನ ಮೊದಲ ಎಸೆತದಲ್ಲೇ ಟಿಮ್ ಡೇವಿಡ್ ಬೌಂಡರಿ ಹೊಡೆದರು.
17ನೇ ಓವರ್‌ನ ನಾಲ್ಕನೇ ಮತ್ತು ಅಂತಿಮ ಎಸೆತದಲ್ಲಿ ತಿಲಕ್ ವರ್ಮಾ ಎರಡು ಅದ್ಭುತ ಸಿಕ್ಸರ್ ಬಾರಿಸಿದರು.
ಅರ್ಷದೀಪ್ ಸಿಂಗ್ ಇಶಾನ್ ಕಿಶನ್ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿದ್ದಾರೆ. 17ನೇ ಓವರ್‌ನ ಮೊದಲ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ರಿಷಿ ಧವನ್‌ಗೆ ಕ್ಯಾಚಿತ್ತು ಕಿಶನ್ ನಿರ್ಗಮಿಸಿದರು. ಇದರೊಂದಿಗೆ ಮುಂಬೈ ನಾಲ್ಕನೇ ವಿಕೆಟ್ ಕಳೆದುಕೊಂಡಿತು.
ಇಶಾನ್ ಕಿಶನ್ – 75 ರನ್, 41 ಎಸೆತಗಳು 7×4 4×6
16ನೇ ಓವರ್‌ನ ಮೊದಲ ಎಸೆತದಲ್ಲಿ ದೊಡ್ಡ ವಿಕೆಟ್ ಪಡೆದ ಎಲ್ಲಿಸ್, ಕೊನೆಯ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರು.
ಸೂರ್ಯಕುಮಾರ್ ಯಾದವ್ ಔಟಾಗಿದ್ದಾರೆ. 16ನೇ ಓವರ್‌ನ ಮೊದಲ ಎಸೆತದಲ್ಲಿ ನಾಥನ್ ಎಲ್ಲಿಸ್ ಅವರನ್ನು ಔಟ್ ಮಾಡಿದರು. ಶಾರ್ಟ್ ಥರ್ಡ್‌ಮ್ಯಾನ್‌ನಲ್ಲಿ ಅರ್ಷದೀಪ್ ಅದ್ಭುತ ಕ್ಯಾಚ್ ಹಿಡಿದರು.
ಸೂರ್ಯಕುಮಾರ್ ಯಾದವ್ – 66 ರನ್, 31 ಎಸೆತಗಳು 8×4 2×6
ಮುಂಬೈಗೆ ಮತ್ತೊಂದು ದೊಡ್ಡ ಓವರ್ ಸಿಕ್ಕಿತು. 15ನೇ ಓವರ್‌ನಲ್ಲಿ ಮುಂಬೈಗೆ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಕ್ಕಿತು. ಸೂರ್ಯ ಓವರ್‌ನ ಎರಡನೇ ಎಸೆತವನ್ನು ಬೌಂಡರಿ ಬಾರಿಸಿದರೆ, ಇಶಾನ್ ಕಿಶನ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗಟ್ಟಿದರು. ಹೀಗಾಗಿ ಓವರ್‌ನಲ್ಲಿ 21 ರನ್‌ಗಳು ಬಂದವು.
13ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದರು. ಅವರು 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಇಶಾನ್ ಕಿಶನ್ 12ನೇ ಓವರ್ ನ ಮೊದಲ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು. ಅವರು 29 ಎಸೆತಗಳಲ್ಲಿ 50 ರನ್ ಪೂರೈಸಿದರು.
ಸೂರ್ಯಕುಮಾರ್ ಯಾದವ್ 11ನೇ ಓವರ್‌ನ ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಮುಂಬೈ 100 ರನ್ ಪೂರೈಸಿದರು. ಈ ವೇಳೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಕ್ರೀಸ್ನಲ್ಲಿದ್ದು ವೇಗವಾಗಿ ರನ್ ಗಳಿಸುತ್ತಿದ್ದಾರೆ.
11ನೇ ಓವರ್‌ನ ಎರಡು ಮತ್ತು ಮೂರನೇ ಎಸೆತಗಳಲ್ಲಿ ಸೂರ್ಯ ಕುಮಾರ್ ಬೌಂಡರಿ ಬಾರಿಸಿದರು. ಆ ಬಳಿಕ ಇಶಾನ್ ಕೂಡ ಫೋರ್ ಬಾರಿಸಿದರು. ಹೀಗಾಗಿ ಮುಂಬೈ ಪರ ಓವರ್‌ನಲ್ಲಿ ಮೂರು ಬೌಂಡರಿಗಳು ಬಂದವು.
ಇಶಾನ್ ಕಿಶನ್ 10ನೇ ಓವರ್‌ನ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ ಬೌಂಡರಿ ಕೂಡ ಪಡೆದರು.
9ನೇ ಓವರ್‌ನ ಎರಡನೇ ಎಸೆತದಲ್ಲಿ ಸೂರ್ಯ ಬೌಂಡರಿ ಬಾರಿಸಿದರು. ಚಾಹರ್ ಅವರ ಗೂಗ್ಲಿ ಚೆಂಡನ್ನು ಸ್ವೆಪ್ ಮಾಡಿ ಶಾರ್ಟ್ ಫೈನ್ ಕಡೆಗೆ ಬೌಂಡರಿ ಬಾರಿಸಿದರು.
7ನೇ ಓವರ್‌ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿದರು. ಸೂರ್ಯ ಡೀಪ್ ಮಿಡ್ ವಿಕೆಟ್‌ನಲ್ಲಿ ಬ್ಯಾಕ್ ಫುಟ್‌ನಲ್ಲಿ ಹೋಗಿ ಶಾರ್ಟ್ ಬಾಲ್ ಅನ್ನು ಫೋರ್‌ಗೆ ಹೊಡೆದರು.
ಮುಂಬೈ ಇಂಡಿಯನ್ಸ್ 50 ರನ್ ಪೂರೈಸಿದೆ. ಆರನೇ ಓವರ್‌ನ ಎರಡನೇ ಎಸೆತದಲ್ಲಿ ಸಿಂಗಲ್ ರನ್ ಗಳಿಸಿದ ಇಶಾನ್ ತಂಡದ 50 ರನ್ ಪೂರೈಸಿದರು.
ನಾಥನ್ ಎಲ್ಲಿಸ್ ಪವರ್ ಪ್ಲೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದರು. ಗ್ರೀನ್ ಡೀಪ್ ಮಿಡ್ ವಿಕೆಟ್‌ನಲ್ಲಿ ರಾಹುಲ್ ಚಹಾರ್ ಕೈಗೆ ಕ್ಯಾಚ್ ನಿಡಿದರು.
ಐದನೇ ಓವರ್‌ನ ಮೊದಲ ಬಾಲ್‌ನಲ್ಲಿ, ಇಶಾನ್ ಕಿಶನ್ 98 ಮೀಟರ್‌ಗಳ ಸಿಕ್ಸರ್ ಬಾರಿಸಿದರೆ, ಓವರ್‌ನ ಮೂರನೇ ಎಸೆತದಲ್ಲಿ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸಿದರು. ಕ್ಯಾಮರೂನ್ ಗ್ರೀನ್ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.
ನಾಲ್ಕನೇ ಓವರ್‌ನ ನಾಲ್ಕನೇ ಮತ್ತು ಅಂತಿಮ ಎಸೆತದಲ್ಲಿ ಎರಡು ಅಮೋಘ ಬೌಂಡರಿಗಳನ್ನು ಗಳಿಸುವ ಮೂಲಕ ಕ್ಯಾಮರೂನ್ ಗ್ರೀನ್ ಮುಂಬೈನ ಗಂಭೀರ ಪರಿಸ್ಥಿತಿಯನ್ನು ಸುಗಮಗೊಳಿಸಿದರು.
ಎರಡನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ 3 ಬೌಂಡರಿ ನೀಡಿದರು. 2ನೇ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ ಬೌಂಡರಿ ಬಾರಿಸಿದರೆ, ಇಶಾನ್ ಕಿಶನ್ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು.
ಶಾರ್ಟ್ ಬೌಲ್ ಮಾಡಿದ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಖಾತೆ ತೆರೆತದೆ ವಿಕೆಟ್ ಒಪ್ಪಿಸಿದರು.
20ನೇ ಓವರ್ ಬೌಲ್ ಮಾಡಿದ ಬೌಲ್ ಮಾಡಿದ ಆಕಾಶ್ ಯಾವುದೇ ಬೌಂಡರಿ ನೀಡಲಿಲ್ಲ. ಅಂತಿಮವಾಗಿ ಪಂಜಾಬ್ ತಂಡ 3 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿದೆ.
ಆರ್ಚರ್ ಬೌಲ್ ಮಾಡಿದ 19ನೇ ಓವರ್‌ನ ಮೊದಲ ಮೂರು ಎಸೆತದಲ್ಲಿ ಲಿವಿಂಗ್‌ಸ್ಟನ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಈ ಓವರ್ನಿಂದ 27 ರನ್ ಬಂದವು.
17ನೇ ಓವರ್‌ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಲಿವಿಂಗ್‌ಸ್ಟನ್ ತಮ್ಮ 5ನೇ ಐಪಿಎಲ್ ಅರ್ಧಶತಕ ಪೂರೈಸಿದರು.
17ನೇ ಓವರ್‌ನ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಜಿತೇಶ್ 3ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಈ ಓವರ್‌ನಲ್ಲಿ 14 ರನ್ ಬಂದವು.
ಆರ್ಚರ್ ಬೌಲ್ ಮಾಡಿದ 15ನೇ ಓವರ್‌ನಲ್ಲಿ ಬೌಂಡರಿ ಹೊಡೆದ ವಿಲಿಂಗ್ಸ್ಟನ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಅರ್ಷದ್ ಬೌಲ್ ಮಾಡಿದ 15ನೇ ಓವರ್‌ನ ಮೊದಲೆರಡು ಎಸಡತಗಳನ್ನ ಬೌಂಡರಿಗಟ್ಟಿದ ಲಿವಿಂಗ್‌ಸ್ಟನ್ ಓವರ್‌ನ ಕೊನೆಯ ಎಸೆತದಲ್ಲೂ ಬೌಂಡರಿ ಹೊಡೆದರು.
ಆರ್ಚರ್ ಬೌಲ್ ಮಾಡಿದ 13ನೇ ಓವರ್‌ನಲ್ಲಿ 4 ಬೌಂಡರಿಗಳು ಬಂದವು. ಈ 4 ಬೌಂಡರಿಗಳನ್ನು ಜಿತೇಶ್ ಶರ್ಮಾ ಬಾರಿಸಿದರು.
ವಿಕೆಟ್ ಭೇಟೆ ಆರಂಭಿಸಿರುವ ಚಾವ್ಲಾ 12ನೇ ಓವರ್‌ನ 2ನೇ ಎಸೆತದಲ್ಲಿ ಶಾರ್ಟ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
11ನೇ ಓವರ್‌ನ ಮೊದಲ ಎಸೆತದಲ್ಲಿ ಬೌಲರ್ ತಲೆಯ ಮೇಲೆ ಬೌಂಡರಿ ಹೊಡೆದ ಲಿವಿಂಗ್‌ಸ್ಟನ್ 5ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು.
ಪಂಜಾಬ್ ಇನ್ನಿಂಗ್ಸ್ನ 10 ಓವರ್ ಮುಗಿದಿದ್ದು, ಇದರಲ್ಲಿ ಪಂಜಾಬ್ ತಂಡ 2 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ. 10ನೇ ಓವರ್ನಲ್ಲೂ ಲಿವಂಗ್ಸ್ಟನ್ ಬೌಂಡರಿ ಹೊಡೆದರು.
ಚಾವ್ಲಾ ಬೌಲ್ ಮಾಡಿದ 8ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಧವನ್, ಎರಡನೇ ಎಸೆತದಲ್ಲೂ ಅದೇ ಪ್ರಯತ್ನ ಮಾಡಿ ಸ್ಟಂಪ್ ಔಟ್ ಆದರು.
ಪವರ್ ಪ್ಲೇ ಕೊನೆಯ ಎಸೆತದಲ್ಲಿ ಸಿಂಗಲ್ ಬಾರಿಸಿದ ಶಾರ್ಟ್, ಪಂಜಾಬ್ ಮೊತ್ತವನ್ನು 50ರ ಗಡಿ ದಾಟಿಸಿದರು.
ಪವರ್ ಪ್ಲೇ ಕೊನೆಯ ಓವರ್ ಎಸೆದ ಚಾವ್ಲಾ 10 ರನ್ ಬಿಟ್ಟುಕೊಟ್ಟರು. ಓವರ್‌ನ ಮೊದಲೆರಡು ಎಸೆತಗಳನ್ನು ಧವನ್ ಬೌಂಡರಿಗಟ್ಟಿದರು.
ಪಂಜಾಬ್ನ ಮೊದಲ ವಿಕೆಟ್ ಪತನಗೊಂಡಿದೆ. ಪ್ರಭಾಸಿಮ್ರಾನ್ ಸಿಂಗ್ ಔಟಾಗಿದ್ದಾರೆ. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಅವರು ಇಶಾನ್ ಕಿಶನ್ ಅವರ ಕೈಗೆ ಕ್ಯಾಚ್ ನೀಡಿದರು.
ಪ್ರಭಾಸಿಮ್ರಾನ್ ಸಿಂಗ್ – 9 ರನ್, 7 ಎಸೆತಗಳು 1×4
ಪಂದ್ಯ ಆರಂಭವಾಗಿದೆ. ಶಿಖರ್ ಧವನ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಪ್ರಭಾಸಿಮ್ರಾನ್ ಸಿಂಗ್ ಬಂದಿದ್ದಾರೆ. ಮುಂಬೈ ಪರ ಕ್ಯಾಮರೂನ್ ಗ್ರೀನ್ ಬೌಲಿಂಗ್ ಆರಂಭಿಸುತ್ತಿದ್ದಾರೆ.
ಶಿಖರ್ ಧವನ್, ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ಅರ್ಷದ್ ಖಾನ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಆಕಾಶ್ ಮಂಡ್ವಾಲ್.
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:01 pm, Wed, 3 May 23