- Kannada News Photo gallery Cricket photos IPL 2023: Virat Kohli gifts David Willey's son a signed bat
IPL 2023: RCB ಆಟಗಾರನ ಮಗನಿಗೆ ವಿಶೇಷ ಗಿಫ್ಟ್ ಕಳಿಸಿದ ವಿರಾಟ್ ಕೊಹ್ಲಿ
IPL 2023 Kannada: ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಮೇ 6 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೇರುವ ಇರಾದೆಯಲ್ಲಿದೆ.
Updated on: May 03, 2023 | 9:22 PM

IPL 2023: ಐಪಿಎಲ್ ಸೀಸನ್ 16 ರಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಅಬ್ಬರಿಸಿರುವ ಕಿಂಗ್ ಕೊಹ್ಲಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಪ್ರಮುಖ ಆಲ್ರೌಂಡರ್ ಡೇವಿಡ್ ವಿಲ್ಲಿ ಅಲಭ್ಯರಾಗಿದ್ದಾರೆ. ಬೆರಳಿನ ಗಾಯಕ್ಕೆ ಒಳಗಾಗಿರುವ ವಿಲ್ಲಿ ಐಪಿಎಲ್ನಿಂದ ಹಿಂದೆ ಸರಿದಿದ್ದು, ಈಗಾಗಲೇ ಇಂಗ್ಲೆಂಡ್ಗೆ ಮರಳಿದ್ದಾರೆ.

ಡೇವಿಡ್ ವಿಲ್ಲಿ ಆರ್ಸಿಬಿ ತಂಡವನ್ನು ತೊರೆಯುವ ಮುನ್ನ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿದ್ದರು. ವಿಲ್ಲಿಯ ಮಗ ಕ್ರಿಕೆಟ್ ಸೀಸನ್ ಆರಂಭಿಸುತ್ತಿದ್ದು, ಇದಕ್ಕೆ ಶುಭಕೋರಿ ವಿರಾಟ್ ಕೊಹ್ಲಿ ಸಹಿ ಮಾಡಿರುವ ಬ್ಯಾಟ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಡೇವಿಡ್ ವಿಲ್ಲಿ, ನನ್ನ ಮಗುವಿಗೆ ಸೂಪರ್ ಸ್ಪೆಷಲ್ ಸರ್ಪ್ರೈಸ್. ಅವನು ತನ್ನ ಮೊದಲ ಕ್ರಿಕೆಟ್ ಸೀಸನ್ ಅನ್ನು ಪ್ರಾರಂಭಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ವೈಯುಕ್ತಿಕ ಸಂದೇಶ ಬರೆದು, ಸಹಿ ಮಾಡಿ ಕಳುಹಿಸಿರುವ ವಿರಾಟ್ ಕೊಹ್ಲಿಗೆ ಧನ್ಯವಾದಗಳು ಎಂದು ವಿಲ್ಲಿ ತಿಳಿಸಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ಬೇರೆ ಆಟಗಾರರ ಮಕ್ಕಳಿಗೆ ವಿಶೇಷ ಉಡುಗೊರೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ಡೇವಿಡ್ ವಾರ್ನರ್ ಅವರ ಮಗಳಿಗೆ ಸಹಿ ಮಾಡಿರುವ ಜೆರ್ಸಿ ನೀಡಿ ಗಮನ ಸೆಳೆದಿದ್ದರು.

ಇದೀಗ ಬ್ಯಾಟ್ ಉಡುಗೊರೆ ನೀಡಿ ಡೇವಿಡ್ ವಿಲ್ಲಿಯ ಮಗನ ಹೊಸ ಜರ್ನಿಗೆ ಶುಭ ಹಾರೈಸಿದ್ದಾರೆ.

ಈಗಾಗಲೇ 9 ಪಂದ್ಯಗಳನ್ನಾಡಿರುವ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಮೇ 6 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೇರುವ ಇರಾದೆಯಲ್ಲಿದೆ.
























