- Kannada News Photo gallery Cricket photos IPL 2023: I have come to play in the IPL, not to take abuses: Naveen-ul-Haq
IPL 2023: ನಾನು ಬಂದಿರೋದು ಐಪಿಎಲ್ ಆಡುವುದಕ್ಕೆ, ಬೈಗುಳ ಕೇಳೋಕ್ಕಲ್ಲ: ನವೀನ್ ಉಲ್ ಹಕ್
IPL 2023 Kannada: 17ನೇ ಓವರ್ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಈ ವೇಳೆ ಅಂಪೈರ್ ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು.
Updated on:May 03, 2023 | 10:19 PM

IPL 2023: ಒಂದೇ ಒಂದು ಪಂದ್ಯದ ಮೂಲಕ ನವೀನ್ ಉಲ್ ಹಕ್ ಇದೀಗ ಐಪಿಎಲ್ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಇದಕ್ಕೆ ಕಾರಣ ಆತನ ಪ್ರದರ್ಶನವಲ್ಲ. ಬದಲಾಗಿ ವಿರಾಟ್ ಕೊಹ್ಲಿ ಜೊತೆಗಿನ ಕಿರಿಕ್.

ಹೌದು, ಐಪಿಎಲ್ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್ ಹಕ್ ಹಾಗೂ ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು. ಲಕ್ನೋ ತಂಡದ ಬ್ಯಾಟಿಂಗ್ ವೇಳೆ ಶುರುವಾದ ಈ ಜಗಳವು ಪಂದ್ಯ ಮುಗಿದ ಬಳಿಕವೂ ಮುಂದುವರೆಯಿತು.

ಲಕ್ನೋ ಇನಿಂಗ್ಸ್ನ 17ನೇ ಓವರ್ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಈ ವೇಳೆ ಅಂಪೈರ್ ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು. ಇದೇ ವೇಳೆ ಕಿಂಗ್ ಕೊಹ್ಲಿ ತಮ್ಮ ಶೂ ಧೂಳನ್ನು ನವೀನ್ಗೆ ತೋರಿಸಿ, ಪರೋಕ್ಷವಾಗಿ ಧೂಳಿಗೆ ಸಮ ಎಂದಿದ್ದರು.

ಇತ್ತ ನವೀನ್ ಉಲ್ ಹಕ್ ಕೂಡ ವಿರಾಟ್ ಕೊಹ್ಲಿಯನ್ನು ಗುರಾಯಿಸುತ್ತಾ ದೃಷ್ಟಿಯುದ್ದದಲ್ಲಿ ನಿರತರಾಗಿದ್ದರು. ಅಲ್ಲದೆ ಪಂದ್ಯ ಮುಗಿದ ಬಳಿಕ ಹಸ್ತಲಾಘವ ಮಾಡುವ ವೇಳೆಯೂ ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ವೇಳೆ ನವೀನ್ ಕೊಹ್ಲಿಯ ಕೈಯನ್ನು ಎಳೆದಿದ್ದರು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿ ಗ್ಲೆನ್ ಮ್ಯಾಕ್ಸ್ವೆಲ್ ಪರಿಸ್ಥಿತಿ ತಿಳಿಗೊಳಿಸಿದರು.

ಇದೀಗ ಮೈದಾನದಲ್ಲಿನ ಕಿತ್ತಾಟದ ಬಗ್ಗೆ ನವೀನ್ ಉಲ್ ಹಕ್ ಮಾತನಾಡಿದ್ದಾರೆ. ನಾನು ಬಂದಿರೋದು ಐಪಿಎಲ್ ಆಡುವುದಕ್ಕೆ. ಯಾರ ಬೈಗುಳ ತಿನ್ನುವುದಕಲ್ಲ ಎಂದಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ ನಿಂದಿಸಿರುವುದಕ್ಕೆ ನಾನು ಕೋಪಗೊಂಡಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯನ್ನು ಎದುರು ಹಾಕಿಕೊಂಡಿರುವುದರಿಂದ ಇದೀಗ ಆರ್ಸಿಬಿ ಅಭಿಮಾನಿಗಳು ಅಫ್ಘಾನ್ ಆಟಗಾರ ನವೀನ್ ಉಲ್ ಹಕ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತಿರುಗಿ ಬಿದ್ದಿದ್ದಾರೆ.
Published On - 10:07 pm, Wed, 3 May 23



















