ಐಪಿಎಲ್ 2022 ರಲ್ಲಿ (IPL 2022) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಳಪೆ ಪ್ರದರ್ಶನ ಮತ್ತೆ ಮುಂದುವರೆದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಿಎಸ್ಕೆ (PBKS vs CSK) ಇದೀಗ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಶಿಖರ್ ಧವನ್ (88*ರನ್, 59 ಎಸೆತ, 9 ಬೌಂಡರಿ, 2 ಸಿಕ್ಸರ್) ಏಕಾಂಗಿ ಬ್ಯಾಟಿಂಗ್ ನಿರ್ವಹಣೆ ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ಫಲವಾಗಿ ಪಂಜಾಬ್ ಕಿಂಗ್ಸ್ ರೋಚಕ ಗೆಲುವಿನ ನಗೆ ಬೀರಿತು. ಹಾಲಿ ಚಾಂಪಿಯನ್ನರು 11 ರನ್ಗಳಿಂದ ಸೋತರು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಚೆನ್ನೈ ಟಾರ್ಗೆಟ್ ಬೆನ್ನಟ್ಟುವಲ್ಲಿ ಮತ್ತೆ ಎಡವಿತು. ಪಂಜಾಬ್ 4 ವಿಕೆಟ್ಗೆ 187 ರನ್ ಕಲೆಹಾಕಿದರೆ ಸಿಎಸ್ಕೆ ತಂಡ 6 ವಿಕೆಟ್ಗೆ 176 ರನ್ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ತಂಡದ ಸೋಲಿನ ಬಗ್ಗೆ ಚೆನ್ನೈ ನಾಯಕ ರವೀಂದ್ರ ಜಡೇಜಾ (Ravindra Jadeja) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.
“ನಮ್ಮ ಆರಂಭ ಅತ್ಯುತ್ತಮವಾಗಿತ್ತು. ಹೊಸ ಬಾಲ್ ಮೂಲಕ ಚೆಂಡನ್ನು ಸರಿಯಾದ ಜಾಗದಲ್ಲಿ ಹಾಕಿದೆವು. ಆದರೆ, ಕೊನೆಯ 2-3 ಓವರ್ಗಳಲ್ಲಿ 10-15 ರನ್ಗಳನ್ನು ಹೆಚ್ಚು ಬಿಟ್ಟುಕೊಟ್ಟೆವು. ನಾವು ಯೋಜನೆ ಮಾಡಿಕೊಂಡ ರೀತಿ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ,” ಎಂದು ಹೇಳುವ ಮೂಲಕ ಬೌಲರ್ಗಳು ಸೋಲಿಗೆ ಕಾರಣರಾದರು ಎಂದು ಹೇಳಿದ್ದಾರೆ. “ಅಂಬಟಿ ರಾಯುಡು ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ, ಈಗಾಗಲೇ ಹೇಳಿರುವಂತೆ ಅವರನ್ನು 170 ರನ್ಗಳ ಒಳಗೆ ಕಟ್ಟಿಹಾಕಬೇಕಿತ್ತು,” ಎಂದಿದ್ದಾರೆ.
“ಚೇಸಿಂಗ್ ಮಾಡುವ ವೇಳೆ ಮೊದಲ ಆರು ಓವರ್ನಲ್ಲಿ ನಾವು ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಪವರ್ ಪ್ಲೇನಲ್ಲಿ ನಾವು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲವು ವಿಭಾಗಗಳಲ್ಲಿ ಸುಧಾರಿಸಿ ಇನ್ನಷ್ಟು ಬಲಿಷ್ಠವಾಗಿ ಕಮ್ಬ್ಯಾಕ್ ಮಾಡುತ್ತೇವೆ,” ಎಂದು ರವೀಂದ್ರ ಜಡೇಜಾ ಪಂದ್ಯ ಮುಗಿದ ಬಳಿಕ ಹೇಳಿದ್ದಾರೆ. ಸಿಎಸ್ಕೆ ತನ್ನ ಮುಂದಿನ ಪಂದ್ಯವನ್ನು ಮೇ 1 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
ಗೆದ್ದ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮಾತನಾಡಿ, “ನಮ್ಮ ಬೌಲಿಂಗ್ ಚೆನ್ನಾಗಿತ್ತು. ಅರ್ಶ್ದೀಪ್ ಸಿಂಗ್ ಓವರ್ ಕಠಿಣವಾಗಿತ್ತು. ಅವರು ನಮಗೆ ಸಿಕ್ಕಿದ್ದು ಅದೃಷ್ಟ. ರಾಯುಡು ಹಾಗೂ ರುತುರಾಜ್ ವಿಕೆಟ್ ಕಿತ್ತ ರಬಾಡ ಬೌಲಿಂಗ್ ಕೂಡ ಉತ್ತಮವಾಗಿತ್ತು. ಇವರಿಬ್ಬರು ನಮ್ಮ ಆಸ್ತಿ. ತಂಡವಾಗಿ ನಾವು ಕೆಲ ಯೋಜನೆಗಳನ್ನು ಜಾರಿಗೆ ತಬೇಕಾಗುತ್ತದೆ. ಈ ಗೆಲುವು ಸಂತಸ ತಂದಿದೆ. ಇದೇ ಪ್ರದರ್ಶನವನ್ನು ಮುಂದಿನ ಪಂದ್ಯದಲ್ಲೂ ಮುಂದುವರೆಸುತ್ತೇವೆ. ನಾವು ಸತತವಾಗಿ ಇನ್ನಷ್ಟು ಪಂದ್ಯವನ್ನು ಗೆಲ್ಲಬೇಕಿದೆ,” ಎಂಬುದು ಮಯಾಂಕ್ ಮಾತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಓಪನರ್ ಶಿಖರ್ ಧವನ್ ಅಮೋಘ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತವನ್ನ ಕಲೆಹಾಕಿತು. ಧವನ್ ಹಾಗೂ ರಾಜಪಕ್ಷೆ ಶತಕದ ಜೊತೆಯಾಟವಾಡಿದರು. ಧವನ್ ತನ್ನ 200ನೇ ಐಪಿಎಲ್ ಪಂದ್ಯದಲ್ಲಿ ಸ್ಫೋಟಕ ಆಟವಾಡುವುದುರ ಜೊತೆಗೆ ತಂಡದ ಸ್ಕೋರನ್ನ ಹೆಚ್ಚಿಸಿದರು. 59 ಎಸೆತಗಳಲ್ಲಿ ಅಜೇಯ 88 ರನ್ಪಂಜಾಬ್ 4 ವಿಕೆಟ್ಗೆ 187 ರನ್ ಕಲೆಹಾಕಿದರೆ ಸಿಎಸ್ಕೆ ತಂಡ 6 ವಿಕೆಟ್ಗೆ 176 ರನ್ಗಳಿಸಲಷ್ಟೇ ಶಕ್ತವಾಯಿತು. ಪಂದ್ಯ ಮುಗಿದ ಬಳಿಕ ತಂಡದ ಸೋಲಿನ ಬಗ್ಗೆ ಚೆನ್ನೈ ನಾಯಕ ರವೀಂದ್ರ ಜಡೇಜಾ (Ravindra Jadeja) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ. ಕಲೆಹಾಕಿದರು. ರಾಜಪಕ್ಷ 32 ಎಸೆತಗಳಲ್ಲಿ 42 ರನ್ ಕಲೆಹಾಕಿದರು. 20 ಓವರ್ಗಳಲ್ಲಿ ಪಂಜಾಬ್ ಕಿಂಗ್ಸ್ 187 ರನ್ ಕಲೆಹಾಕಿತು. ಚೆನ್ನೈಗೆ ಆರಂಭ ಉತ್ತಮವಾಗಿರಲಿಲ್ಲ. ಆದರೆ, ರುತುರಾಜ್ ಗಾಯಕ್ವಾಡ್ ಹಾಗೂ ಅಂಬಟಿ ರಾಯುಡು 49 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ರಾಯುಡು 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕೊನೆಯ ಓವರ್ನಲ್ಲಿ ಗೆಲುವಿಗೆ 27 ರನ್ ಬೇಕಾಗಿತ್ತು. ಆದರೆ ಈ ಬಾರಿ ಫಿನಿಶರ್ ಧೋನಿಗೆ (12) ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಸಿಎಸ್ಕೆ 176 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತು.
PBKS vs CSK: ಈ ಬಾರಿ ನಡೆಯಲಿಲ್ಲ ಧೋನಿ ಆಟ: ಐಪಿಎಲ್ 2022 ರಲ್ಲಿ ಸಿಎಸ್ಕೆ ಹಾದಿ ಬಹುತೇಕ ಅಂತ್ಯ